ಪೊನ್ನಂಪೇಟೆ, ಏ. ೧೫: ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ಗೋಣಿಕೊಪ್ಪಲು ಕಾವೇರಿ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿರುವ ೩ನೇ ವರ್ಷದ ಟಿ-೨೦ ಮಾದರಿಯ ಕೊಡವ ಲೆದರ್ಬಾಲ್ ಕ್ರಿಕೆಟ್ ಪ್ರೀಮಿಯರ್ ಲೀಗ್ನ ೬ನೇ ದಿನದಾಟದಲ್ಲಿ ಎಂ.ಟಿ.ಬಿ ರಾಯಲ್ಸ್ ಮತ್ತು ಕೂರ್ಗ್ ಟೈಟಾನ್ ತಂಡಗಳು ಗೆಲುವು ಸಾಧಿಸಿದವು.
ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಕೊಡವ ಟ್ರೆöÊಬ್ ನಿಗದಿತ ೨೦ ಓವರ್ಗಳಲ್ಲಿ ೮ ವಿಕೆಟ್ ಕಳೆದುಕೊಂಡು ೧೩೮ ರನ್ ಕಲೆಹಾಕಿ, ಎಂ.ಟಿ.ಬಿ ರಾಯಲ್ಸ್ ಗೆ ೧೩೯ ರನ್ ಗಳ ಗುರಿ ನೀಡಿತು. ಚೆಂಗಪ್ಪ ೫೦ ಎಸೆತಗಳಲ್ಲಿ ೫೩ ರನ್ ಗಳಿಸಿದರು. ಎಂ.ಟಿ.ಬಿ ಪರ ಪ್ರತಿಕ್ ತಿಮ್ಮಯ್ಯ ೩ ವಿಕೆಟ್ ಪಡೆದರು.
೧೩೯ ರನ್ಗಳ ಗುರಿ ಬೆನ್ನಟ್ಟಿದ ಎಂ. ಟಿ. ಬಿ ರಾಯಲ್ಸ್ ೧೭.೩ ಓವರ್ಗಳಲ್ಲಿ ೩ ವಿಕೆಟ್ ಕಳೆದುಕೊಂಡು, ೭ ವಿಕೆಟ್ಗಳ ಸುಲಭ ಜಯ ಸಾಧಿಸಿತು. ನೆಲ್ ದೇವಯ್ಯ ೩೧ ಎಸೆತಗಳಲ್ಲಿ ೪೧ ರನ್ ಗಳಿಸಿದರು. ಟೀಮ್ ಕೊಡವ ಟ್ರೆöÊಬ್ ಪರ ಭುವನ್ ಕಾವೇರಪ್ಪ ೧ ವಿಕೆಟ್ ಪಡೆದರು ಎಂ.ಟಿ.ಬಿ ರಾಯಲ್ಸ್ನ ಪ್ರತೀಕ್ ತಿಮ್ಮಯ್ಯ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದÀರು.
ಕೂರ್ಗ್ ಟೈಟಾನ್ಸ್ ಮತ್ತು ಮರೆನಾಡ್ ರೈಸಿಂಗ್ ಸ್ಟಾರ್ಸ್ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ
ಕೂರ್ಗ್ ಟೈಟಾನ್ಸ್ ೨೦ ಓವರ್ಗಳಲ್ಲಿ ೯ ವಿಕೆಟ್ ನಷ್ಟಕ್ಕೆ ೧೬೪ ರನ್ ಗಳಿಸಿತು. ಗೌತಮ್ ೧೭ ಎಸೆತಗಳಲ್ಲಿ ೪೯ ರನ್ ಬಾರಿಸಿದರು.
ಮರೆನಾಡ್ ರೈಸಿಂಗ್ ಸ್ಟಾರ್ಸ್ ಪರ ನೀಲೇಶ್ ೩ ವಿಕೆಟ್ ಪಡೆದರು.
ಗೆಲ್ಲಲು ೧೬೫ ರನ್ಗಳ ಗುರಿ ಬೆನ್ನಟ್ಟಿದ ಮರೆನಾಡ್ ರೈಸಿಂಗ್ ಸ್ಟಾರ್ಸ್ ೨೦ ಓವರ್ಗಳಲ್ಲಿ ವಿಕೆಟ್ ಕಳೆದುಕೊಂಡು ೧೩೭ ರನ್ ಗಳಿಗೆ ಆಟ ಮುಗಿಸಿ ೨೭ ರನ್ ಗಳಿಂದ ಸೋಲೊಪ್ಪಿಕೊಂಡಿತು. ಪಂದ್ಯಾವಳಿಯಲ್ಲಿ ಮೂರನೇ ಗೆಲುವು ದಾಖಲಿಸಿದ ಕೂರ್ಗ್ ಟೈಟಾನ್ಸ್ ಪ್ಲೇ ಆಫ್ ಹಂತಕ್ಕೆ ಪ್ರವೇಶ ಪಡೆಯಿತು. ದಿಶಾನ್ ೩೬ ಎಸೆತಗಳಲ್ಲಿ ೪೮ ರನ್ ಗಳಿಸಿದರು. ಟೈಟಾನ್ಸ್ ನ ಡೆಲ್ವಿನ್ ತೀತಮಾಡ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದುಕೊಂಡರು. - ಚನ್ನನಾಯಕ