ಶ್ರೀಮAಗಲ, ಏ. ೧೫: ಪೊನ್ನಂಪೇಟೆ ತಾಲೂಕಿನ ಕುಟ್ಟ ಸಮೀಪ ಕಾಯಿಮಾನಿ ಬಳಿ ಕಾಡಾನೆ ದಾಳಿಗೆ ಬಲಿಯಾದ ಬೆಳೆಗಾರ ಮೂಕಳಮಾಡ ರತ್ತು ಬೋಪಯ್ಯ ಅವರ ಮನೆಗೆ ತೆರಳಿದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಮೃತಪಟ್ಟ ಬೆಳೆಗಾರನ ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ಸಂದರ್ಭ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಳಿಮಾಡ ಪ್ರಶಾಂತ್ ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಪ್ರಮುಖರಾದ ಪಲ್ವಿನ್ ಪೂಣಚ್ಚ, ಪೆಮ್ಮಂಡ ರಾಜ ಕುಶಾಲಪ್ಪ, ತೀತಿರ ಮಂದಣ್ಣ, ಮಚ್ಚಮಾಡ ಪ್ರತು, ಮತ್ರಂಡ ದಿಲ್ಲು, ಅಲೀರ ರಶೀದ್, ಜಮ್ಮಡ ಸೋಮಣ್ಣ, ಅಣ್ಣಳಮಾಡ ಹರೀಶ್ ಮತ್ತಿತರರು ಇದ್ದರು.