ನವದೆಹಲಿ, ಏ.೧೭: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಎನ್ ಡಿ ಎ ಮೈತ್ರಿ ಕೂಟದ ಆಡಳಿತ ಪಕ್ಷವು ಮಂಡಿಸಿದ್ದ ನೂತನ ಮಹಿಳಾ ಮೀಸಲಾತಿ ಮಸೂದೆಯು ೨/೩ ರಷ್ಟು ನಿಚ್ಚಳ ಬಹುಮತ ಪಡೆಯಲು ವಿಫಲವಾಗಿ ಸೋಲನುಭವಿಸಿದೆ. ನಾರೀ ಶಕ್ತಿ ವಂದನ್ ಅಭಿಯಾನದ ಹೆಸರಿನಲ್ಲಿ ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಲ್ಲಿ ಮುಂದಿನ ಸಾರ್ವತ್ರಿಕ ಚುನಾವಣೆಗಳಲ್ಲಿ ಮಹಿಳೆಯರಿಗೆ ಶೇ. ೩೩ ರಷ್ಟು ಮೀಸಲಾತಿ ಸ್ಥಾನಗಳನ್ನು ಮೀಸಲಿಡುವ ನಿರ್ಣಯದೊಂದಿಗೆ ಈ ಮಸೂದೆ ಮಂಡಿಸಲಾಗಿತ್ತು. ಎನ್ ಡಿ ಎ ನೇತೃತ್ವದ ಈ ಮಸೂದೆಗೆ ಕಾಂಗ್ರೆಸ್ ನೇತೃತ್ವದಲ್ಲಿ ಡಿ.ಎಂ.ಕೆ, ಟಿಂಎAಸಿ ಮೊದಲಾದ ಎಲ್ಲ ವಿರೋಧ ಪಕ್ಷಗಳ “ಇಂಡಿಯಾ” ಮೈತ್ರಿ ಕೂಟ ಸಂಪೂರ್ಣ ವಿರೋಧ ವ್ಯಕ್ತಪಡಿಸಿತು. ಈ ಪ್ರಮುಖ ಐತಿಹಾಸಿಕ ಮಸೂದೆಯ ಪರವಾಗಿ ಎನ್ ಡಿ ಎ ಮೈತ್ರಿ ಕೂಟದ ೨೯೮ ಸದಸ್ಯರು ಮತ ಚಲಾಯಿಸಿದ್ದಾರೆ, ಮಸೂದೆಗಳ ವಿರುದ್ಧವಾಗಿ “ಇಂಡಿಯಾ” ಮೈತ್ರಿ ಕೂಟದ ೨೩೦ ಸದಸ್ಯರು ಮತ ಚಲಾಯಿಸಿದ್ದಾರೆ. ಒಟ್ಟಾರೆ ೫೨೮ ಸದಸ್ಯರು ಮತ ಚಲಾಯಿಸಿದ್ದರು. ಮಸೂದೆ ಅಂಗೀಕಾರಗೊಳ್ಳಲು ೨/೩ ರಷ್ಟು ನಿಚ್ಚಳ ಬಹುಮತವಾದ ೩೫೨ ಸದಸ್ಯರ ಬೆಂಬಲ ಬೇಕಿತ್ತು. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ವಿಧೇಯಕವನ್ನು ಇಂಡಿಯಾ ಕೂಟ ಸೋಲಿಸಿದೆ. ಮಹಿಳಾ ಮೀಸಲಾತಿ ಮಸೂದೆಯನ್ನು ತಿದ್ದುಪಡಿ ಮಾಡುವ ಮಸೂದೆಯು ಶುಕ್ರವಾರ ಲೋಕಸಭೆಯಲ್ಲಿ ಅಂಗೀಕಾರಕ್ಕೆ ಅಗತ್ಯವಾದ ಮತಗಳನ್ನು ಪಡೆಯಲು ವಿಫಲವಾದ ನಂತರ ಬಿದ್ದುಹೋಯಿತು.
ಸಂವಿಧಾನ (೧೩೧ ನೇ ತಿದ್ದುಪಡಿ) ಮಸೂದೆ, ೨೦೨೬ ಅನ್ನು ಅಂಗೀಕರಿಸಲು ಕೇಂದ್ರಕ್ಕೆ ಮೂರನೇ ಎರಡರಷ್ಟು ಬಹುಮತದ ಅಗತ್ಯವಿತ್ತು, ಆದರೆ ಅದು ಗುರಿ ತಲುಪಲು ಸಾಧ್ಯವಾಗಲಿಲ್ಲ. ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ ಮತ್ತು ಲೋಕಸಭೆಯಲ್ಲಿ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸುವ ಮಸೂದೆ ಸೇರಿದಂತೆ ಇತರ ಎರಡು ಮಸೂದೆಗಳನ್ನು ಮೊದಲನೆಯದು ಸೋತ ನಂತರ ಕೇಂದ್ರವು ಮತಕ್ಕೆ ಹಾಕುವ ಪ್ರಕ್ರಿಯೆಯನ್ನು ಕೈ ಬಿಟ್ಟಿತು ಏಕೆಂದರೆ. ಈ ಮಸೂದೆಗಳಿಗೂ ಸಂವಿಧಾನಾತ್ಮಕ ಅಂಗೀಕಾರಕ್ಕೆ ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ನಿಚ್ಚಳ ಬಹುಮತದ ಅಗತ್ಯವಿತ್ತು . ಏಕೆಂದರೆ ಈ ಮಸೂದೆಗಳು ಮಹಿಳಾ ಮೀಸಲಾತಿಗೆ ಸಂಬAಧಿಸಿದ ಶಾಸನಕ್ಕೆ “ಆಂತರಿಕವಾಗಿ ಸಂಬAಧಿಸಿದೆ” ಎಂದು ಕೇಂದ್ರವು ಹೇಳಿದೆ.
ಗುರುವಾರ ಬೆಳಗಿನ ಜಾವ ೧ ಗಂಟೆಯವರೆಗೆ ನಡೆದ ಮತ್ತು ಶುಕ್ರವಾರವೂ ಲೋಕಸಭೆಯಲ್ಲಿ ಮುಂದುವರಿದ ಚರ್ಚೆಯಲ್ಲಿ, ಸಂಸತ್ತಿನ ಲೋಕಸಭೆೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ೩೩% ಸ್ಥಾನಗಳನ್ನು ಕಾಯ್ದಿರಿಸುವಂತೆ ಕೇಂದ್ರವು ಬಲವಾದ ವಾದ ಮಂಡಿಸಿತು. ಸರ್ಕಾರದ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು, ವಿರೋಧ ಪಕ್ಷಗಳ ಪ್ರಮುಖ ಭಯವನ್ನು ನಿವಾರಿಸಲು ಪ್ರಯತ್ನಿಸಿದರು ಮತ್ತು ಲೋಕಸಭೆಯಲ್ಲಿ ಸ್ಥಾನಗಳ ಹೆಚ್ಚಳದಿಂದ ದಕ್ಷಿಣ ರಾಜ್ಯಗಳಿಗೆ ಯಾವುದೇ ಅನ್ಯಾಯವಾಗುವುದಿಲ್ಲ ಎಂದು ತಾವು ವೈಯಕ್ತಿಕವಾಗಿ ಖಾತರಿ ನೀಡುತ್ತಿರುವುದಾಗಿ ಹೇಳಿದರು.
“ಮಹಿಳೆಯರಿಗೆ ಮೀಸಲಾತಿ ನೀಡುವ ಈ ಮಹತ್ವದ ಅವಕಾಶವನ್ನು ನಾವೆಲ್ಲರೂ ಕಳೆದುಕೊಳ್ಳಬಾರದು. ನಾನು ನಿಮಗೆ ಮನವಿ ಮಾಡಲು ಬಂದಿದ್ದೇನೆ - ಇದನ್ನು ರಾಜಕೀಯ ದೃಷ್ಟಿಕೋನದಿಂದ ನೋಡಬೇಡಿ, ಇದು ರಾಷ್ಟ್ರೀಯ ಹಿತಾಸಕ್ತಿಯಲ್ಲಿದೆ” ಎಂದು ಪ್ರಧಾನಿ ಮೋದಿ ಹೇಳಿದರು.
ಲೋಕಸಭೆಯಲ್ಲಿ ಸ್ಥಾನಗಳನ್ನು ಪ್ರಸ್ತುತ ೫೪೩ ರಿಂದ ಸರಿಸುಮಾರು ೮೧೫ - ೮೫೦ ಕ್ಕೆ ಹೆಚ್ಚಿಸಿದ ನಂತರ ದಕ್ಷಿಣ ರಾಜ್ಯಗಳ ಪ್ರಸ್ತುತ ಪ್ರಾತಿನಿಧ್ಯವನ್ನು ಸಂರಕ್ಷಿಸಲಾಗುವುದು ಅಥವಾ ಸ್ವಲ್ಪ ಹೆಚ್ಚಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಎರಡೂ ದಿನಗಳಲ್ಲಿ ಸಂಸತ್ನಲ್ಲಿ ಭರವಸೆ ನೀಡಿದರು.
ಮಸೂದೆಯನ್ನು ವಿರೋಧಿಸಲು ಮತ್ತು ಮಹಿಳೆಯರಿಗೆ ಮೀಸಲಾತಿಯನ್ನು ಕಸಿದುಕೊಳ್ಳಲು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಸಮಸ್ಯೆಗಳನ್ನು ಸೃಷ್ಟಿಸುತ್ತಿವೆ ಎಂದು ಪ್ರಧಾನಿ ಮೋದಿ ಮತ್ತು ಶಾ ಇಬ್ಬರೂ ಆರೋಪಿಸಿದರು. ಮಸೂದೆಯನ್ನು ತಡೆಯುವುದಕ್ಕಾಗಿ ಈ ಪಕ್ಷಗಳು ಬೆಲೆ ತೆರಬೇಕಾಗುತ್ತದೆ ಎಂದು ಬಿಜೆಪಿ ನಾಯಕರು ಹೇಳಿದರು.
ವಿರೋಧ ಪಕ್ಷದ ನಿಲುವು
ಮಸೂದೆಯನ್ನು ಕ್ಷೇತ್ರ ಪುನರ್ವಿಂಗಡಣೆಯೊAದಿಗೆ ಜೋಡಿಸುವುದನ್ನು ವಿರೋಧಿಸಿದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸರ್ಕಾರವು ಮಹಿಳಾ ಮೀಸಲಾತಿಯ ವಿಷಯವನ್ನು ಒಂದು ರೀತಿಯ ಪರದೆಯಂತೆ ಬಳಸುತ್ತಿದೆ ಮತ್ತು ವಾಸ್ತವವಾಗಿ ದೇಶದ ಚುನಾವಣಾ ನಕ್ಷೆಯನ್ನು ತನ್ನ ಪರವಾಗಿ ಮರುರೂಪಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.
“ಇದು ಮಹಿಳಾ ಮಸೂದೆಯಲ್ಲ. ಏಕೆಂದರೆ, ಇದು ಮಹಿಳಾ ಸಬಲೀಕರಣದೊಂದಿಗೆ ಯಾವುದೇ ಸಂಬAಧವನ್ನು ಹೊಂದಿಲ್ಲ. ಈ ಮಸೂದೆಯು ಭಾರತದ ಮಹಿಳೆಯರನ್ನು ಬಳಸಿಕೊಂಡು ಮತ್ತು ಅವರ ಹೆÀಸರಿನಲ್ಲಿ ರಹಸ್ಯವಾಗಿ ದೇಶದ ಚುನಾವಣಾ ನಕ್ಷೆಯನ್ನು ಬದಲಾಯಿಸುವ ಪ್ರಯತ್ನವಾಗಿದೆ” ಎಂದು ಅವರು ಆರೋಪಿಸಿದರು. ಸರ್ಕಾರವು ಜಾತಿ ಜನಗಣತಿಯನ್ನು ಬೈಪಾಸ್ ಮಾಡಲು ಪ್ರಯತ್ನಿಸುತ್ತಿದೆ ಎಂದು ರಾಹುಲ್ ಆರೋಪಿಸಿದರು. “ ಪ್ರಧಾನಿಯವರು ನನ್ನ ಒಬಿಸಿ ಸಹೋದರ ಸಹೋದರಿಯರಿಗೆ ಅಧಿಕಾರ, ಪ್ರಾತಿನಿಧ್ಯವನ್ನು ನೀಡುವುದನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಮತ್ತು ಬದಲಿಗೆ ಅವರಿಂದ ಅಧಿಕಾರವನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ” ಎಂದು ಅವರು ಟೀಕಿಸಿದರು.