ಪೊನ್ನಂಪೇಟೆ, ಏ. ೧೭: ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ಗೋಣಿಕೊಪ್ಪಲು ಕಾವೇರಿ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿರುವ ೩ನೇ ವರ್ಷದ ಟಿ-೨೦ ಮಾದರಿಯ ಕೊಡವ ಲೆದರ್ ಬಾಲ್ ಕ್ರಿಕೆಟ್ ಪ್ರೀಮಿಯರ್ ಲೀಗ್ನ ೮ನೇ ದಿನದಾಟದಲ್ಲಿ ಎಂ.ಟಿ.ಬಿ ರಾಯಲ್ಸ್ ಮತ್ತು ಪ್ರಗತಿ ಕ್ರಿಕೆಟ್ ಅಕಾಡೆಮಿ ಗೆಲುವು ಸಾಧಿಸಿದವು.
ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೂರ್ಗ್ ಯುನೈಟೆಡ್ ೨೦ ಓವರ್ಗಳಲ್ಲಿ ೮ ವಿಕೆಟ್ ಕಳೆದುಕೊಂಡು ೧೨೯ ರನ್ಗಳ ಮೊತ್ತ ಕಲೆಹಾಕಿ, ಎಂ.ಟಿ ಬಿ ರಾಯಲ್ಸ್ಗೆ ೧೩೦ ರನ್ ಗುರಿ ನೀಡಿತು. ಶರತ್ ೪೦ ಎಸೆತಗಳಲ್ಲಿ ೩೧ ರನ್ ಬಾರಿಸಿದರು. ಎಂಟಿಬಿ ರಾಯಲ್ಸ್ ಪರ ಸುಕ್ಕಿ ೩ ವಿಕೆಟ್ ಪಡೆದರು ೧೩೦ ರನ್ ಗುರಿ ಬೆನ್ನಟ್ಟಿದ ಎಂ.ಟಿ.ಬಿ ರಾಯಲ್ಸ್ ೧೯ ಓವರ್ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೧೩೫ ರನ್ ಗಳಿಸಿ ಜಯ ಸಾಧಿಸಿತು. ವೈಶಾಖ್ ತಿಮ್ಮಯ್ಯ ೩೭ ಎಸೆತಗಳಲ್ಲಿ ೪೨ ರನ್ ಬಾರಿಸಿದರು. ಕೂರ್ಗ್ ಯುನೈಟೆಡ್ ಪರ ಪಾಲಂದೀರ ಚಂದ್ರು ೧ ವಿಕೆಟ್ ಪಡೆದರು. ಎಂ.ಟಿ.ಬಿ ರಾಯಲ್ಸ್ ನ ಸುಕ್ಕಿ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದುಕೊಂಡರು. ಬ್ಲೇಜ್ ಬ್ರಿಗೇಡ್ ಮತ್ತು ಪ್ರಗತಿ ಕ್ರಿಕೆಟ್ ಅಕಾಡೆಮಿ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪ್ರಗತಿ ಕ್ರಿಕೆಟ್ ಅಕಾಡೆÀಮಿ ೧೮ ಓವರ್ಗಳಲ್ಲಿ ೧೦ ವಿಕೆಟ್ ನಷ್ಟಕ್ಕೆ ೧೪೭ ರನ್ ಗಳಿಸಿತು. ತಮನ್ ೩೭ ಎಸೆತಗಳಲ್ಲಿ ೫೮ ರನ್ ಗಳಿಸಿದರು. ಬ್ಲೇಜ್ ಬ್ರಿಗೇಡ್ನ ಸ್ಕಂದ್ ೪ ವಿಕೆಟ್ ಪಡೆದು ಮಿಂಚಿದರು. ೧೪೮ ರನ್ ಗುರಿ ಬೆನ್ನಟ್ಟಿದ ಬ್ಲೇಜ್ ಬ್ರಿಗೇಡ್ ಕೇವಲ ೧೮.೨ ಓವರ್ ಗಳಲ್ಲಿ ೧೨೦ ರನ್ ಗಳಿಸಿ ಸರ್ವ ಪತನಗೊಂಡು, ೨೭ ರನ್ನಿಂದ ಸೋಲುಕಂಡಿತು. ಸಂಜು ಬೋಪಯ್ಯ ೩೬ ಎಸೆತಗಳಲ್ಲಿ ೫೩ ರನ್ ಸಿಡಿಸಿದರು. ಪ್ರಗತಿ ಕ್ರಿಕೆಟ್ ಅಕಾಡೆಮಿ ಪರ ಅಕ್ಷರ್ ೩ ವಿಕೆಟ್ ಪಡೆದರು. ಅಲನ್ ದೇವಯ್ಯ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದುಕೊಂಡರು. - ಚನ್ನನಾಯಕ