ಮುಳ್ಳೂರು, ಏ. ೧೩ ಹಾಸನದ ಪಡವಲಹಿಪ್ಪೆ ಹೊಳೆನರಸೀಪುರ ಎಚ್.ಡಿ. ದೇವೇಗೌಡ ಪ್ರಥಮ ದರ್ಜೆ ಕಾಲೇಜು ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳಿಂದ ಸಮೀಪದ ಮಾಲಂಬಿ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲಾ ಆವರಣದಲ್ಲಿ ೧೦ ದಿನದ ಗ್ರಾಮೀಣ ಸಮಾಜ ಸೇವಾ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪತ್ರಕರ್ತ ಸುರೇಶ್ ಚೆರಿಯಮನೆ ಪಾಲ್ಗೊಂಡರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸುರೇಶ್ ಚೆರಿಯಮನೆ, ವಿದ್ಯಾರ್ಥಿಗಳು ವಿವಿಧ ವಿಷಯಗಳ ಕುರಿತು ಆಸಕ್ತಿ ಬೆಳೆಸಿಕೊಳ್ಳಬೇಕು. ಕಲೆ, ವಾಣಿಜ್ಯ, ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ಪ್ರತಿಯೊಂದು ವಿಷಯದ ಬಗ್ಗೆ ಕನಿಷ್ಟ ಜ್ಞಾನದ ಅರಿವು ಹೊಂದಿರಬೇಕು ರಾಷ್ಟಿçÃಯ ಸೇವಾ ಶಿಬಿರದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಮೌಲ್ಯಗಳ ಅನುಭವ ಪಡೆದುಕೊಂಡರೆ ಸಮಾಜಕಾರ್ಯ ವಿದ್ಯಾರ್ಥಿಗಳಿಗೆ ಸಮಾಜ ಸೇವಾ ಶಿಬಿರದಿಂದ ಕರ್ತವ್ಯದ ತರಬೇತಿ ಪಡೆದುಕೊಂಡAತೆ ಅನುಭವವಾಗುತ್ತದೆ ಎಂದರು.

ಗ್ರಾ.ಪA. ಮಾಜಿ ಅಧ್ಯಕ್ಷ ಎಂ.ಇ. ವೆಂಕಟೇಶ್ ಮಾತನಾಡಿ, ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಮತ್ತು ಬುಡಕÀಟ್ಟು ಜನರ ಅಭಿವೃದ್ಧಿ ಹಿತದೃಷ್ಟಿಯಿಂದ ಮಾಲಂಬಿ ಗ್ರಾಮದಲ್ಲಿ ಹಾಸನದ ಸ್ನಾತಕೋತ್ತರ ಸಮಾಜಕಾರ್ಯ ವಿದ್ಯಾರ್ಥಿಗಳು ಶಿಬಿರವನ್ನು ಹಮ್ಮಿಕೊಂಡು ಸಮಾಜ ಸೇವಾ ಕಾರ್ಯ ಮಾಡುತ್ತಿರುವುದು ಶ್ಲಾಘನಿಯ ಎಂದರು.

ವೇದಿಕೆಯಲ್ಲಿ ಪ್ರಮುಖರಾದ ಮಣಿ, ಗಿರೀಶ್, ಎಚ್.ಎಸ್. ಸುರೇಶ್, ಬಾಬು, ರಕ್ಷಿತಾ ಯೋಗೇಂದ್ರ, ಸಮಾಜಕಾರ್ಯ ವಿಭಾಗದ ಶಿಬಿರ ಸಂಯೋಜನಾಧಿಕಾರಿ ಡಾ. ಎಚ್.ಎನ್. ದೀಪ್, ಉಪನ್ಯಾಸಕರಾದ ವೆಂಕಟೇಶ್, ರೇಖಾಶ್ರೀ, ವಿದ್ಯಾರ್ಥಿ ಪ್ರಮುಖರಾದ ಸಂಜನಾ, ಪೃಥ್ವಿ, ಪೂರ್ವಿಕಾ, ಅಭಿ, ಸಮರ್ಥ ಮುಂತಾದವರು ಇದ್ದರು. ವಿದ್ಯಾರ್ಥಿಗಳಿಂದ ಮತ್ತು ಗ್ರಾಮಸ್ಥರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.