೧. ಆ ಮುಗುದೆ...

ಇತ್ತೀಚೆಗಷ್ಟೇ ಯುಗಾದಿ ಹಬ್ಬದ ಸಂದರ್ಭ ಶ್ರೀ ವಿಜಯ ವಿನಾಯಕ ದೇವಾಲಯದಲ್ಲಿ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡುತ್ತಿದ್ದೆ.

ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಹೆಚ್ಚಿನ ಭಕ್ತಾದಿಗಳು ಆಗಮಿಸಿ ದೇವರ ದರ್ಶನ ಮತ್ತು ಪ್ರಸಾದವನ್ನು ಸ್ವೀಕರಿಸಿದರು. ಎರಡು ಡಬ್ಬಿ ಬೇವು ಬೆಲ್ಲ, ಶಿವಮೊಗ್ಗದಿಂದ ತರಿಸಿದ್ದ ೪೫ ಕೆಜಿ ಕರಂ ಕುರುಂ ಬೂಂದಿ ಮಧ್ಯಾಹ್ನ ೧೨ ಗಂಟೆ ಒಳಗೇ ಖಾಲಿಯಾಗಿತ್ತು. ನಂತರದ ಸೇವೆ ಸಂಜೆ ೫:೦೦ ಗಂಟೆಗೆ. ಭಕ್ತಾದಿಗಳ ಸಂಖ್ಯೆ ವಿರಳವಾಗಿತ್ತು.

ಬಹುಶಃ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ತಯಾರಿ ಮಾಡುತ್ತಿದ್ದ ಮೂವರು ಹೆಣ್ಣು ಮಕ್ಕಳು ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕಾರಕ್ಕೆ ನನ್ನತ್ತ ಬಂದರು. ಬೂಂದಿ ಬೇವು ಬೆಲ್ಲ ಸ್ವೀಕರಿಸಿ ಹೊರಗೆ ಹೋದ ಮೂವರಲ್ಲಿ ಒಬ್ಬ ಮುಗ್ಧ ಬಾಲಕಿ ನನ್ನತ್ತ ಓಡಿ ಬಂದು ಕಾಲಿಗೆ ನಮಸ್ಕರಿಸಲು ಮುಂದಾದಳು. ದೇವರ ಮುಂದೆ ಭಕ್ತರಿಗೆ ನಮಸ್ಕರಿಸುವುದು ಬೇಡ ಎಂದೆ.

ಅವಳ ಕಣ್ಣುಗಳಲ್ಲಿ ಏನೋ ಆತಂಕ, ಏನೋ ಸಂಕಟ, ಏನೋ ಅವ್ಯಕ್ತ ನೋವು ಇದ್ದಂತಿತ್ತು. ಏನೂ ಮಾತಾಡದೆ ಮೌನಕ್ಕೆ ಜಾರಿದ ಆ ಮಗುವನ್ನು ನೋಡಿ ಆಕೆ ಓದುವ ಶಾಲೆಯ, ವಾಸವಿರುವ ವಸತಿಗೃಹದ ವಿವರ ಕೇಳಿ ಪಡೆದುಕೊಂಡೆ. ತಂದೆ ಏನು ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆಗೆ “ಅವರು ಇಲ್ಲ” ಎಂದು ನೋವಿನ ಸ್ವರ ಉತ್ತರಿಸಿತು. ಅಮ್ಮ ಎಲ್ಲಿ ಎಂದು ನಾನು ಕೇಳುವುದಕ್ಕೆ ಮೊದಲೇ “ಅವರನ್ನೂ ಕಳೆದುಕೊಂಡಿದ್ದೇನೆ” ಎನ್ನುವ ನೊಂದ ದನಿಯ ಉತ್ತರ ಮಾತ್ರ ಕೇಳಿಸಿತು.

ಯಾಕೋ ನನ್ನ ಮನಸ್ಸಿಗೆ ಕಸಿವಿಸಿಯಾಯಿತು, ವಿಧಿ ಹೇಗೆಲ್ಲ ಬದುಕನ್ನು ನಿರ್ಣಯಿಸುತ್ತದೆ ಎಂದು ಯೋಚಿಸತೊಡಗಿದೆ. ಆ ನೋವಲ್ಲೂ ದೇವರು ತನಗೆ ಒಳ್ಳೆಯ ಬದುಕನ್ನು ಕೊಟ್ಟಾನು ಎನ್ನುವ ಭರವಸೆಯಲ್ಲಿಯೇ ಆ ಮಗು ದೇವಾಲಯಕ್ಕೆ ಬಂದಿರುವ ಬಗ್ಗೆ ಹೆಮ್ಮೆ ಅನ್ನಿಸಿತು. ನಿನ್ನ ಶಿಕ್ಷಣಕ್ಕೆ ಅಥವಾ ಆರೋಗ್ಯಕ್ಕೆ ಏನಾದರೂ ಆರ್ಥಿಕ ನೆರವು ಬೇಕಿದ್ದಲ್ಲಿ ದಯವಿಟ್ಟು ಕೇಳು ಎಂದೆ.

ನನ್ನ ಆರೋಗ್ಯ ಸರಿ ಇಲ್ಲ ಸರ್, ನನ್ನ ಹಾರ್ಟ್ನಲ್ಲಿ ಹೋಲ್ ಇದೆ ಎಂದು ವೈದ್ಯರು ಹೇಳಿದ್ದಾರೆ ಎಂದು ಮಾತು ನುಂಗಿ ಅಸಹಾಯಕತೆಯನ್ನು ಹೇಳಿಕೊಂಡಳು.

ಅದಕ್ಕೆ ಸಂಬAಧಿಸಿದ ಕಾಗದಪತ್ರ ಇದ್ದಲ್ಲಿ ತಲುಪಿಸಬಹುದೇ ಎಂದೆ. ನಾನು ಈಗ ವಾಸವಿರುವ ಹಾಸ್ಟೆಲ್‌ನಲ್ಲಿದ್ದು ಅದನ್ನು ತಲುಪಿಸುವುದು ಈಗ ಕಷ್ಟ; ಪರೀಕ್ಷೆ ಆದ ಬಳಿಕ ಪ್ರಯತ್ನಿಸುವೆ ಎಂದಳು. ನಾನು ನಿನ್ನ ಸಹಾಯಕ್ಕೆ ಇರುತ್ತೇನೆ, ಇಡೀ ಸಮಾಜ ನಿನ್ನ ಜೊತೆಯಲ್ಲಿ ಇರುತ್ತದೆ, ನಿನ್ನ ಆರೋಗ್ಯದ ಬಗ್ಗೆಯೂ ಗಮನಿಸುತ್ತದೆ-ನಿನ್ನ ಶಿಕ್ಷಣಕ್ಕೂ ಈ ಸಮಾಜ ನೆರವು ನೀಡುತ್ತದೆ... ಹೋಗಿ ಬಾ ಎಂದೆ. ಬಹುಶಃ ಇದೀಗ ಪರೀಕ್ಷೆ ಮುಗಿದು ತನ್ನ ಕುಟುಂಬದ ಇತರ ಸದಸ್ಯರೊಂದಿಗೆ ಇರಲು ತೆರಳಿರಬಹುದು ಎಂದುಕೊAಡಿದ್ದೇನೆ.

ಆಕೆಯ ಆರೋಗ್ಯದ ಬಗ್ಗೆ ಹಲವು ಸ್ನೇಹಿತರಲ್ಲಿ ಚರ್ಚಿಸಿದ್ದೇನೆ. ಭರವಸೆಯ ಮಾತುಗಳನ್ನಾಡಿದ್ದಾರೆ. ಆ ಅಸಹಾಯಕ ಬಾಲಕಿಯ ಬರುವಿಕೆಗಾಗಿ ಕಾಯುತ್ತಿದ್ದೇನೆ, ಆಕೆಯ ಮುಗ್ಧತೆ ಮಾತ್ರ ನನ್ನ ಮನಸ್ಸನ್ನು ಆಗಾಗ ಕಾಡುತ್ತಿರುತ್ತದೆ.

೨. ಅಮೇರಿಕಾ - ಪೂನಾ - ಮಡಿಕೇರಿ

ಕಳೆದ ವಾರ ಪೂನಾದ ಸುಧೀರ್ ಬಬಿತಾ ದಂಪತಿ ನನ್ನ ಹೋಂ ಸ್ಟೇಗೆ ಆಗಮಿಸಿದ್ದರು. ಮೊದಲ ದಿನ ಒಂದೇ ಕೊಠಡಿಯಲ್ಲಿ ತಂಗಿದ್ದ ದಂಪತಿ ಮಾರನೇ ದಿನದ ರಾತ್ರಿಗೆ ಎರಡು ಕೊಠಡಿಯನ್ನು ಕಾಯ್ದಿರಿಸಿದರು. ರಾತ್ರಿ ಏನೋ ಜಗಳವಾಗಿರಬಹುದು ಎಂದುಕೊAಡು ಸೂಕ್ಷö್ಮವಾಗಿ ಅವರನ್ನು ಈ ಬಗ್ಗೆ ವಿಚಾರಿಸಿದೆ. ಇಬ್ಬರೂ ರಾತ್ರಿ ಗೊರಕೆ ಹೊಡೆಯುವವರಾಗಿದ್ದು ನಿದ್ದೆ ಇಲ್ಲದ್ದರಿಂದ ಪ್ರತ್ಯೇಕ ಕೊಠಡಿಗಳಲ್ಲಿ ಉಳಿದುಕೊಳ್ಳುವುದಾಗಿ ಹೇಳಿದಾಗ ಸಮಾಧಾನವಾಯಿತು.

ಕಾಫಿ ತೋಟದ ಸೌಂದರ್ಯ, ಮೌನ ಪರಿಸರ, ಪಕ್ಷಿಗಳ ಇಂಚರ, ಮನೆ ಊಟ .... ಹೀಗೆ ಎಲ್ಲವನ್ನೂ ಮೆಚ್ಚಿಕೊಂಡ ದಂಪತಿ ತಮ್ಮ ವಾಸ್ತವ್ಯವನ್ನು ಮತ್ತೊಂದು ದಿನಕ್ಕೆ ಮುಂದುವರಿಸಿದರು.

ಕಾಫಿ ಕೃಷಿಯತ್ತ ಸುಧೀರ್ ಅವರಿಗಿದ್ದ ಆಸಕ್ತಿ ನನ್ನ ಎರಡು ಗಂಟೆಯ ಸಮಯವನ್ನು ಚರ್ಚೆಗಾಗಿ ತೆಗೆದುಕೊಂಡಿತು. ತನ್ನ ಮಗಳು ಗೌರಿ ಅಮೆರಿಕಾದಲ್ಲಿದ್ದು ಕಾಫಿ ಬೆಳೆಯುವ ಇತರ ಎಲ್ಲಾ ರಾಷ್ಟçಗಳಿಗೂ ಭೇಟಿ ನೀಡಿದ್ದು ಕಾಫಿ ತೋಟಗಳ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಆಕೆ ಅಧ್ಯಯನ ನಡೆಸಿರುವುದಾಗಿ ತಿಳಿಸಿದರು.

ಮಾರನೇ ದಿನ ಮತ್ತೊಮ್ಮೆ ಪರಸ್ಪರ ಮಾತುಕತೆಗೆ ಅವಕಾಶ ಲಭಿಸಿತು. ತನ್ನ ಮಗಳು ಅಮೆರಿಕಾದಲ್ಲಿ ಎನ್.ಜಿ.ಓ. ನಡೆಸುತ್ತಿದ್ದು, ಕಾಫಿ ತೋಟದ ಕಾರ್ಮಿಕರ ಮಕ್ಕಳಿಗೆ ಧನ ಸಹಾಯ ನೀಡಲು ಆಸಕ್ತಿ ಹೊಂದಿದ್ದಾಳೆ ಎಂದ ಸುಧೀರ್ ಅವರು ಆರಂಭಿಕವಾಗಿ ಅಬ್ಬಿಧಾಮ ತೋಟದ ಕಾರ್ಮಿಕರಾಗಿ ನೆರವು ನೀಡಬಹುದೇ ಎಂದು ಕೇಳಿದರು. ನನ್ನಿಂದ ಒಪ್ಪಿಗೆ ಸಿಕ್ಕ ಕೂಡಲೇ ಈ ಬಗ್ಗೆ ತನ್ನ ಮಗಳೊಂದಿಗೆ ಚರ್ಚಿಸಿ ಮಾರನೇ ದಿನ ಈ ಕಾರ್ಯಕ್ರಮಕ್ಕೆ ಬೆಳಗಿನ ೮:೦೦ ಗಂಟೆ ಸಮಯ ನಿಗದಿಯಾಯಿತು. ತೋಟ ಕಾರ್ಮಿಕರಿಗೆ ನೆರವು ನೀಡುವ ತಮ್ಮ ಯೋಜನೆ ಕೇವಲ ಒಂದು ದಿನದ್ದಲ್ಲ; ನಿರಂತರವಾಗಿ ಮುಂದುವರಿಸಬೇಕು ಎಂಬುದು ದಂಪತಿಯ ಆಶಯವಾಗಿತ್ತು. ಈ ವಿಚಾರವಾಗಿ ತನ್ನ ಮಗಳ ಈ ಕಾರ್ಯಕ್ರಮಗಳಲ್ಲಿ ಕೈಜೋಡಿಸಬೇಕೆಂದು ನನ್ನನ್ನು ವಿನಂತಿಸಿಕೊAಡರು.

ರೋಟರಿ ಹಾಗೂ ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿರುವ ಮಿತ್ರ ಎಚ್.ಟಿ. ಅನಿಲ್ ಹಾಗೂ ಸಾಮಾಜಿಕ ಕಳಕಳಿ ಉಳ್ಳ ಪತ್ರಕರ್ತೆ ಜಿ.ಆರ್ ಪ್ರಜ್ಞಾ ಇವರ ಹೆಸರನ್ನು ಸೂಚಿಸಿದೆ. ಎಲ್ಲರ ಸಮ್ಮುಖದಲ್ಲಿ ಮತ್ತೊಮ್ಮೆ ಸಭೆ ನಡೆಯುತ್ತಿದ್ದಂತೆಯೇ ಅಮೆರಿಕಾದಿಂದ ವೀಡಿಯೋ ಕಾಲ್ ಬಂದಿತ್ತು. ಪರಸ್ಪರ ಪರಿಚಯದೊಂದಿಗೆ ಅಲ್ಲಿ ನೆಲೆಸಿರುವ ಗೌರಿ ಅವರ ಕಾರ್ಯಕ್ರಮಗಳು, ಯೋಜನೆಗಳು, ಉದ್ದೇಶ ಗಳು, ವ್ಯಾಪ್ತಿ, ಹೀಗೆ ಸವಿಸ್ತಾರವಾದ ಚರ್ಚೆಗಳಾದವು.

ದೂರವಾಣಿ ಸಂಭಾಷಣೆ ಮುಗಿಯುತ್ತಿದ್ದಂತೆ ತೋಟದ ಕಾರ್ಮಿಕರಿಗೆ; ಅವರ ಮಕ್ಕಳಿಗೆ ಸುಮಾರು ೪೦ ಸಾವಿರ ಮೌಲ್ಯದ ಅವಶ್ಯಕತೆಗಳನ್ನು ಮಡಿಕೇರಿಯಲ್ಲಿ ಖರೀದಿ ಮಾಡಬೇಕು ಎಂದು ಸುದೀಪ್ ಆಶಯ ವ್ಯಕ್ತಪಡಿಸಿದರು. ಮಗ ಚಿರಂತನ್‌ನ ಸಹಕಾರದಲ್ಲಿ ಮಡಿಕೇರಿ ಎಲ್ಲೆಡೆ ಸುತ್ತಿದ ಸುಧೀರ್ ದಂಪತಿ ೧೧ ಗಂಟೆ ವೇಳೆಗೆ ಸುಮಾರು ಎಂಟು ದೊಡ್ಡ ದೊಡ್ಡ ಪಾರ್ಸೆಲ್‌ಗಳನ್ನು ತೋಟಕ್ಕೆ ತಂದು ತೋಟದ ಕಾರ್ಮಿಕರು ಮತ್ತು ಅವರ ಮಕ್ಕಳಿಗಾಗಿ ಉಚಿತವಾಗಿ ವಿತರಿಸಿದರು. ದಂಪತಿಗೆ ಏನೋ ಒಂದು ಸಂತಸದ ಭಾವವಾದರೆ, ಅವರ ಸಮರ್ಪಣಾ ಭಾವವನ್ನು ಕಂಡು ನಾನು ಆಶ್ಚರ್ಯಚಕಿತನಾದೆ. ಉಡುಗೊರೆ ಸ್ವೀಕರಿಸಿದ ಕಾರ್ಮಿಕರು ಮತ್ತು ಅವರ ಮಕ್ಕಳಂತೂ ಕೃತಜ್ಞತೆಯಿಂದ ಹೃದಯ ತುಂಬಿಕೊAಡು ತೆರಳಿದರು. ಎರಡು ದಿನದ ಅತಿಥಿಯಾಗಿ ಬಂದ ದಂಪತಿ ತಮ್ಮ ಸೇವಾ ಮನೋಭಾವದಿಂದ ಅಲ್ಲಿದ್ದವರ ಮನದಲ್ಲಿ ಶಾಶ್ವತವಾಗಿ ನೆಲೆಯನ್ನು ಕಂಡುಕೊAಡರು.

ಎಲ್ಲಿಯ ಅಮೇರಿಕಾ ? ಎಲ್ಲಿಯ ಪೂನಾ ? ಎಲ್ಲಿಯ ಮಡಿಕೇರಿ ?

Wಔಖಐಆ IS Sಒಂಐಐ

ಹೃದಯಗಳು ಮಾತ್ರ ವಿಶಾಲವಾದದ್ದು.

ಜಿ. ಚಿದ್ವಿಲಾಸ್ - ಸಂಪಾದಕ