ಮಾತು, ಭಾಷೆ, ಅಕ್ಷರ ಲಿಪಿಗಳು ಹಾಗೂ ರೇಖೆಗಳು ಸಂವಹನದ ಬಹು ಮುಖ್ಯವಾದ ಸಾಧನಗಳು ಆಗಿವೆ. ಆದರೆ ನಮ್ಮಗಳ ಬದುಕಿನ ನಾಗರಿಕತೆಯಲ್ಲಿ ಅರಿತುಕೊಳ್ಳುವ ದಾರಿಯಲ್ಲಿ ಅದರ ನಿಗೂಢತೆಯ ಹುಡುಕಾಟದಲ್ಲಿ ಈ ಸಾಧನಗಳು ಕೆಲವೊಂದು ವಿಷಯಗಳಲ್ಲಿ ಮಾತ್ರ ಮನಸ್ಸನ್ನು ಮುಟ್ಟಲು ಸಾಧ್ಯವಾಗುತ್ತದೆ. ಇಲ್ಲದಿದ್ದಲ್ಲಿ ಎಲ್ಲೋ ಒಂದು ಕಡೆ ಕೊರತೆಯನ್ನು ಕಾಣಬಹುದಾಗಿದೆ. ಆದುದರಿಂದ ಮಾನವನ ಆವಿಷ್ಕಾರದಲ್ಲಿ ಜಗತ್ತಿನ ಎಲ್ಲಾ ಸೃಜನಶೀಲ ಕಲೆಗಳು ಮಾನವನ ಬದುಕನ್ನು ಕಟ್ಟುವ ವಿಷಯವನ್ನು ಅರಿಯುವ ಮನುಷ್ಯನ ಆಸೆ, ಹಂಬಲ, ಕಲ್ಪನೆಯ ಫಲಗಳು ಸಿಕ್ಕಿದೆ ಎಂದರೆ ತಪ್ಪಾಗಲಾರದು. ಅಂಥಹ ಸೃಜನಶೀಲ ಕಲೆಗಳಲ್ಲಿ ಒಂದಾದ ಕಲೆಯೇ ಚಿತ್ರಕಲೆ.
ಆದುದರಿಂದ ಇಂದು ವಿಶ್ವ ಕಲಾ ದಿನವನ್ನು ಆಚರಿಸುತ್ತಿದ್ದೇವೆ. ಈ ಚತ್ರಕಲೆಗೆ ಸುದೀರ್ಘವಾದ ಇತಿಹಾಸವಿದ್ದು ಮಾನವನ ನಾಗರಿಕತೆಯ ಸಂದರ್ಭದಲ್ಲಿ ಈ ಚಿತ್ರಕಲೆಯು ಪ್ರಮುಖವಾದ ಪಾತ್ರವನ್ನು ವಹಿಸಿದೆ. ಭಾರತೀಯ ಕಲಾ ಇತಿಹಾಸದಲ್ಲಿ, ಅದರಲ್ಲೂ ಕರ್ನಾಟಕ ಕಲಾ ಇತಿಹಾಸವೂ ಚಿತ್ರಕಲೆಯ ಬೆಳವಣಿಗೆಗೆ ಸಾಕಷ್ಟು ವಸ್ತುನಿಷ್ಠವಾಗಿ ದಾಖಲೆಗಳನ್ನು ಮಾಡಿದೆ. ಸಾಮಾನ್ಯವಾಗಿ ಪ್ರಾಗೈತಿಹಾಸಿಕ ಕಾಲದ ಕಲೆಯನ್ನು ಗಣನೆಗೆ ತೆಗೆದುಕೊಂಡಿದ್ದೆ ಆದರೆ ಅಂದಿನ ಚಿತ್ರಗಳೆಲ್ಲವೂ ರೇಖೆಗಳಿಂದಲೇ ರಚನೆಯಾಗಿರುವುದು ಕಂಡುಬರುತ್ತದೆ.
ಅಲ್ಲದೆ ಚಿತ್ರಕಲೆಯ ಬೆಳವಣಿಗೆಯು ನಂತರದ ದಿನಗಳಲ್ಲಿ ಕಾಲಕ್ಕೆ ತಕ್ಕಂತೆ ಆವಿಷ್ಕಾರವನ್ನು ಪಡೆಯುತ್ತಾ ಇವತ್ತಿನ ದಿನದ ಡಿಜಿಟಲ್ ಮಾಧ್ಯಮದಲ್ಲೂ ಚಿತ್ರಕಲೆಯ ಸಾಕಷ್ಟು ಕೆಲಸಗಳನ್ನು ನಾವು ಕಾಣಬಹುದಾಗಿದೆ. ಅದಕ್ಕಾಗಿ ಶ್ರಮಿಸಿದ ವಿಶ್ವದ ಹಾಗೂ ನಮ್ಮ ದೇಶದ ಹಿರಿಯ ಚಿತ್ರಕಲಾವಿದರು ಹಾಗೂ ಪ್ರಸ್ತುತ ಚಿತ್ರಕಲಾವಿದರನ್ನು ನಾವುಗಳು ಕಾಣಬಹುದಾಗಿದೆ.
ಇಂದು ವಿಶ್ವ ಕಲಾ ದಿವಸ ನಾವೆಲ್ಲರೂ ಸೇರಿ ವಿಶ್ವ ಕಲಾ ದಿನವನ್ನು ಆಚರಿಸೋಣ. (ಐ.ಎ.ಎ) ಇಂಟರ್ನ್ಯಾಷನಲ್ ಅಸೋಸಿಯೇಷನ್ ಆಫ್ ಆರ್ಟ್, ರಾಷ್ಟಿçÃಯ ಸಮಿತಿಗಳು ಸೇರಿ ಫ್ರಾನ್ಸ್, ಸ್ವೀಡನ್, ಸ್ಲೋವಾಕಿಯ, ದಕ್ಷಿಣ ಆಫ್ರಿಕ, ಸೈಪ್ರಸ್, ವೆನುಜುವೇಲ, ಚೀನಾ, ಗ್ರೀಕ್, ಜಪಾನ್ ಮತ್ತು ಮಾರಿಶಿಯಶ್ ಅಲ್ಲದೆ ವಿಶ್ವದ ಇತರ ರಾಷ್ಟçಗಳು ಸೇರಿ ಇಂಟರ್ನ್ಯಾಷನಲ್ ಅಸೋಸಿಯೇಷನ್ನ ಅಧ್ಯಕ್ಷರಾದ ಮೆಕ್ಸಿಕನ್ ರೋಸಾ ಮಾರಿಯಾ ಹಾಗೂ ಇವರೊಂದಿಗೆ ವಿಶ್ವದ ೧೫೦ ಕಲಾವಿದರ ಬೆಂಬಲದೊAದಿಗೆ ಮೊದಲ ವಿಶ್ವ ಕಲಾ ದಿನವನ್ನು ೨೦೧೨ ಏಪ್ರಿಲ್ ೧೫ ರಂದು ಘೋಷಿಸಲಾಯಿತು. ಈ ದಿನಾಂಕವನ್ನು ವಿಶ್ವದ ಶ್ರೇಷ್ಠ ಚಿತ್ರಕಲಾವಿದರಲ್ಲಿ ಒಬ್ಬರಾದ ಲಿಯೊನಾರ್ಡೊ ಡಾವಿನ್ಸಿಯ ಹುಟ್ಟು ಹಬ್ಬದ(ಡಾವಿನ್ಸಿ ಇವರ ಹುಟ್ಟಿದ ದಿನ ೧೫ ಏಪ್ರಿಲ್ ೧೪೫೨)ಗೌರವಾರ್ಥವಾಗಿ ಆ ದಿನವನ್ನು ಎಲ್ಲಾ ಚಿತ್ರಕಲಾವಿದರು ಸೇರಿ ವಿಶ್ವ ಕಲಾ ದಿನ ಎಂದು ಘೋಷಿಸಲಾಯಿತು. ಹಾಗೇ ೨೦೧೨ರ ಏಪ್ರಿಲ್ ೧೫ ರಿಂದ ಮೊದಲ ಬಾರಿಗೆ ಆಚರಣೆ ನಡೆಯಿತು.
ವಿಶ್ವ ಕಲಾ ದಿನವನ್ನು ಆಚರಿಸುವ ಉದ್ದೇಶವೇನೆಂದರೆ ಕಲೆಯ ಪ್ರಾಮುಖ್ಯತೆಯು ಇಡೀ ವಿಶ್ವದ ಜನರಿಗೂ, ಎಲ್ಲಾ ವಯೋಮಾನದವರಿಗೂ, ಸರ್ವಜನಾಂಗದವರಿಗೂ ತಲುಪಿಸುವ ಪ್ರಯತ್ನವಾಗಿದೆ. ಪ್ರತೀ ಗ್ಯಾಲರಿ, ಮ್ಯುಸಿಯಂ, ಕಲಾ ಕೇಂದ್ರ, ವಿಶ್ವವಿದ್ಯಾನಿಲಯಗಳಲ್ಲಿ ಈ ದಿನ ಚಿತ್ರಕಲಾವಿದರು ತಮ್ಮ ಕಲಾ ಪ್ರತಿಭೆಯನ್ನು ಉಚಿತವಾಗಿ ಪ್ರದರ್ಶಿಸಲು ಅವಕಾಶಗಳು ಇವೆ.
ವಿಶ್ವ ಕಲಾ ದಿನವು ಸೃಜನಶೀಲತೆಯ ಸಂಭ್ರಮ. ಪ್ರತಿ ವರ್ಷ ಏಪ್ರಿಲ್ ೧೫ರಂದು ಆಚರಿಸಲಾಗುವ ಈ ದಿನವು, ಕಲೆಯಮಹತ್ವವನ್ನು ಸಾರುತ್ತದೆ. ಲಿಯೊನಾರ್ಡೋ ಡಾ ವಿಂಚಿ ಅವರ ಜನ್ಮದಿನದ ನೆನಪಿನಲ್ಲಿ, ಜಗತ್ತಿನಾದ್ಯಂತದ ಕಲಾವಿದರು
ಪ್ರದರ್ಶನಗಳು, ಕಾರ್ಯಾಗಾರಗಳ ಮೂಲಕ ತಮ್ಮ ಕೌಶಲವನ್ನು ಅನಾವರಣಗೊಳಿಸುತ್ತಾರೆ. ಇದು ಕೇವಲ ಒಂದು ದಿನದ ಆಚರಣೆಯಲ್ಲ, ಬದಲಿಗೆ ಕಲೆಯಲ್ಲಿನ ವೈವಿಧ್ಯತೆ ಮತ್ತು ಸಮಾಜಕ್ಕೆ ಕಲಾವಿದರ ಕೊಡುಗೆಯನ್ನು ಗೌರವಿಸುವ ಸಮಯ.
ವಿಶ್ವ ಕಲಾ ದಿನವು ಸೃಜನಶೀಲತೆಯ ಅಂತರರಾಷ್ಟಿçÃಯ ಹಬ್ಬ. ಪ್ರತಿ ವರ್ಷ ಏಪ್ರಿಲ್ ೧೫ ರಂದು, ಲಿಯೊನಾರ್ಡೋ ಡಾವಿನ್ಸಿ ಅವರ ಜನ್ಮದಿನದ ಗೌರವಾರ್ಥ ಈ ದಿನವನ್ನು ಆಚರಿಸಲಾಗುತ್ತದೆ. ಇದು ಕಲೆಯಲ್ಲಿನ ವೈವಿಧ್ಯತೆ, ಅಭಿವ್ಯಕ್ತಿ ಮತ್ತು ಮಾನವನ ಸೃಜನಶೀಲತೆಯ ಮಹತ್ವವನ್ನು ಸಾರುತ್ತದೆ. ಈ ಸಂದರ್ಭದಲ್ಲಿ, ಪ್ರಪಂಚದಾದ್ಯAತ ವಸ್ತು ಸಂಗ್ರಹಾಲಯಗಳ ವಿಶೇಷ ಪ್ರದರ್ಶನಗಳು, ವಿದ್ಯಾರ್ಥಿಗಳಿಗಾಗಿ ಕಲಾ ತರಗತಿಗಳು, ಮತ್ತು ನಾನಾ ಕಲಾ ರೂಪಗಳ ಸಂವಾದಗಳು ನಡೆಯುತ್ತವೆ. ಇದು ಕಲೆಯ ಬಗ್ಗೆ ಜಾಗೃತಿ ಮೂಡಿಸಲು ಒಂದು ಅಪೂರ್ವ ಅವಕಾಶ.
ಇದೇ ಸಂದರ್ಭದಲ್ಲಿ ಚಿತ್ರಕಲೆಗೆ ಸಂಬAಧಿಸಿದ ಬಣ್ಣಗಳ ಬಗ್ಗೆ ಒಂದಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ:
ಬಣ್ಣಗಳು ಚಿತ್ರಕಲೆಗೆ ಜೀವ ತುಂಬುತ್ತವೆ. ಅವು ಭಾವನೆಗಳನ್ನು ವ್ಯಕ್ತಪಡಿಸಲು, ವೀಕ್ಷಕರ ಗಮನವನ್ನು ಸೆಳೆಯಲು ಮತ್ತು ವರ್ಣಚಿತ್ರದ ಸಂದೇಶವನ್ನು ತಿಳಿಸಲು ಕಲಾವಿದರಿಗೆ ಸಹಾಯ ಮಾಡುತ್ತವೆ. ಉದಾಹರಣೆಗೆ, ಕೆಂಪು ಬಣ್ಣವು ಶಕ್ತಿ ಮತ್ತು ಆಸಕ್ತಿಯನ್ನು ತೋರಿಸಿದರೆ, ನೀಲಿ ಬಣ್ಣವು ಶಾಂತಿ ಮತ್ತು ನೆಮ್ಮದಿಯನ್ನು ಸೂಚಿಸುತ್ತದೆ. ಸಮಾಜದಲ್ಲಿಯೂ ಬಣ್ಣಗಳಿಗೆ ಬಹಳ ಪ್ರಾಮುಖ್ಯತೆ ಇದೆ. ಅವು ಸಂಸ್ಕೃತಿಯನ್ನು, ಧರ್ಮವನ್ನು, ಮತ್ತು ರಾಷ್ಟಿçÃಯತೆಯನ್ನು ಪ್ರತಿನಿಧಿಸುತ್ತವೆ. ನಾವು ಬಣ್ಣಗಳನ್ನು ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು, ನಮ್ಮ ವ್ಯಕ್ತಿತ್ವವನ್ನು ಪ್ರದರ್ಶಿಸಲು, ಮತ್ತು ನಮ್ಮ ಸುತ್ತಲಿನ ಜಗತ್ತನ್ನು ಗುರುತಿಸಲು ಬಳಸುತ್ತೇವೆ. ಹಾಗೆಯೇ, ಬಣ್ಣಗಳು ಆರೋಗ್ಯ ಮತ್ತು ಮನಸ್ಥಿತಿಯ ಮೇಲೂ ಪ್ರಭಾವ ಬೀರುತ್ತವೆ. ಚಿತ್ರಕಲೆಯಲ್ಲಿ, ಬಣ್ಣಗಳು ಕೇವಲ ವಸ್ತುವಿನ ನೈಜ ರೂಪವನ್ನು ಮಾತ್ರ ತೋರಿಸುವುದಿಲ್ಲ, ಅವು ಭಾವನಾತ್ಮಕ ಪರಿಣಾಮವನ್ನು ಕೂಡ ಉಂಟು ಮಾಡುತ್ತವೆ. ಕಲಾವಿದರು ಬಣ್ಣಗಳ ಸಂಯೋಜನೆ, ಗಾಢತೆ ಮತ್ತು ಪ್ರಕಾಶಮಾನತೆಯನ್ನು ಬಳಸಿಕೊಂಡು, ವರ್ಣಚಿತ್ರದಲ್ಲಿ ಒಂದು ನಿರ್ದಿಷ್ಟ ವಾತಾವರಣವನ್ನು ಸೃಷ್ಟಿಸುತ್ತಾರೆ. ಉದಾಹರಣೆಗೆ, ಮಸುಕಾದ ಬಣ್ಣಗಳು ಶಾಂತವಾದ ಭಾವನೆಯನ್ನು ನೀಡಿದರೆ, ಗಾಢವಾದ ಬಣ್ಣಗಳು ಉತ್ಸಾಹ ಮತ್ತು ವೇಗವನ್ನು ತೋರಿಸುತ್ತವೆ. ಸಮಾಜದಲ್ಲಿ, ಬಣ್ಣಗಳು ನಮ್ಮ ದೈನಂದಿನ ಜೀವನದ ಅವಿಬಾಜ್ಯ ಅಂಗವಾಗಿವೆ. ಅವು ಸಂಕೇತಗಳಾಗಿ, ಎಚ್ಚರಿಕೆಗಳಾಗಿ, ಮತ್ತು ನಮ್ಮ ಭಾವನೆಗಳನ್ನು ನಿಯಂತ್ರಿಸುವ ಸಾಧನಗಳಾಗಿ ಕೆಲಸ ಮಾಡುತ್ತವೆ. ಉದಾಹರಣೆಗೆ, ಸಂಚಾರ ದೀಪಗಳಲ್ಲಿನ ಕೆಂಪು ಬಣ್ಣವು ನಿಲ್ಲುವಂತೆ ಸೂಚಿಸಿದರೆ, ಹಸಿರು ಬಣ್ಣವು ಮುಂದಕ್ಕೆ ಹೋಗುವಂತೆ ಹೇಳುತ್ತದೆ.
ವಿವಿಧ ಸಂಸ್ಕೃತಿಗಳಲ್ಲಿ, ಬಣ್ಣಗಳಿಗೆ ವಿಭಿನ್ನ ಅರ್ಥಗಳಿವೆ. ಉದಾಹರಣೆಗೆ, ಪಾಶ್ಚಾತ್ಯ ದೇಶಗಳಲ್ಲಿ ಬಿಳಿ ಬಣ್ಣವು ಪವಿತ್ರತೆ ಮತ್ತು ಮುಗ್ಧತೆಯನ್ನು ತೋರಿಸಿದರೆ, ಭಾರತದ ಕೆಲವು ಭಾಗಗಳಲ್ಲಿ ಅದನ್ನು ಅಮಂಗಲವೆAದು ಪರಿಗಣಿಸಲಾಗುತ್ತದೆ. ಅಂತೆಯೇ, ಕೆಂಪು ಬಣ್ಣವು ಪ್ರೀತಿ ಮತು ಅದೃಷ್ಟವನ್ನು ಸೂಚಿಸುತ್ತದೆ ಎಂದು ಚೀನಾದಲ್ಲಿ ನಂಬಲಾಗುತ್ತದೆ.
ಬಣ್ಣಗಳು ಮಾನಸಿಕ ಮತ್ತು ದೈಹಿಕ ಪ್ರತಿಕ್ರಿಯೆಗಳ ಮೇಲೂ ಪ್ರಭಾವ ಬೀರುತ್ತವೆ. ಕೆಲವು ಬಣ್ಣಗಳು ನಮ್ಮ ಹೃದಯ ಬಡಿತವನ್ನು ಹೆಚ್ಚಿಸಬಹುದು ಅಥವಾ ಮನಸ್ಸನ್ನು ಶಾಂತಗೊಳಿಸಬಹುದು. ಪ್ರಾಥಮಿಕ, ದ್ವಿತೀಯ ಮತ್ತು ತೃತೀಯ ಬಣ್ಣಗಳ ಪಟ್ಟಿ. ಪ್ರಾಥಮಿಕ ಬಣ್ಣಗಳು ಕೆಂಪು, ಹಳದಿ ಮತ್ತು ನೀಲಿ. ಇವುಗಳನ್ನು ಬೇರೆ ಬಣ್ಣಗಳನ್ನು ಮಿಶ್ರಣ ಮಾಡಿ ತಯಾರಿಸಲು ಸಾಧ್ಯವಿಲ್ಲ. ದ್ವಿತೀಯ ಬಣ್ಣಗಳು, ಅಂದರೆ ಕಿತ್ತಳೆ, ಹಸಿರು ಮತ್ತು ನೇರಳೆ, ಇವುಗಳನ್ನು ಎರಡು ಪ್ರಾಥಮಿಕ ಬಣ್ಣಗಳನ್ನು ಮಿಶ್ರಣ ಮಾಡಿ ಪಡೆಯಲಾಗುತ್ತದೆ. ಇನ್ನು ತೃತೀಯ ಬಣ್ಣಗಳು, ಉದಾಹರಣೆಗೆ ಹಳದಿ-ಕಿತ್ತಳೆ ಅಥವಾ ನೀಲಿ-ಹಸಿರು, ಇವುಗಳನ್ನು ಒಂದು ಪ್ರಾಥಮಿಕ ಬಣ್ಣ ಮತ್ತು ಒಂದು ದ್ವಿತೀಯ ಬಣ್ಣವನ್ನು ಮಿಶ್ರಣ ಮಾಡಿ ಪಡೆಯಲಾಗುತ್ತದೆ.
-ಬಿ. ಆರ್. ಸತೀಶ್,
ವೀರಾಜಪೇಟೆ.