ಕಾರ್ಯ ಯೋಜನೆಗಳು
* ಕೊಡವ ಸಂಸ್ಕೃತಿ, ಶ್ರೀಮಂತ ಪರಂಪರೆ ಮತ್ತು ಸಂಪ್ರದಾಯಗಳ ಸಮಗ್ರ ಸಂಶೋಧನೆ ಮತ್ತು ದಾಖಲೀಕರಣ
* ಕೊಡವ ಮೂಲ, ಸಂಸ್ಕೃತಿ, ಪರಂಪರೆ, ಶಾಸನಗಳು, ಸ್ಮಾರಕಗಳು, ಸಂಪ್ರದಾಯಗಳ ಅಸ್ತಿತ್ವ, ವಿಕಾಸ, ಸ್ಥಿತ್ಯಂತರಗಳ ಪ್ರಾಥಮಿಕ ಸಂಶೋಧನೆ ಮತ್ತು ವಿಶ್ಲೇಷಣೆಗೆ ಸೈದಾಂತಿಕ ಕಾಯಕಲ್ಪ ಮತ್ತು ವಿಧಿ-ವಿಧಾನಗಳನ್ನು ಸಂರಚನೆ.
* ಕೊಡವ ಸಮುದಾಯ ಮತ್ತು ಇತರ ಸಹ-ಸಾಂಸ್ಕೃತಿಕ ಪಾರಿವಾರಿಕ ಸಮುದಾಯಗಳ ಕುಲಶಾಸ್ತ್ರೀಯ ಅಧ್ಯಯನಗಳಿಗೆ ಆದ್ಯತೆ.
* ಕೊಡವ ಭಾಷೆ ಮತ್ತು ದ್ರಾವಿಡ/ದಕ್ಷಿಣ ಭಾರತೀಯ ಭಾಷೆಗಳ ತುಲನಾತ್ಮಕ ಅಧ್ಯಯನಕ್ಕೆ ಉತ್ತೇಜನ ಮತ್ತು ಕೊಡವ ಭಾಷೆಗೆ ಆಂಗ್ಲ ಸೇರಿದಂತೆ ಈ ಭಾಷೆಗಳ ಪ್ರಮುಖ ಕೃತಿಗಳ ಅನುವಾದ/ಭಾಷಾಂತರ
* ಕೊಡವ ಭಾಷೆಗೆ ನಾಡಿನ ಆಡಳಿತ ಭಾಷೆಯ ಮಾನ್ಯತೆಗೆ ಜೀವಂತ ಭಾಷೆಯ ಸಕ್ರಿಯತೆಗೆ ಜ್ಞಾನದ ಪಾಲುದಾರಿಕೆ.
* ಕೊಡವ ಭಾಷೆಗೆ ಸಂವಿಧಾನದ ಎಂಟನೆಯ ಸಂಚಾರದಲ್ಲಿ ಸಾಂವಿಧಾನಿಕ ಮಾನ್ಯತೆ ಪಡೆಯಲು ಜ್ಞಾನದ ಪಾಲುದಾರಿಕೆ.
* ಜಾಗತಿಕ ಮಟ್ಟದ ಸಂಶೋಧನಾ ಚಟುವಟಿಕೆಗಳು, ಪ್ರಕಟಣೆಗಳು ಮತ್ತು ಜನಸಂಪರ್ಕ ಕಾರ್ಯಕ್ರಮಗಳ ಮೂಲಕ ಕೊಡವ ಸಂಸ್ಕೃತಿಯ ಪ್ರಸ್ತುತತೆ ಮತ್ತು ನಿರಂತರತೆಗೆ ಸಹಯೋಗ.
* ಕೊಡವ ಸಂಸ್ಕೃತಿಯನ್ನು ಶಿಕ್ಷಣ, ಅಧ್ಯಯನ ಮತ್ತು ನಿತ್ಯಜೀವನದಲ್ಲಿ ಸಂಯೋಜಿಸುವುದು ಮತ್ತು ತನ್ಮೂಲಕ ಯುವ ಮತ್ತು ಮುಂದಿನ ಪೀಳಿಗೆಯಲ್ಲಿ ಸಂಸ್ಕೃತಿಯ ಬೇರಿನೊಂದಿಗೆ ಸಂಪರ್ಕವನ್ನು ಬೆಳೆಸುವಲ್ಲಿ ಪಾಲುದಾರಿಕೆ.
* ಸಾಹಿತ್ಯ ಪಠ್ಯಗಳ ಗ್ರಂಥಾಲಯ ಮತ್ತು ಡಿಜಿಟಲ್ ಸಂಗ್ರಹವನ್ನು (ಆರ್ಕೈವ್) ಸ್ಥಾಪಿಸುವುದು.