ನಾಪೋಕ್ಲು, ಏ. ೧೩: ಇಲ್ಲಿಗೆ ಸಮೀಪದ ಚೇರಂಬಾಣೆ ಗೌಡ ಸಮಾಜ ಹಾಗೂ ಚೇರಂಬಾಣೆ ಗೌಡ ಯುವ ವೇದಿಕೆ ಕಾರುಗುಂದ ಆಶ್ರಯದಲ್ಲಿ ನಡೆದ ಪ್ರಥಮ ವರ್ಷದ ಗೌಡ ಪ್ರೀಮಿಯರ್ ಲೀಗ್ ನಡೆಯಿತು.

ಕ್ರೀಡಾಕೂಟದಲ್ಲಿ ೧೦ ತಂಡಗಳು ಭಾಗವಹಿಸಿದ್ದವು. ಎಂಸಿಬಿ ಗೋಳಿಕಟ್ಟೆ ವಿಜೇತವಾದರೆ, ರನ್ನರ್ ಅಪ್ ಸ್ಥಾನವನ್ನು ಪಾಕ ಬಾಯ್ಸ್, ಮೂರನೇ ಸ್ಥಾನವನ್ನು ಆರ್‌ಸಿಬಿ ಭಾಗಮಂಡಲ ಪಡೆದುಕೊಂಡಿತು.

ಚೇರಂಬಾಣೆ ಅರುಣ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಕ್ರೀಡಾಕೂಟವನ್ನು ಗೌಡ ಸಮಾಜ ಅಧ್ಯಕ್ಷ ಕೊಡಪಾಲು ಗಣಪತಿ ಉದ್ಘಾಟಿಸಿದರು. ಉಪಾಧ್ಯಕ್ಷ ರಾದ ಕೆ. ಕೇಕಡ ದಿನೇಶ್ ಹಾಗೂ ಕಾರ್ಯದರ್ಶಿಗಳಾದ ಬೆಳ್ಳಿಯನ ಚಂದ್ರಶೇಖರ್, ಯುವವೇದಿಕೆ ಅಧ್ಯಕ್ಷರಾದ ಪಾÀರೆಮಜುಲು ಪ್ರದೀಪ್, ಕಾರ್ಯದರ್ಶಿ ಕೇಟೋಳಿ ಯಶವಂತ್ ಈ ಸಂದರ್ಭ ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭ ದಲ್ಲಿ ಮುಖ್ಯ ಅತಿಥಿಗಳಾಗಿ ಉದ್ಯಮಿ ಹಾಗೂ ಸಮಾಜಸೇವಕ ಎಡಿಕೇರಿ ಪ್ರಸನ್ನ, ಗೌಡ ಸಮಾಜ ಚೇರಂಬಾಣೆ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಕಡ್ಲೆರ ತುಳಸಿ ಮೋಹನ್, ಯುವ ವೇದಿಕೆ ಅಧ್ಯಕ್ಷ ಬಾಲಾಡಿ ಮನೋಜ್ ಕುಮಾರ್, ಕಾರ್ಯದರ್ಶಿ ಪುದಯನೆರವನ ರಿಷಿತ್ ಮಾದಯ್ಯ ಹಾಗೂ ಚೇರಂಬಾಣೆ ಗೌಡ ಯುವ ವೇದಿಕೆ ಕಾರುಗುಂದ ಅಧ್ಯಕ್ಷ ಪ್ರದೀಪ್ ಪಾರಮಜಲು ಹಾಗೂ ಇನ್ನಿತರ ಗಣ್ಯರು ಪಾಲ್ಗೊಂಡಿದ್ದರು.