ಪೊನ್ನಂಪೇಟೆ, ಏ. ೧೫: ಪೊನ್ನಂಪೇಟೆ ತಾಲೂಕಿನ ಬೇಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವದ ಅಂಗವಾಗಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ನಡೆಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ತಾ. ೧೦ ರಂದು ಬೇಗೂರು ಗ್ರಾಮಸ್ಥರಿಗಾಗಿ ನಡೆದ ಮ್ಯಾರಥಾನ್‌ನ ೧೬ ವರ್ಷ ಒಳಗಿನ ಬಾಲಕರ ವಿಭಾಗದಲ್ಲಿ ಬೆಂಜAಡ ಶಿವಂ ಪ್ರಥಮ, ಮತ್ರಂಡ ನೆಮಿಲ್ ನಾಚಪ್ಪ ದ್ವಿತೀಯ, ಕೇಚೆಟ್ಟೀರ ಶಾನ್ ಕಾವೇರಪ್ಪ ತೃತೀಯ, ೧೬ ವರ್ಷ ಮೇಲ್ಪಟ್ಟ ಪುರುಷರ ವಿಭಾಗದಲ್ಲಿ ಯೋಧ ಚೋಡುಮಾಡ ನಿಶಾಂತ್ ಪ್ರಥಮ, ಮಲ್ಲಂಡ ಪೊನ್ನಪ್ಪ ದ್ವಿತೀಯ, ಮಂಡಚAಡ ದೀಪಕ್ ಮಂಜುನಾಥ್ ತೃತೀಯ ಸ್ಥಾನ ಗಳಿಸಿರು.
೧೬ ವರ್ಷ ಒಳಗಿನ ಬಾಲಕಿಯರ ವಿಭಾಗದಲ್ಲಿ ಕೊಟ್ಟಂಗಡ ನಿಹಾರಿಕಾ ನೀಲಮ್ಮ ಪ್ರಥಮ, ಕಾಯಪಂಡ ನಿಷ್ಮಾ ದ್ವಿತೀಯ, ಕಾಯಪಂಡ ಸಿಂಚನ ತೃತೀಯ, ೧೬ ವರ್ಷ ಮೇಲ್ಪಟ್ಟ ಮಹಿಳೆಯರ ವಿಭಾಗದಲ್ಲಿ ಪುತ್ತಾಮನೆ ಅನಿತಾ ಜೀವನ್ ಪ್ರಥಮ, ಮಲ್ಲಂಡ ಕಾವ್ಯ ಧನಿಶ್ ದ್ವಿತೀಯ, ಮತ್ರಂಡ ರಾಣಿ ತೃತೀಯ ಸ್ಥಾನ ಪಡೆದುಕೊಂಡರು.
ಬೇಗೂರು ವ್ಯಾಪ್ತಿಯ ಕುಟುಂಬಗಳಿಗೆ ಆಯೋಜಿಸಲಾಗಿದ್ದ ೫ ಎ ಸೈಡ್ ಹಾಕಿ ಪಂದ್ಯಾವಳಿಯಲ್ಲಿ ಚೋಡುಮಾಡ ಕುಟುಂಬ ಪ್ರಥಮ, ಮತ್ರಂಡ ಕುಟುಂಬ ದ್ವಿತೀಯ ಸ್ಥಾನ ಪಡೆದುಕೊಂಡಿತು. ಒಟ್ಟು ೬ ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದವು.
ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯ ೧೨ ಬೋರ್ ವಿಭಾಗದಲ್ಲಿ ಮೊಹಮ್ಮದ್ ರಹೀಸ್ ಪ್ರಥಮ, ಮತ್ರಂಡ ಅಯಪ್ಪ ದ್ವಿತೀಯ, ಮೊಹಮ್ಮದ್ ರನೀಸ್ ತೃತೀಯ, ೦.೨೨ ವಿಭಾಗದಲ್ಲಿ ಕೇಚೆಟ್ಟೀರ ಅರುಣ ಅಪ್ಪಣ್ಣ ಪ್ರಥಮ, ಮತ್ರಂಡ ಕಿಶು ಲೋಹಿತ್ ದ್ವಿತೀಯ, ಚೋಡುಮಾಡ ನಿಶಾಂತ್ ತೃತೀಯ ಬಹುಮಾನ ಪಡೆದುಕೊಂಡರು.
ತಾ. ೧೧ ರಂದು ನಡೆದ ಜಿಲ್ಲಾ ಮಟ್ಟದ ಹಗ್ಗ ಜಗ್ಗಾಟ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ನಾಪೋಕ್ಲು ಈಶ್ವರ ಇಗ್ಗುತಪ್ಪ ತಂಡ ಪ್ರಥಮ, ಬೇಗೂರು ಮಹಾವಿಷ್ಣು ತಂಡ ದ್ವಿತೀಯ, ನಾಪೋಕ್ಲು ಭಜರಂಗಿ ತಂಡ ತೃತೀಯ ಸ್ಥಾನ, ಟಿ. ಶೆಟ್ಟಿಗೇರಿ ವಗರೆ ತಂಡ ೪ನೇ ಸ್ಥಾನ ಪಡೆದುಕೊಂಡಿತು.
ಮಹಿಳೆಯರ ವಿಭಾಗದಲ್ಲಿ ಚೇರಂಬಾಣೆ ಮಹಿಳಾ ಗೌಡ ಕೂಟ ಪ್ರಥಮ, ಟಿ. ಶೆಟ್ಟಿಗೇರಿ ವಗರೆ ಫ್ರೆಂಡ್ಸ್ ದ್ವಿತೀಯ, ಕೋತೂರು ಟೀಮ್ ಮಾರಮ್ಮ ತೃತೀಯ, ಬೇಗೂರು ಮಹಾವಿಷ್ಣು ತಂಡ ೪ನೇ ಸ್ಥಾನ ಪಡೆದುಕೊಂಡಿತು. ಹಗ್ಗ ಜಗ್ಗಾಟ ಸ್ಪರ್ಧೆಯನ್ನು ದಾನಿಗಳಾದ ಮತ್ರಂಡ ಮನು ದೇವಯ್ಯ ಉದ್ಘಾಟಿಸಿದರು.
ಪ್ರಥಮ ಸ್ಥಾನ ೩೦ ಸಾವಿರ ನಗದು, ದ್ವಿತೀಯ ೨೦ ಸಾವಿರ ನಗದು, ತೃತೀಯ ೧೫ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಯಿತು.
ತಾ. ೧೨ ರಂದು ನಡೆದ ಲೆಮನ್ ಸ್ಪೂನ್ ನಡಿಗೆ ಸ್ಪರ್ಧೆಯ ೧೬ ವರ್ಷ ಒಳಗಿನ ಬಾಲಕಿಯರ ವಿಭಾಗದಲ್ಲಿ ಡಯಾನಾ ಟಿ.ಪಿ ಪ್ರಥಮ, ತನಮ್ ಕೆ.ಬಿ ದ್ವಿತೀಯ, ೧೬ ಮೇಲ್ಪಟ್ಟ ವಿಭಾಗದಲ್ಲಿ ಪೂಜಾ ಸಿ.ಎಸ್ ಪ್ರಥಮ, ಪ್ರಿಯಾಂಕಾ ಸೋಮಣ್ಣ ದ್ವಿತೀಯ, ಓಟದ ಸ್ಪರ್ಧೆ ೧೦ ವರ್ಷ ಒಳಗಿನ ಬಾಲಕರ ವಿಭಾಗದಲ್ಲಿ ನೆಮಿಲ್ ನಾಚಪ್ಪ ಪ್ರಥಮ, ಸಾತ್ವಿಕ್ ಚೆಂಗಪ್ಪ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಯಶಿಕ ದೇಚಮ್ಮ ಪ್ರಥಮ, ರಿಯಾ ತಂಗಮ್ಮ ದ್ವಿತೀಯ, ೧೦ ವರ್ಷ ಮೇಲ್ಪಟ್ಟ ಬಾಲಕಿಯರ ವಿಭಾಗದಲ್ಲಿ ಡಯಾನಾ ಟಿ. ಪಿ ಪ್ರಥಮ, ನವ್ಯ ಮುತ್ತಮ್ಮ ದ್ವಿತೀಯ, ಬಾಲಕರ ವಿಭಾಗದಲ್ಲಿ ರಿಹಾನ್ ಪೊನ್ನಣ್ಣ ಪ್ರಥಮ, ಶಿವಂ ಚಂಗಪ್ಪ ದ್ವಿತೀಯ, ೪೦ ವರ್ಷದೊಳಗಿನ ಮಹಿಳೆಯರ ವಿಭಾಗದಲ್ಲಿ ಮೈತ್ರಿ ಪ್ರಥಮ, ದಮಯಂತಿ ದ್ವಿತೀಯ, ೪೦ ವರ್ಷ ಮೇಲ್ಪಟ್ಟ ಮಹಿಳೆಯರ ವಿಭಾಗದಲ್ಲಿ ರಾಣಿ ಚೇಂದಿರ ಪ್ರಥಮ, ಪ್ರಿಯಾಂಕಾ ಸೋಮಣ್ಣ ದ್ವಿತೀಯ, ಪುರುಷರ ಓಟದಲ್ಲಿ ಗಣೇಶ್ ಪ್ರಥಮ, ಧನಿಶ್ ಸುಬ್ರಮಣಿ ದ್ವಿತೀಯ, ಮೂರು ಕಾಲಿನ ಓಟ ಮಹಿಳೆಯರ ವಿಭಾಗದಲ್ಲಿ ದಿಯ ಮತ್ತು ದೀಪಲಿ ಜೋಡಿ ಪ್ರಥಮ, ದೃತಿ ಮತ್ತು ಮೌಲ್ಯ ಜೋಡಿ ದ್ವಿತೀಯ, ಪುರುಷರ ವಿಭಾಗದಲ್ಲಿ ಧನಿಶ್ ಸುಬ್ರಮಣಿ ಮತ್ತು ದಿನೇಶ್ ಜೋಡಿ ಪ್ರಥಮ, ಸಪ್ತ ಮತ್ತು ನಟೇಶ್ ಜೋಡಿ ದ್ವಿತೀಯ, ಪುರುಷರ ವೇಗದ ನಡಿಗೆಯಲ್ಲಿ ಜತಿನ್ ಪೊನ್ನಣ್ಣ ಪ್ರಥಮ, ವಿಜಯ ಕಾಯಪಂಡ ದ್ವಿತೀಯ ಸ್ಥಾನ ಗಳಿಸಿರು.
ಮಹಿಳೆಯರ ಗುಂಡು ಎಸೆತ ಸ್ಪರ್ಧೆಯಲ್ಲಿ ಕಾವೇರಮ್ಮ ಚೇಂದಿರ ಪ್ರಥಮ, ಲಲಿತ ಪೂಣಚ್ಚ ದ್ವಿತೀಯ, ಮತ್ರಂಡ ಪಾರ್ವತಿ ತೃತೀಯ, ಸಾರ್ವಜನಿಕ ಮಹಿಳೆಯರಿಗೆ ನಡೆದ ಸಂಗೀತ ಕುರ್ಚಿ ಸ್ಪರ್ಧೆಯಲ್ಲಿ ಬೈರಂಡ ಪ್ರಮೀಳ ಪ್ರಥಮ, ಪೋಕಚಂಡ ಮೈತ್ರಿ ದ್ವಿತೀಯ, ಶಿಕ್ಷಕರಿಗಾಗಿ ನಡೆದ ಸಂಗೀತ ಕುರ್ಚಿ ಸ್ಪರ್ಧೆಯಲ್ಲಿ ನೆಮ್ಮಲೆ ಶಾಲೆಯ ಶಿಕ್ಷಕಿ ಸಿಂಧು.ಎA.ಆರ್ ಪ್ರಥಮ, ಕಳಕೂರು ಶಾಲೆಯ ಶಿಕ್ಷಕಿ ರೇಖಾ ದ್ವಿತೀಯ ಸ್ಥಾನ ಪಡೆದುಕೊಂಡರು.
ಮೂರು ದಿನಗಳವರೆಗೆ ನಡೆದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಬೇಗೂರು ಗ್ರಾಮಸ್ಥರು ಪಾಲ್ಗೊಂಡು ಸಂಭ್ರಮಿಸಿದರು.