ಸೋಮವಾರೇಪೇಟೆ, ಏ.೧೬: ಗ್ರಾಮದಲ್ಲಿ ಶಾಂತಿ ಸುಭಿಕ್ಷೆ, ಸಕಾಲಕ್ಕೆ ಮಳೆ ಬೆಳೆಯಾಗುವಂತೆ ಮತ್ತು ರೋಗ ರುಜಿನಗಳು ಗ್ರಾಮಕ್ಕೆ ಆವರಿಸದಂತೆ ನೂರಾರು ವರ್ಷಗಳಿಂದ ಆರಾಧಿಸುತ್ತಾ ಬಂದಿರುವ ಗಣಗೂರು ಗ್ರಾಮದ ಇತಿಹಾಸ ಪ್ರಸಿದ್ಧಿ ಬಸವೇಶ್ವರ ದೇವರ ಅಡ್ಡ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿAದ ಮಂಗಳವಾರ ಗ್ರಾಮದಲ್ಲಿ ಜರುಗಿತು. ತಾಲೂಕಿನ ಸಮೀಪದ ಗಣಗೂರು ಗ್ರಾಮದಲ್ಲಿ ನೂರಾರು ವರ್ಷದ ಹಳೆಯ ಬಸವೇಶ್ವರ ದೇವರ ದೇವಸ್ಥಾನವಿದ್ದು, ನೂರಾರು ವರ್ಷಗಳಿಂದ ಈ ದೇವರಿಗೆ ಪೂಜೆ ಸಲ್ಲಿಸುತ್ತಾ ಬಂದಿದ್ದು, ಪ್ರತಿವರ್ಷದಂತೆ ಈ ವರ್ಷವೂ ಕೂಡ ವಿಜೃಂಭಣೆಯಿAದ ದೇವರ ಉತ್ಸವ ನಡೆಯಿತು.
ಗ್ರಾಮದ ಜನರು ದೇವರಿಗೆ ಗಂಗೆ ಪೂಜೆ ಸಲ್ಲಿಸಿ ಮಹಿಳೆಯರು ಕಳಸ ಹೊತ್ತ ವೀರಗಾಸೆ ಮತ್ತು ವಾದ್ಯಗೋಷ್ಠಿಯೊಂದಿಗೆ ಗ್ರಾಮದ ಪ್ರಮುಖ ರಸ್ತೆಯಲ್ಲಿ ಸಾಗಿ ದೇವಸ್ಥಾನದ ಮುಂಭಾಗದಲ್ಲಿ ಕೆಂಡ ತುಳಿಯುವುದರೊಂದಿಗೆ ಭಕ್ತಿ ಪೂರಕವಾಗಿ ಪೂಜೆ ಸಲ್ಲಿಸಿದರು. ಈ ಬಾರಿ ಉತ್ಸವದ ಜವಾಬ್ದಾರಿ ಹೊತ್ತ ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷರಾದ ಜಿ.ಎಸ್ ಚಂದ್ರಶೇಖರ ಅವರ ಅಧ್ಯಕ್ಷತೆಯಲ್ಲಿ ಅದ್ದೂರಿಯಾಗಿ ಉತ್ಸವ ನೆರವೇರಿದ್ದು, ಎರಡು ದಿನಗಳ ಕಾರ್ಯಕ್ರಮದಲ್ಲಿ ಬಂದAತ ಭಕ್ತಾದಿಗಳಿಗೆ ವಿವಿಧ ರೀತಿಯ ಭೋಜನ ವ್ಯವಸ್ಥೆ ಮಾಡಿಸಲಾಗಿತ್ತು.
ಬಸವೇಶ್ವರ ದೇವರ ಉತ್ಸವ ದಲ್ಲಿ ಅಕ್ಕ-ಪಕ್ಕ ಗ್ರಾಮದವರು ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗಿಯಾಗಿದ್ದರು.ಕಾರ್ಯಕ್ರಮದಲ್ಲಿ ಗ್ರಾಮದವರಾದ ಜಿ ಡಿ ಜಗದೀಶ್, ಸೋಮಶೇಖರ, ಪರಮೇಶ್, ಶರತ್, ಗಣೇಶ್, ಶ್ಯಾಮ್ ಇನ್ನಿತರರಿದ್ದರು.