ಮಡಿಕೇರಿ, ಏ. ೧೫: ಮರಗೋಡುವಿನ ಗೌಡ ಈವಿನಿಂಗ್ ಸ್ಟಾರ್ ವತಿಯಿಂದ ಭಾರತಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಗೌಡ ಜನಾಂಗದ ನಡುವಿನ ಗೌಡ ಕುಟುಂಬ ಕಲರವ ಕ್ರಿಕೆಟ್ ಪಂದ್ಯಾವಳಿಯಲ್ಲಿAದು ಮೇಲ್ಚೆಂಬು ತಂಡ ಪ್ರಿ ಕ್ವಾರ್ಟರ್ ಹಂತಕ್ಕೆ ಪ್ರವೇಶಿಸಿದೆ.

ಇಂದು ನಡೆದ ಪಂದ್ಯದಲ್ಲಿ ದೋಲ್ಪಾಡಿ ತಂಡ ನಿಗದಿತ ೬ ಓವರ್‌ಗಳಲ್ಲಿ ೭ ವಿಕೆಟ್‌ಗೆ ೩೧ ರನ್ ಗಳಿಸಿದರೆ ಕೊಳಂಬೆ ತಂಡ ೩.೪ ಓವರ್‌ನಲ್ಲಿ ೩೭ ರನ್ ಗಳಿಸಿ ೯ ವಿಕೆಟ್‌ಗಳ ಜಯ ಸಂಪಾದಿಸಿತು. ಕಲ್ಲುಮುಟ್ಲು ೨ ವಿಕೆಟ್‌ಗೆ ೬೨ ರನ್ ಗಳಿಸಿದರೆ ಪೈಕೇರ ತಂಡ ೫ ವಿಕೆಟ್‌ಗೆ ೩೬ ರನ್ ಮಾತ್ರ ಗಳಿಸಿ ಸೋಲುನುಭವಿಸಿತು.

ಮೇಲ್ಚೆಂಬು ತಂಡ ೨ ವಿಕೆಟ್‌ಗೆ ಭರ್ಜರಿ ೧೦೨ ರನ್ ಸೇರಿಸಿದರೆ, ಪಾತಿಕಲ್ಲು ತಂಡ ೪ ವಿಕೆಟ್ ಕಳೆದುಕೊಂಡು ೬೪ ರನ್ ಮಾತ್ರ ಗಳಿಸಿ ೩೮ ರನ್‌ಗಳ ಅಂತರದಿAದ ಸೋಲನುಭವಿಸಿತು. ಮೇಲ್ಚೆಂಬು ತಂಡದ ಯತಿನ್ ಕುಮಾರ್ ೮ ಸಿಕ್ಸರ್ ಹಾಗೂ ಒಂದು ಬೌಂಡರಿ ನೆರವಿನೊಂದು ೬೨ ರನ್ ಗಳಿಸಿ ಪಂದ್ಯ ಪುರುಷ ಪ್ರಶಸ್ತಿ ಪಡೆದುಕೊಂಡರು. ಮುದ್ಯನ ತಂಡ ೯ ವಿಕೆಟ್‌ಗೆ ೨೮ ರನ್ ಗಳಿಸಿದರೆ, ತೇನನ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ ೧.೫ ಓವರ್‌ನಲ್ಲಿ ೩೩ ರನ್ ಗಳಿಸಿ ಗುರಿ ಸಾಧಿಸಿತು.

ಕೊಳಂಬೆ ತಂಡ ೭ ವಿಕೆಟ್‌ಗೆ ೪೭ ರನ್ ಗಳಿಸಿದರೆ, ಕಲ್ಲುಮುಟ್ಲು ತಂಡ ೩.೨ ಓವರ್‌ನಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ಗುರಿ ಸಾಧಿಸಿತು.

ಮೇಲ್ಚೆಂಬು ತಂಡ ೭ ವಿಕೆಟ್‌ಗೆ ೪೬ ರನ್ ಗಳಿಸಿದರೆ, ತೇನನ ತಂಡ ೬ ವಿಕೆಟ್‌ಗೆ ೩೯ ರನ್ ಮಾತ್ರ ಗಳಿಸಿ ಸೋಲನುಭವಿಸಿತು.

ಮತ್ತೊಂದು ಪಂದ್ಯದಲ್ಲಿ ಮೇಲ್ಚೆಂಬು ತಂಡ ೭ ವಿಕೆಟ್‌ಗೆ ೭೦ ರನ್ ಗಳಿಸಿದರೆ, ಕಲ್ಲುಮುಟ್ಲು ತಂಡ ೮ ವಿಕೆಟ್ ಕಳೆದುಕೊಂಡು ೪೮ ರನ್ ಮಾತ್ರ ಗಳಿಸಿ ಸೋಲನುಭವಿಸಿತು. ಇದರೊಂದಿಗೆ ಮೇಲ್ಚೆಂಬು ತಂಡ ಪ್ರೀ ಕ್ವಾರ್ಟರ್‌ಗೆ ಪ್ರವೇಶ ಪಡೆಯಿತು.