*ಗೋಣಿಕೊಪ್ಪ, ಏ. ೧೬: ಮನೆಯ ಹಿತ್ತಲಿನಲ್ಲಿ ಗಾಂಜಾ ಬೆಳೆದ ವ್ಯಕ್ತಿಯನ್ನು ಗೋಣಿಕೊಪ್ಪ ಪೋಲಿಸರು ಬಂದಿಸಿದಾರೆ. ಜೇನು ಕುರುಬರ ಬಸವ (೬೯) ಬಂದಿತ ವ್ಯಕ್ತಿ. ಖಚಿತ ಮಾಹಿತಿ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡ ರೇಷ್ಮೆ ಹಾಡಿಯಲ್ಲಿ ಬಸವ ತನ್ನ ಗುಡಿಸಿಲಿನ ಹಿತ್ತಲಿನಲ್ಲಿ ಗಾಂಜಾ ಗಿಡವನ್ನು ಬೆಳೆಸಿಕೊಂಡಿದ್ದ. ಪೊಲೀಸರ ಕಾರ್ಯಾಚರಣೆಯಲ್ಲಿ ಮೂರು ಗಾಂಜಾ ಗಿಡಗಳು ಪತ್ತೆಯಾಗಿದ್ದು, ಸುಮಾರು ೨ ಕೆ.ಜಿ. ಎಂದು ಅಂದಾಜಿಸಲಾಗಿದೆ. ಗಾಂಜಾ ವ್ಯಸನಿಯಾಗಿರುವ ಬಸವ ತನ್ನ ಸೇವನೆಗಾಗಿ ಗಿಡ ಬೆಳೆಸಿಕೊಂಡಿದ್ದ ಎಂದು ತಿಳಿದು ಬಂದಿದೆ.

ಗೋಣಿಕೊಪ್ಪ ಪೊಲೀಸ್ ಠಾಣಾಧಿಕಾರಿ ಬಿ.ಕೆ ಪ್ರದೀಪ್ ಅವರ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದ್ದು, ಎಸ್‌ಐ ಶ್ರೀನಿವಾಸ್ ಸಿಬ್ಬಂದಿಗಳಾದ ಭರತ್, ಯೋಗೇಶ್, ಲೋಕೇಶ್, ಪ್ರವೀಣ್, ಮಹೇಂದ್ರ, ನೆಹರು, ಸುಬ್ಬಮ್ಮ, ಗಿರಿ ಇದ್ದರು. - ಎನ್.ಎನ್. ದಿನೇಶ್