ನಾಪೋಕ್ಲು, ಏ.೧೫: ಸಮೀಪದ ಪಾಲೂರು ಗ್ರಾಮದ ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಉತ್ಸವ ತಾ.೧೩ ರಿಂದ ಪ್ರಾರಂಭಗೊAಡಿದ್ದು, ತಾ.೧೯ ರವರೆಗೆ ನಡೆಯಲಿದೆ. ತಾ. ೧೬ ರಂದು (ಇಂದು)ಗುರುವಾರ ಉತ್ಸವ ಬಲಿ ಮತ್ತು ರಾತ್ರಿ ದೀಪಾರಾಧನೆ ನಡೆಯಲಿದೆ. ತಾ.೧೭ರಂದು ಶುಕ್ರವಾರ ಹಗಲು ಉತ್ಸವ ಬಲಿ ನಡೆದು ಸಂಜೆ ದೀಪಾರಾಧನೆ ನಡೆಯಲಿದೆ. ತಾ.೧೮ ರಂದು ಪಟ್ಟಣಿಹಬ್ಬ ಜರುಗಲಿದೆ. ಬೆಳಿಗ್ಗೆ ತುಲಾಭಾರ, ಮಧ್ಯಾಹ್ನ ಎತ್ತು ಪೋರಾಟ, ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಭಕ್ತರಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿದೆ. ಅಪರಾಹ್ನ ಜೋಡಿ ದೇವರ ನೃತ್ಯೋತ್ಸವ ನಡೆಯಲಿದೆ.