ಮರಗೋಡು, ಏ.೧೭: ಹೊಸ್ಕೇರಿ ಗ್ರಾಮದ ಶ್ರೀ ವಿಷ್ಣುಮೂರ್ತಿ ಕುಟ್ಟಿಚಾತನ್ ದೇವಾಲಯದ ವಾರ್ಷಿಕ ಮಹಾ ಪೂಜೆ ಸಂಪನ್ನಗೊAಡಿತು.

ತಾ.೧೪ ರಂದು ಚೆರಿಯಮನೆ ಕುಟುಂಬದವರಿAದ ದೇವರ ಬಂಡಾರ ಹಾಕುವ ಪದ್ಧತಿ ಮೂಲಕ್ಧುತ್ಸವ ಪ್ರಾರಂಭವಾಯಿತು.

ಅAದು ರಾತ್ರಿಯಿಂಧ ತಾ.೧೫ರ ಸಂಜೆಯವರೆಗೆ ಕುಟ್ಟಿಚಾತ ದೇವರ ಮಹಾಪೂಜೆಯೊಂದಿಗೆ ವಿಷ್ಣುಮೂರ್ತಿ (ತೋತ) ಕೋಲ, ಕೈಲಾಸನಾಥ ಬೈರವ ಕೋಲ, ಕರಿವಾಳ ಭಗವತಿ ಕೋಲ, ನುಚ್ಚುಟಮ್ಮ ಕೋಲ, ಕುಟ್ಟಿಚಾತನ್ ಹಾಗೂ ಇಶ್ವರಗಣ ಕೋಲಗಳು ನಡೆದವು.

ನೂರಾರು ಭಕ್ತಾದಿಗಳು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಮದ್ಯಾಹ್ನ ಅನ್ನದಾನದ ವ್ಯವಸ್ಥೆಯನ್ನು ದೇವಾಲಯ ಸಮಿತಿಯಿಂದ ಏರ್ಪಡಿಸಲಾಗಿತ್ತು.