ಬೆಂಗಳೂರು, ಏ. ೧೩; ದಶಕಗಳಿಂದ, ಭಾರತೀಯ ಕಾಫಿಯು ದುಬೈ, ಕುವೈತ್ ನಗರ ಮತ್ತು ರಿಯಾದ್‌ನಾದ್ಯಂತ ಕೆಫೆಗಳಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದೆ. ಹೆಚ್ಚುತ್ತಿರುವ ಸರಕು ಸಾಗಣೆ ವೆಚ್ಚಗಳು ಮತ್ತು ನೌಕಾ ಸಾರಿಗೆ ದಿಗ್ಬಂಧನಗಳ ಕಾರಣದಿಂದ ಅತ್ಯಂತ ಭರವಸೆಯ ಬೆಳವಣಿಗೆ ಮಾರುಕಟ್ಟೆಯ ೮೦% ರಷ್ಟು ರಫ್ತು ಕುಸಿತವಾಗಬಹುದು ಎಂದು ಉದ್ಯಮವು ಈಗ ಆತಂಕಗೊAಡಿದೆ ಎಂದು ನಿಕ್ಕಿ ಏಷ್ಯಾ ವರದಿ ಮಾಡಿದೆ.

ಅಮೇರಿಕ ಮತ್ತು ಇರಾನ್ ನಡುವಿನ ತಾತ್ಕಾಲಿಕ ಕದನ ವಿರಾಮದೊಂದಿಗೆ ಸಹ, ವ್ಯಾಪಾರ ಮಾರ್ಗಗಳು ಜಟಿಲವಾಗಿವೆ. ಸಾಗಣೆಯ ವೆಚ್ಚವು ತುಂಬಾ ಹೆಚ್ಚಾಗಿದ್ದು, ಅದು ಉದ್ಯಮದ ಮೇಲೆ ಒತ್ತಡ ಹೇರಿದೆ. ಶನಿವಾರ ಇಸ್ಲಾಮಾಬಾದ್‌ನಲ್ಲಿ ಪಾಕಿಸ್ತಾನ-ಮಧ್ಯಸ್ಥಿಕೆಯ ೨೧ ಘಂಟೆಗಳ ಸುದೀರ್ಘ ಮಾತುಕತೆಗಳ ನಂತರ ಪರಿಸ್ಥಿತಿ ಉತ್ತಮಗೊಳ್ಳಬಹುದೆಂಬ ಭರವಸೆ ಇತ್ತಾದರೂ ಮಾತುಕತೆ ವಿಫಲಗೊಂಡದ್ದರಿAದ ಮತ್ತೆ ರಫ್ತಿನ ಮೇಲೆ ಹೊಡೆತ ಮುಂದುವರೆದಿದೆ. ಈ ಬೆಳವಣಿಗೆ ಭಾರತೀಯ ಕಾಫಿ ರಫ್ತುದಾರರಿಗೆ, ಹಾರ್ಮುಜ್ ಜಲಸಂಧಿಯ ಅಡಚಣೆಗಳು ದೀರ್ಘಕಾಲೀನ ಬಿಕ್ಕಟ್ಟಾಗಬಹುದು ಎಂಬುದರ ಸಂಕೇತವಾಗಿದೆ. ಅಮೇರಿಕದ ಕೃಷಿ ಇಲಾಖೆಯ ಪ್ರಕಾರ, ಬ್ರೆಜಿಲ್, ವಿಯೆಟ್ನಾಂ ಮತ್ತು ಇತರ ನಾಲ್ಕು ದೇಶಗಳ ನಂತರ ಭಾರತವು ವಿಶ್ವದ ಏಳನೇ ಅತಿದೊಡ್ಡ ಕಾಫಿ ಉತ್ಪಾದಕ ರಾಷ್ಟ್ರವಾಗಿದೆ. ಭಾರತವು ತನ್ನ ಕಾಫಿ ಉತ್ಪಾದನೆಯ ಸರಿಸುಮಾರು ೭೦% ರಫ್ತು ಮಾಡುತ್ತದೆ. ಕಳೆದ ದಶಕದಲ್ಲಿ, ಇದು ಪಶ್ಚಿಮ ಏಷ್ಯಾಕ್ಕೆ ಸ್ಥಿರವಾಗಿ ವಿಸ್ತರಿಸಿದೆ, ಯುಎಇ, ಜೋರ್ಡಾನ್ ಮತ್ತು ಸೌದಿ ಅರೇಬಿಯಾದಂತಹ ಮಾರುಕಟ್ಟೆಗಳು ೨೦೨೪ ರಲ್ಲಿ ಭಾರತದ ರಫ್ತಿನ ೧೬% ಕ್ಕಿಂತ ಹೆಚ್ಚು ಪಾಲನ್ನು ಹೊಂದಿವೆ.

“ರಫ್ತುದಾರರು ಮುಂಬರುವ ತಿಂಗಳುಗಳಲ್ಲಿ ಪಶ್ಚಿಮ ಏಷ್ಯಾ ಮಾರುಕಟ್ಟೆಯಲ್ಲಿ ೮೦% ರಷ್ಟು ನಷ್ಟವನ್ನು ಎದುರಿಸಬೇಕಾಗುತ್ತದೆ” ಎಂದು ಭಾರತದ ಕಾಫಿ ರಫ್ತುದಾರರ ಸಂಘದ ಅಧ್ಯಕ್ಷ ರಮೇಶ್ ರಾಜಾ ತಿಳಿಸಿದರು. ಹಾರ್ಮುಜ್ ಜಲಸಂಧಿಯ ಮೂಲಕ ಹೆಚ್ಚಿನ ಭಾರತೀಯ ಕಾಫಿಯನ್ನು ಸಾಗಿಸಲಾಗುತ್ತಿರುವುದೇ ಇದಕ್ಕೆ ಕಾರಣ ಎಂದು ಅವರು ಹೇಳಿದರು. “ಸಾಗಣೆಗಳು ವಿಳಂಬವಾಗುತ್ತಿವೆ, ಮಾರ್ಗ ಬದಲಾಯಿಸಲಾಗುತ್ತಿದೆ ಅಥವಾ ಟ್ರಾನ್ಸ್-ಶಿಪ್‌ಮೆಂಟ್ ಪಾಯಿಂಟ್‌ಗಳಲ್ಲಿ ಸಿಲುಕಿಕೊಳ್ಳುತ್ತಿವೆ, ಆದರೆ ಹೆಚ್ಚುತ್ತಿರುವ ಸರಕು ವೆಚ್ಚಗಳು ಲಾಭವನ್ನು ಕುಗ್ಗಿಸುತ್ತಿವೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಫೆಬ್ರವರಿಯ ಅಂತ್ಯದಲ್ಲಿ ಇರಾನ್ ವಿರುದ್ಧ ಅಮೇರಿಕ-ಇಸ್ರೇಲ್ ಯುದ್ಧ ಪ್ರಾರಂಭವಾದಾಗಿನಿAದ ಸರಕು ಸಾಗಣೆ ವೆಚ್ಚ ದ್ವಿಗುಣಗೊಂಡಿದೆ ಎಂದು ವರದಿಯಾಗಿದೆ. ಸಾಗಣೆಗಳನ್ನು ಪರ್ಯಾಯ ಮಾರ್ಗಕ್ಕೆ ತಿರುಗಿಸಲಾಗುತ್ತಿದೆ ಅಥವಾ ಟ್ರಾನ್ಸ್ಶಿಪ್‌ಮೆಂಟ್ ಪಾಯಿಂಟ್‌ಗಳಲ್ಲಿ ಸಿಲುಕಿಕೊಳ್ಳಲಾಗುತ್ತಿದೆ. ಯುರೋಪಿನ ಖರೀದಿದಾರರು ಈಗಾಗಲೇ ಉಗಾಂಡಾದ ಕಡೆಗೆ ಹೆಚ್ಚು ವಿಶ್ವಾಸಾರ್ಹ ಪರ್ಯಾಯವಾಗಿ ನೋಡುತ್ತಿದ್ದಾರೆ. ಇದು ಭಾರತ ಕಷ್ಟಪಟ್ಟು ಗಳಿಸಿದ ಮಾರುಕಟ್ಟೆ ಪಾಲಿಗೆ ಗಂಭೀರ ಬೆದರಿಕೆ ಒಡ್ಡಿದೆ.

ಇತ್ತೀಚಿನ ವರ್ಷದಲ್ಲಿ ಭಾರತದ ಕಾಫಿ ವಲಯವು ಸುವರ್ಣ ಯುಗವನ್ನು ಆಚರಿಸುತ್ತಿತ್ತು. ವರದಿಗಳ ಪ್ರಕಾರ, ರಫ್ತು ಗಳಿಕೆಯು ೨೦೨೩ ರಲ್ಲಿ $೧.೧೪ ಬಿಲಿಯನ್‌ನಿಂದ ಕಳೆದ ವರ್ಷ ದಾಖಲೆಯ $೨.೧೩ ಬಿಲಿಯನ್‌ಗೆ ದ್ವಿಗುಣಗೊಂಡಿದೆ. ವಾರ್ಷಿಕ ಉತ್ಪಾದನೆಯು ಸುಮಾರು ೩೫೦,೦೦೦-೩೭೦,೦೦೦ ಮೆಟ್ರಿಕ್ ಟನ್‌ಗಳಷ್ಟಿದ್ದು, ಇದು ಜಾಗತಿಕ ಉತ್ಪಾದನೆಯ ಸರಿಸುಮಾರು ೩%-೪% ರಷ್ಟಿದೆ ಎಂದು ಭಾರತೀಯ ಕಾಫಿ ಮಂಡಳಿ ತಿಳಿಸಿದೆ.

೧೯೯೦ರ ದಶಕದಲ್ಲಿ ಉದಾರೀಕರಣದ ನಂತರ ಭಾರತದ ಕಾಫಿ ವಲಯವು ತನ್ನನ್ನು ತಾನು ಮರುರೂಪಿಸಿಕೊಳ್ಳುತ್ತಿರುವ ಸಮಯದಲ್ಲಿ ಪ್ರಸ್ತುತ ಆಘಾತ ಉಂಟಾಗಿದೆ. ಮೊದಲಿನಿಂದಲೂ ಸರ್ಕಾರೀ ನಿಯಂತ್ರಣದಲ್ಲಿದ್ದ ವಾಣಿಜ್ಯ ಬೆಳೆ ಕಾಫಿ ೧೯೯೦ರ ದಶಕದಲ್ಲಿ ಮಾರಾಟದ ಮೇಲೆ ಸರ್ಕಾರದ ನಿಯಂತ್ರಣವನ್ನು ತೆಗೆದು ಹಾಕಿದ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರವೇಶಿಸತೊಡಗಿತು. “ಅಂದಿನಿAದ, ಭಾರತವು ಯುರೋಪ್ ಮತ್ತು ಏಷ್ಯಾದಲ್ಲಿ ತನ್ನ ಅಸ್ತಿತ್ವವನ್ನು ಪುನರ್ನಿರ್ಮಿಸಿದೆ ಮತ್ತು ವಿಶೇಷತೆ ಮತ್ತು ಮೌಲ್ಯವರ್ಧಿತ ಕಾಫಿಯ ಮೇಲೆ ಹೆಚ್ಚು ಗಮನಹರಿಸಿದ್ದು ಇಂದು ಭಾರತೀಯ ಕಾಫಿ ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ಉತ್ತಮ ಗುಣಮಟ್ಟದಿಂದಾಗಿ ಪ್ರೀಮಿಯಂ ದರಕ್ಕೆ ಮಾರಾಟವಾಗುತ್ತಿದೆ. ಭಾರತವು ಅರೇಬಿಕಾ ಮತ್ತು ರೋಬಸ್ಟಾ ಎರಡನ್ನೂ ಉತ್ಪಾದಿಸುತಿದ್ದು, ರೋಬಸ್ಟಾ ಉತ್ಪಾದನೆಯು ಒಟ್ಟು ಕಾಫಿ ಉತ್ಪಾದನೆಯ ೭೦% ಪಾಲು ಹೊಂದಿದೆ. ಪ್ರೀಮಿಯಂ ರೋಬಸ್ಟಾ ಮತ್ತು ಮಾನ್ಸೂನ್ಡ್ ಮಲಬಾರ್‌ನಂತಹ ವಿಶೇಷ ಕಾಫಿ ಮಾದರಿಯು ಇಟಲಿ, ಜರ್ಮನಿ ಮತ್ತು ರಷ್ಯಾದಂತಹ ಹೆಚ್ಚಿನ ಮೌಲ್ಯದ ಮಾರುಕಟ್ಟೆಗಳಲ್ಲಿ ಸ್ಥಾನವನ್ನು ನಿರ್ಮಿಸಲು ಸಹಾಯ ಮಾಡಿದೆ ಮತ್ತು ಜಪಾನ್‌ಗೆ ಇನ್ಸ್ಟಂಟ್ ಕಾಫಿಯನ್ನು ಸಹ ಸರಬರಾಜು ಮಾಡಲಾಗುತ್ತಿದೆ. ಇರಾನ್ ಮೇಲಿನ ಯುಎಸ್-ಇಸ್ರೇಲಿ ದಾಳಿಗಳು ವ್ಯಾಪಾರ ವಹಿವಾಟನ್ನು ಅಡ್ಡಿಪಡಿಸಿವೆ. ವಿಶ್ವಸಂಸ್ಥೆಯ ಅಂಕಿ ಅಂಶಗಳ ಪ್ರಕಾರ ಪಶ್ಚಿಮ ಏಷ್ಯಾವು ೨೦೨೪ ರಲ್ಲಿ ಭಾರತದ ಕಾಫಿ ರಫ್ತಿನಲ್ಲಿ ೧೬.೧% ಪಾಲು ಹೊಂದಿದ್ದು ವೇಗದ ಬೆಳವಣಿಗೆ ದಾಖಲಿಸುತ್ತಿದೆ. ೨೦೧೪ ರಲ್ಲಿ ದೇಶದ ಕಾಫಿ ರಫ್ತಿನ ಶೇಕಡಾ ೧೨.೬ ರಷ್ಟು ಮಾತ್ರ ಕೊಲ್ಲಿ ರಾಷ್ಟ್ರಗಳಿಗೆ ರಫ್ತಾಗುತಿತ್ತು.