ಕೋವರ್ ಕೊಲ್ಲಿ ಇಂದ್ರೇಶ್
ನಾಸಿಕ್, ಏ. ೧೬: ದೇಶದ ಕಾರ್ಪೊರೇಟ್ ವಲಯದಲ್ಲೂ ಹೆಣ್ಣುಮಕ್ಕಳಿಗೆ ಲೈಂಗಿಕ ಕಿರುಕುಳ ಹಾಗೂ ಮತಾಂತರಕ್ಕೆ ಪ್ರಯತ್ನ ಪಟ್ಟಿರುವ ಪ್ರಕರಣ ಕಳೆದ ಮಾರ್ಚ್ ತಿಂಗಳ ಕೊನೆ ವಾರದಲ್ಲಿ ಬಯಲಿಗೆ ಬರುತ್ತಿದ್ದಂತೆ ದೇಶವೇ ಬೆಚ್ಚಿಬಿದ್ದಿದೆ. ಅದರಲ್ಲೂ ನಮ್ಮ ಯುವ ಜನಾಂಗ ಇಂದು ಐಟಿಬಿಟಿ ಉದ್ಯಮದ ಕ್ಷಿಪ್ರ ಬೆಳವಣಿಗೆ ಕ್ರಾಂತಿಯ ಕಾರಣದಿಂದ ಕೈ ತುಂಬಾ ಸಂಬಳ ತರುವ ಪ್ರತಿಷ್ಠಿತ ಕಂಪೆನಿಗಳಲ್ಲಿ ಕೆಲಸ ಮಾಡುವುದೇ ಘನತೆ, ಗೌರವ ಹೆಚ್ಚಿಸುತ್ತದೆ ಎಂದು ಅಂತಹ ಉದ್ಯೋಗಕ್ಕಾಗಿ ಹಾತೊರೆಯುತ್ತಿರುವ ಸಮಯದಲ್ಲೇ ಈ ಹಗರಣ ಹೊರಬಿದ್ದಿದ್ದು ಉದ್ಯೋಗ ಸ್ಥಳದ ಮತ್ತೊಂದು ಮಗ್ಗುಲನ್ನೂ ಪರಿಚಯಿಸಿದೆ.
ಅದರಲ್ಲೂ ದೇಶದ ಅತ್ಯಂತ ದೊಡ್ಡ ಐಟಿ ಕಂಪೆನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ನ ನಾಸಿಕ್ ಘಟಕದಲ್ಲಿ ಈ ಪ್ರಕರಣ ವರದಿ ಆಗಿರುವುದು ಕಂಪೆನಿಯ ಪ್ರತಿಷ್ಠೆಗೂ ತೀವ್ರ ಪೆಟ್ಟು ನೀಡಿದೆ. ಈ ವಿಷಯ ಹೊರ ಜಗತ್ತಿಗೆ ಗೊತ್ತಾಗಿದ್ದುದು ಕಳೆದ ಮಾರ್ಚ್ ೨೫ ರಂದು ಕಂಪೆನಿಯ ಮಹಿಳಾ ಉದ್ಯೋಗಿಯೊಬ್ಬರು ತಮ್ಮ ಹಿರಿಯ ಟೀಂ ಮ್ಯಾನೇಜರ್ಗಳು ತಮ್ಮನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಹಾಗೂ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಲು ಒತ್ತಾಯಿಸುತ್ತಿದ್ದಾರೆ ಎಂದು ದೂರು ದಾಖಲಿಸಿದ ಬಳಿಕವೇ ಆಗಿದೆ. ಆದರೆ ಪ್ರಕರಣ ದಾಖಲಾಗುವುದಕ್ಕೂ ಮೊದಲೇ ಪೊಲೀಸ್ ಇಲಾಖೆ ಕಾರ್ಯೋನ್ಮುಖವಾಗಿತ್ತು.
ಬದಲಾದ ಮಹಿಳಾ ಉದ್ಯೋಗಿಯ ಜೀವನ ಶೈಲಿ
ಕಳೆದ ಫೆಬ್ರವರಿಯಲ್ಲಿ ಚಿಂತಿತ ಕುಟುಂಬವೊAದು ಪೋಲೀಸರಿಗೆ ನೀಡಿದ ದೂರಿನೊಂದಿಗೆ ಹಗರಣ ಮೊದಲ ಬಾರಿಗೆ ಪೊಲೀಸರ ಗಮನಕ್ಕೆ ಬಂದಿತು. ನಾಸಿಕ್ನ ಟಿಸಿಎಸ್ ಬಿಪಿಒ ಘಟಕದಲ್ಲಿ ಕೆಲಸ ಮಾಡುತ್ತಿದ್ದ ೨೪ ರ ಹರೆÀಯದ ಯುವತಿಯೊಬ್ಬಳು ತನ್ನ ಜೀವನಶೈಲಿ ಮತ್ತು ಧಾರ್ಮಿಕ ಆಚರಣೆಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ತೋರಿಸಲು ಪ್ರಾರಂಭಿಸಿದಳು. ಆಕೆ ತಲೆಗವಸು ಧರಿಸಲು ಪ್ರಾರಂಭಿಸಿದ್ದು ಅಲ್ಲದೆ ಹಿಂದಿನ ವರ್ಷವೇ ರಂಜಾನ್ ಸಮಯದಲ್ಲಿ ಉಪವಾಸ ಇದ್ದಿದ್ದು ಆಕೆಯ ಕುಟುಂಬವನ್ನು ಕಳವಳಗೊಳಿಸಿತು. ಕೂಡಲೇ ಕುಟುಂಬವು ನಾಸಿಕ್ ನಗರ ಪೋಲೀಸರನ್ನು ಸಂಪರ್ಕಿಸಿತು. ಇದು ಹಿರಿಯ ಅಧಿಕಾರಿಗಳ ಗಮನಕ್ಕೂ ಬಂದಿತು. ಖಡಕ್ ಅಧಿಕಾರಿ ನಾಸಿಕ್ ನಗರ ಪೊಲೀಸ್ ಆಯುಕ್ತ ಸಂದೀಪ್ ಮಿಟ್ಕೆ ಕೂಡಲೇ ಆರೋಪಿಗಳನ್ನು ಬಂಧಿಸಿದರೆ ಸಾಕ್ಷಾö್ಯಧಾರ ಸಿಗುವುದಿಲ್ಲ ಎಂದು ಮನಗಂಡು ಸಂಪೂರ್ಣ ಸಾಕ್ಷ್ಯಾಧಾರ ಸಂಗ್ರಹಿಸಿಯೇ ಎಲ್ಲರ ಹೆಡೆಮುರಿ ಕಟ್ಟಬೇಕೆಂದು ಕಿರಿಯ ಅಧಿಕಾರಿಗಳಿಗೆ ಆದೇಶಿಸಿದರು.
ಹೌಸ್ ಕೀಪಿಂಗ್ ಸಿಬ್ಬಂದಿಗಳಾದ ಮಹಿಳಾ ಪೊಲೀಸರು
ಈ ಆದೇಶದಂತೆ ಫೆಬ್ರವರಿ ಮೊದಲ ವಾರದಲ್ಲೇ ಆಯ್ದ ೬ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ಗಳನ್ನು ೧೪೭ ಉದ್ಯೋಗಿಗಳಿರುವ ನಾಸಿಕ್ ಟಿಸಿಎಸ್ ನಲ್ಲಿ ಮನೆಗೆಲಸದ , ಹೌಸ್ ಕೀಪಿಂಗ್ ಸಿಬ್ಬಂದಿಗಳಾಗಿ ಪ್ರಭಾವ ಬೀರಿ ಸೇರಿಸಲಾಯಿತು. ಅವರು ಆರೋಪಿಗಳ ದೈನಂದಿನ ಸಂವಹನಗಳನ್ನು ಎಚ್ಚರಿಕೆಯಿಂದ ಗಮನಿಸಿ ಹಿರಿಯ ಅಧಿಕಾರಿಗಳಿಗೆ ಪ್ರತಿದಿನ ವರದಿ ಮಾಡಿದರು. ಅವರ ಗುಪ್ತ ಕೆಲಸವು ಕಚೇರಿಯೊಳಗೆ ಏನು ನಡೆಯುತ್ತಿದೆ ಎಂಬುದರ ಸ್ಪಷ್ಟ ಚಿತ್ರಣವನ್ನು ತೋರಿಸಿತು. ಸುಮಾರು ೪೦ ದಿನ ಕೆಲಸ ಮಾಡಿದ ಮಹಿಳಾ ಪೋಲೀಸರು ಆರೋಪಿ ಟೀಂ ಲೀಡರ್ಗಳು ಮಹಿಳಾ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಸ್ಪಷ್ಟ ಸಾಕ್ಷ್ಯ ಸಂಗ್ರಹಿಸಿದರು.
ಮಾರ್ಚ್ ೨೬ ರಂದು ಮೊದಲ ಎಫ್ಐಆರ್
ಮೊದಲ ಸಂತ್ರಸ್ಥೆಯ ದೂರಿನ ಮೇರೆಗೆ ಮಾರ್ಚ್ನಲ್ಲಿ ಡಿಯೋಲಾಲಿ ಪೊಲೀಸ್ ಠಾಣೆಯಲ್ಲಿ ಮೊದಲ ಎಫ್ಐಆರ್ ದಾಖಲಾಗಿತ್ತು. ಅದರಲ್ಲಿ ಸಂತ್ರಸ್ಥೆ ತನ್ನ ಸಹೋದ್ಯೋಗಿ ಡ್ಯಾನಿಶ್ ಶೇಖ್ ಎಂಬ ಟೀಂ ಲೀಡರ್ ಮೇಲೆ ಅತ್ಯಾಚಾರದ ಆರೋಪ ಹೊರಿಸಿ, ಅವನು ಈಗಾಗಲೇ ಮದುವೆಯಾಗಿದ್ದಾನೆ ಮತ್ತು ಮದುವೆಯ ಸುಳ್ಳು ಭರವಸೆಯ ಮೇರೆಗೆ ತನ್ನೊಂದಿಗೆ ಬಲವಂತದ ಸಂಬAಧವನ್ನು ಬೆಳೆಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು. ಅಲ್ಲದೆ ಧಾರ್ಮಿಕ ಭಾವನೆಗಳನ್ನು ನೋಯಿಸುವ ಆರೋಪಗಳನ್ನು ಮಾಡಿದ್ದರು. ತಕ್ಷಣವೇ ಪೊಲೀಸರು ಡ್ಯಾನಿಷ್ನನ್ನು ವಶಕ್ಕೆ ಪಡೆದರು ಈತನ ಸಹವರ್ತಿ ಎರಡನೇ ಆರೋಪಿ ತೌಸಿಫ್ ಅತ್ತರ್ನ ಫೋನ್ ಅನ್ನು ಪರಿಶೀಲಿಸಿದಾಗ, ಮುಸ್ಲಿಂ ಉಡುಪು ಧರಿಸಿರುವ ಮತ್ತೊಬ್ಬ ಹಿಂದೂ ಪುರುಷ ಉದ್ಯೋಗಿಯ ಚಿತ್ರಗಳು ಕಂಡುಬAದವು.
ಎಸ್ಐಟಿ ರಚನೆ , ೯ ಎಫ್ಐಆರ್ ದಾಖಲು
ತನಿಖೆ ವಿಸ್ತರಿಸುತ್ತಿದ್ದಂತೆ, ೧೮-೨೫ ವರ್ಷ ವಯಸ್ಸಿನ ೮ ಹಿಂದೂ ಯುವತಿಯರು ಪೊಲೀಸರಿಗೆ ದೂರು ನೀಡಿ ತಮಗೆ ಲೈಂಗಿಕ ಕಿರುಕುಳ ಹಾಗೂ ಮತಾಂತರ ಯತ್ನ ಮಾಡಿರುವ ಆರೋಪ ಹೊರಿಸಿದರು. ಮಾರ್ಚ್ ೨೬ ಮತ್ತು ಏಪ್ರಿಲ್ ೩ರ ನಡುವೆ, ಎರಡು ಪೊಲೀಸ್ ಠಾಣೆಗಳಲ್ಲಿ ಒಂಬತ್ತು ಎಫ್ಐಆರ್ಗಳು ದಾಖಲಾಗಿದ್ದವು. ಆರೋಪಗಳಲ್ಲಿ ಅತ್ಯಾಚಾರ, ಲೈಂಗಿಕ ಕಿರುಕುಳ, ಮತಾಂತರಕ್ಕೆ ಪ್ರಚೋದನೆ ಮತ್ತು ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಕೃತ್ಯಗಳು ಸೇರಿವೆ. ಕೂಡಲೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಹಾರಾಷÀ್ಟç ರಾಜ್ಯ ಸರ್ಕಾರ ಕಮೀಷನರ್ ನೇತೃತ್ವದಲ್ಲೇ ವಿಶೇಷ ತನಿಖಾ ತಂಡ ರಚಿಸಿತು.
ಒಟ್ಟು ೭ ಆರೋಪಿಗಳ ಬಂಧನ
ಪೊಲೀಸರಿಗೆ ದೂರು ನೀಡದ ಮಹಿಳೆಯರೆಲ್ಲರೂ ಮೊದಲು ತಾವು ಕಂಪೆನಿಯ ಹೆಚ್ಆರ್ ಮ್ಯಾನೇಜರ್ರವರಿಗೂ ದೂರು ನೀಡಿದ್ದಾಗಿಯೂ ಅದಕ್ಕೆ ಅವರು ಕೆಲಸದ ಸ್ಥಳದಲ್ಲಿ ಇದೆಲ್ಲಾ ಸಾಮಾನ್ಯ ಅನುಸರಿಸಿಕೊಂಡು ಹೋಗಿ; ಇದು ಎಲ್ಲಾ ಕಂಪೆನಿಗಳಲ್ಲಿಯೂ ಇರುವಂತದ್ದೇ ಎಂದು ಉಡಾಫೆ ಮಾತಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳಾದ ಆಸಿಫ್ ಅನ್ಸಾರಿ, ಶಫಿ ಶೇಖ್, ಶಾರುಖ್ ಖುರೇಷಿ, ರಾಝಾ ಮೆಮನ್,
ತೌಸಿಫ್ ಅತ್ತಾರ್, ಡ್ಯಾನಿಶ್ ಶೇಖ್ ಹೆಚ್ಆರ್ ಮ್ಯಾನೇಜರ್ ನಿದಾ ಖಾನ್ (೩೦) ಎಂಬ ಮಹಿಳೆಯನ್ನೂ ಬಂಧಿಸಲಾಗಿದೆ. ತಲೆಮರೆಸಿಕೊಂಡಿದ್ದ ನಿಧಾ ಖಾನ್ಳನ್ನು ಪುಣೆಯಲ್ಲಿ ಏಪ್ರಿಲ್ ೧೦ ರಂದು ಬಂಧಿಸಲಾಯಿತು. ಇನ್ನೂ ಇಬ್ಬರ ಬಂಧನ ನಡೆಯಬೇಕಿದೆ.
ಸಸ್ಯಾಹಾರಿಗೆ ಗೋಮಾಂಸ ಸೇವಿಸಲು ಒತ್ತಾಯ
ದೂರು ನೀಡಿರುವ ೮ ಮಹಿಳೆಯರಲ್ಲಿ ಇಬ್ಬರು ವಿವಾಹಿತರಾಗಿದ್ದು ೬ ಜನರು ಅವಿವಾಹಿತರಾಗಿದ್ದಾರೆ. ಮೂವರ ಮೇಲೆ ಅತ್ಯಾಚಾರ ಮಾಡಲಾಗಿದೆ. ಅದರಲ್ಲೂ ಓರ್ವ ಟೀಂ ಲೀಡರ್ ಮದುವೆಯ ಭರವಸೆ ನೀಡಿ ಮತ್ತೋರ್ವ ತಾನು ಲೈಂಗಿಕ ಸಂಪರ್ಕದ ವಿಚಾರವನ್ನು ಯಾರಿಗೂ ಹೇಳುವುದಿಲ್ಲ ಎಂದು ಬೆದರಿಸಿ ಅತ್ಯಾಚಾರ ಎಸಗಿದ್ದಾನೆ. ಅಲ್ಲದೆ ಮಹಿಳಾ ಉದ್ಯೋಗಿಗಳನ್ನು ವೀಕೆಂಡ್ ಪಾರ್ಟಿ ನೆಪದಲ್ಲಿ ಹೊಟೇಲ್ಗಳಿಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಲಾಗಿದೆ. ಕಚೇರಿಯ ಪಾಂಟ್ರಿ ಸ್ಥಳದಲ್ಲೂ ನಿರಂತರ ಕಿರುಕುಳ ನೀಡಲಾಗಿದೆ. ಈ ಕಿರುಕುಳ ಫೆಬ್ರವರಿ ೨೦೨೨ ರಿಂದ ಇತ್ತೀಚಿನವರೆಗೂ ಮುಂದುವರೆದಿದೆ. ಇದಲ್ಲದೆ ಮಹಿಳೆಯರನ್ನು ವಾಕಿಂಗ್ಗೆ ಕರೆದುಕೊಂಡು ಹೋಗಿ ಫೋಟೋ ಇರುವವನು ಹೇಗೆ ದೇವರಾಗುತ್ತಾನೆ, ದೇವರಾದ ಮಹದೇವನು ಆನೆ ತಲೆ ಬದಲು ಏಕೆ ಗಣೇಶನಿಗೆ ಜೀವ ನೀಡಲು ಸಾಧ್ಯವಾಗಲಿಲ್ಲ ಎಂದೆಲ್ಲ ಧಾರ್ಮಿಕ ನಿಂದನೆ, ಅಪಹಾಸ್ಯ ಮಾಡಿದ್ದಾರೆ ಎನ್ನಲಾಗಿದೆ. ಇದರ ಜತೆಗೇ ಪುರುಷ ಉದ್ಯೋಗಿಯೊಬ್ಬರು ನೀಡಿದ ದೂರಿನಲ್ಲಿ ಶಾರುಖ್ ಖುರೇಷಿಯು ತನ್ನ ಮನೆಗೆ ಆಹ್ವಾನಿಸಿ ತಲೆಗೆ ಬಿಳಿ ಟೋಪಿ ತೊಡಿಸಿ ದೇವರಿಗೆ ಕೈ ಮುಗಿಯುವ ಭಂಗಿಯಲ್ಲಿ ಫೋಟೋ ತೆಗೆಸಿ ಅದನ್ನು ವಾಟ್ಯಾö್ಯಪ್ ಗ್ರೂಪಿನಲ್ಲಿ ಹಂಚಿಕೊAಡು ತನಗೆ ಅವಮಾನ ಮಾಡಿದ್ದಾನೆ ಅಲ್ಲದೆ ಮತಾಂತರವಾಗಲು ಬಲಾತ್ಕರಿಸಿದ್ದಾರೆ ಎಂದು ಎಫ್ಐಆರ್ ದಾಖಲಿಸಿದ್ದಾರೆ.
ನಾಸಿಕ್ ಘಟಕ ಮುಚ್ಚಿದ ಟಿಸಿಎಸ್
ಟಿಸಿಎಸ್ ನಾಸಿಕ್ ಘಟಕವನ್ನು ಗುರುವಾರದಿಂದ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಉದ್ಯೋಗಿಗಳಿಗೆ ವರ್ಕ್ ಪ್ರಂ ಹೋಂಗೆ ಸೂಚಿಸಲಾಗಿದೆ. ಈ ಆರೋಪಗಳನ್ನು ಗಂಭೀರವಾಗಿ ಕಳವಳಕಾರಿ ಮತ್ತು ದುಃಖಕರ" ಎಂದು ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ತಿಳಿಸಿದ್ದಾರೆ ಮತ್ತು ಹಿರಿಯ ಕಾರ್ಯನಿರ್ವಾಹಕರ ನೇತೃತ್ವದಲ್ಲಿ ಈ ವಿಷಯದ ಬಗ್ಗೆ ತನಿಖೆ ನಡೆಸುವುದಾಗಿ ಘೋಷಿಸಿದ್ದಾರೆ.
ಈಗಾಗಲೇ ಎಲ್ಲಾ ೯ ಆರೋಪಿಗಳನ್ನೂ ಅಮಾನತ್ತು ಮಾಡಲಾಗಿದ್ದು ತನಿಖೆ ನಡೆಸಲು ಟಿಸಿಎಸ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರತಿ ಸುಬ್ರಮಣಿಯನ್ ನೇತೃತ್ವದಲ್ಲಿ ಸಂಪೂರ್ಣ ತನಿಖೆ ನಡೆಯುತ್ತಿದೆ ಎಂದು ಅವರು ಘೋಷಸಿದರು. ಕಂಪೆನಿ ಇಂತಹ ವಿಚಾರಗಳಲ್ಲಿ ಶೂನ್ಯ ಸಹಿಷ್ಣುತಾ ಮನೋಭಾವನೆ ಹೊಂದಿದ್ದು, ಪೊಲೀಸರಿಗೆ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.