ಮಡಿಕೇರಿ, ಏ. ೧೫: ಪ್ರತಿಯೊಬ್ಬರ ಜೀವನದೊಂದಿಗೆ ಕಲೆ ಬೆರೆತಿದ್ದು, ಸಮರ್ಪಕ ದೃಷ್ಟಿಕೋನದೊಂದಿಗೆ ಸೃಜನಶೀಲತೆಯನ್ನು ಮೈಗೂಡಿಸಿಕೊಳ್ಳಬೇಕೆಂದು ಸಿನಿಮಾ ರಂಗದ ಕಲಾ ನಿರ್ದೇಶಕಿ ವೈಷ್ಣವಿ ರೆಡ್ಡಿ ಕರೆ ನೀಡಿದರು. ನಗರದ ಕೊಡಗು ವಿದ್ಯಾಲಯದ ವತಿಯಿಂದ ರಾಜಾಸೀಟ್‌ನಲ್ಲಿ ನಡೆದ ಅಂತರರಾಷ್ಟಿçÃಯ ಕಲಾ ದಿನದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಪ್ರತಿಯೊಬ್ಬರಲ್ಲಿಯೂ ಕಲೆ ಅಡಗಿರುತ್ತದೆ. ಅದನ್ನು ಸೂಕ್ಷö್ಮತೆಯಿಂದ ಗಮನಿಸಿದರೆ ಅರಿವಿಗೆ ಬರುತ್ತದೆ. ಚಿತ್ರ ಬಿಡಿಸುವುದು ಮಾತ್ರ ಕಲೆಯಲ್ಲ ಕ್ರೀಯಾಶೀಲತೆಯಿಂದ ಹೊಸ ಚಿಂತನೆಗಳನ್ನು ಮಾಡುವುದು, ಅದನ್ನು ಕಾರ್ಯಗತಗೊಳಿಸುವುದು, ಅಡುಗೆ ಮಾಡುವುದು ಕೂಡ ಕಲೆಯ ಒಂದು ಭಾಗವಾಗಿದೆ. ಕಲೆಯಲ್ಲಿ ಆಸಕ್ತಿಯುಳ್ಳವರ ದೃಷ್ಟಿಕೋನ ಗಟ್ಟಿಯಾಗಿರಬೇಕು. ಸಮಾಜದ ಆಗು-ಹೋಗುಗಳ ಬಗ್ಗೆ ಗಮನಹರಿಸಬೇಕು. ದಿನನಿತ್ಯ ಬದುಕಿನಲ್ಲಿ ಕಾಣುವ ಅಂಶಗಳನ್ನು ಅವಲೋಕಿಸಿದರೆ ಮಾನಸಿಕವಾಗಿ ಕ್ರಿಯಾಶೀಲತೆ ಬೆಳೆಯುತ್ತದೆ. ಅದನ್ನು ಕಲೆಯ ರೂಪಕ್ಕೆ ತಂದಾಗ ಮೌನಕ್ಕೆ ಜೀವ ಬಂದAತಾಗುತ್ತದೆ. ಕಲಿಕೆ ನಿರಂತರವಾಗಿರಬೇಕು ಎಂದು ಅಭಿಮತ ವ್ಯಕ್ತಪಡಿಸಿದರು.
ಕೊಡಗು ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ ಅನಂತಶಯನ ಮಾತನಾಡಿ, ಪ್ರಪಂಚದ ಶ್ರೇಷ್ಠ ಕಲಾವಿದ ಲಿಯೊನಾರ್ಡೊ ಡಾವಿನ್ಸಿ ಹುಟ್ಟಿದ ದಿನವನ್ನು ಅಂತರರಾಷ್ಟಿçÃಯ ಕಲಾ ದಿನವನ್ನಾಗಿ ಆಚರಿಸಲಾಗುತ್ತದೆ. ಡಾವಿನ್ಸಿ ಕೇವಲ ಕಲಾವಿದನಲ್ಲ. ವಿವಿಧ ವಿಷಯಗಳ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದವರು. ಅವರ ಚಿತ್ರಗಳು ನೂರು ಕಥೆಗಳನ್ನು ಹೇಳುತ್ತದೆ. ಉತ್ತಮ ಹವ್ಯಾಸಗಳನ್ನು ತೊಡಗಿಸಿಕೊಳ್ಳುವುದರಿಂದ ಕ್ರಿಯಾಶೀಲತೆ ಹೆಚ್ಚಾಗುತ್ತದೆ.
ಹವ್ಯಾಸಗಳೇ ನಮ್ಮ ಸಾಂಗತ್ಯವಾಗಿ ಬದಲಾಗುತ್ತದೆ. ಪ್ರತಿಯೊಬ್ಬರು ಉತ್ತಮ ಹವ್ಯಾಸವನ್ನು ರೂಢಿಸಿಕೊಂಡು ಮುನ್ನಡೆಯುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಚಿತ್ರಕಲಾವಿದರುಗಳಾದ ಪವನ್, ಪ್ರದೀಪ್, ಗುರುಹಿರೇಮಠ್, ಪೂರ್ಣಶ್ರೀ, ದೀಪು, ಕೊಡಗು ವಿದ್ಯಾಲಯದ ಪ್ರಾಂಶುಪಾಲೆ ಕೆ.ಎಸ್. ಸುಮಿತ್ರಾ, ಆಡಳಿತಾಧಿಕಾರಿ ರವಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸಾತ್ನ ಪೊನ್ನಣ್ಣ ನಿರೂಪಿಸಿ, ಲೆಹರ್ ಮಾಚಮ್ಮ ಸ್ವಾಗತಿಸಿ, ಇನಾ ಚಕ್ರವರ್ತಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ವೈವಿಧ್ಯಮಯ ಚಿತ್ರಗಳನ್ನು ರಚಿಸಿ ಕಲಾದಿನವನ್ನು ಅರ್ಥಪೂರ್ಣಗೊಳಿಸಿದರು.