ಮಡಿಕೇರಿ, ಏ. ೧೨: ನಾಪೋಕ್ಲು ಚೆರಿಯಪರಂಬುವಿನ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೇನಂಡ ಕಪ್ ಹಾಕಿ ಉತ್ಸವದಲ್ಲಿ ಇದೀಗ ಮೊದಲ ಸುತ್ತಿನ ಪಂದ್ಯಾಟಗಳು ಮುಕ್ತಾಯಗೊಂಡಿವೆ.
ಭಾನುವಾರ ಅಪರಾಹ್ನ ನಂತರ ೨ನೇ ಸುತ್ತಿನ ಪಂದ್ಯಾಟಗಳು ಆರಂಭಗೊAಡಿವೆ. ಆರಂಭಿಕ ಸುತ್ತು ಮುಗಿದಿರುವ ಹಿನ್ನೆಲೆ ಪಂದ್ಯಗಳು ಒಂದಷ್ಟು ಬಿರುಸು ಕಾಣಲಾರಂಭಿಸಿವೆ.
ಚೇನಂಡ ಮುಂದಿನ ಹಂತಕ್ಕೆ
೨೬ನೇ ವರ್ಷದ ಕೊಡವ ಹಾಕಿ ನಮ್ಮೆಯಲ್ಲಿ ಇಂದು ಆತಿಥೇಯ ಚೇನಂಡ ತಂಡವು ಮಂದನೆರವAಡವನ್ನು ಭರ್ಜರಿ ೫-೦ ಗೋಲುಗಳಿಂದ ಸೋಲಿಸಿ ಮುಂದಿನ ಹಂತವನ್ನು ಪ್ರವೇಶಿಸಿತು.
ಬೊಳಕಾರಂಡ ಹಾಗೂ ಚಿಕ್ಕಂಡ ತಂಡಗಳ ನಡುವಿನ ಪಂದ್ಯದಲ್ಲಿ ೨-೦ ಗೋಲುಗಳ ಅಂತರದಲ್ಲಿ ಬೊಳಕಾರಂಡ ಜಯ ಸಾಧಿಸಿತು.
ಕೈಬುಲಿರ ತಂಡವು ಬೊಳ್ಳೆರವನ್ನು ೧-೦ ಗೋಲುಗಳಿಂದ ಮಣಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.
ಮಾಪಂಗಡ ತಂಡವು ಮನೆಯಪಂಡವನ್ನು ಟೈ ಬ್ರೇಕರ್ನಲ್ಲಿ ೩-೨ ಗೋಲುಗಳಿಂದ ಸೋಲಿಸಿತು. ನಿಗದಿತ ಪಂದ್ಯವು ೧-೧ ಸಮಬಲವಾಗಿತ್ತು.
ಅಚ್ಚಪಂಡ ತಂಡವು ಪೊನ್ನಚಂಡವನ್ನು ೩-೨ ಗೋಲುಗಳಿಂದ ಸೋಲಿಸಿತು. ಕಂಬೀರAಡ ತಂಡವು ಅಲ್ಲುಮಾಡ ತಂಡವನ್ನು ೫-೦ ಗೋಲುಗಳಿಂದ ಮಣಿಸಿತು. ಕೊಂಡಿರ ತಂಡವು ಬೇರೆರ ತಂಡದ ವಿರುದ್ಧ ೨-೧ ಗೋಲುಗಳಿಂದ ಜಯ ಸಾಧಿಸಿತು. ಮುಕ್ಕಾಟಿರ (ಕಡಗದಾಳು) ತಂಡವು ಬಾರಿಯಂಡ ತಂಡವನ್ನು ೩-೨ ಗೋಲುಗಳಿಂದ ಮಣಿಸಿತು. ಮುಕ್ಕಾಟಿರ(ಕಡಗದಾಳು) ಪರ ನಾಣಯ್ಯ ಹ್ಯಾಟ್ರಿಕ್ ಬಾರಿಸಿದರು.
ಕರ್ತಮಾಡ(ಬಿರುನಾಣಿ) ತಂಡವು ಕುಟ್ಟಂಡ(ಅಮ್ಮತ್ತಿ) ತಂಡವನ್ನು ಟೈ ಬ್ರೇಕರ್ನಲ್ಲಿ ೪-೩ ಗೋಲುಗಳಿಂದ ಮಣಿಸಿತು. ನಿಗದಿತ ಪಂದ್ಯದಲ್ಲಿ ೦-೦ ಸಮಬಲ ಸಧನೆಯಾಗಿತ್ತು.
ಅಳಮೇಂಗಡ ತಂಡವು ಕರ್ತಮಾಡ(ಬಿ ಶೆಟ್ಟಿಗೇರಿ) ತಂಡವನ್ನು ೫-೦ ಗೋಲುಗಳಿಂದ ಮಣಿಸಿತು.
ಮಾಳೇಟಿರ(ಕೆದಮುಳ್ಳೂರು) ಅಲ್ಮಚಂಡವನ್ನು ೬-೦ ಗೋಲುಗಳಿಂದ ಮಣಿಸಿತು. ಬೊಟ್ಟಂಗಡ ತಂಡವು ಪುತ್ತರಿರ ತಂಡವನ್ನು ೧-೦ ಗೋಲುಗಳಿಂದ ಮಣಿಸಿತು. ಚಂದೂರ ತಂಡ ವಲ್ಲಂಡ ತಂಡವನ್ನು ೩-೦ ಗೋಲುಗಳಿಂದ ಮಣಿಸಿತು. ನಾಯಕಂಡ ತಂಡವು ಟೈ ಬ್ರೇಕರ್ನಲ್ಲಿ ಮಲ್ಚಿರ ತಂಡವನ್ನು ೫-೪ ಗೋಲುಗಳಿಂದ ಮಣಿಸಿತು. ನಿಗದಿತ ಪಂದ್ಯದಲ್ಲಿ ೨-೨ ಸಮಬಲವಾಗಿತ್ತು. ಮಳವಂಡ ತಂಡವು ಬೊಳ್ಳಂಡ ತಂಡವನ್ನು ೨-೧ ಗೋಲುಗಳಿಂದ ಮಣಿಸಿತು.
ಚೊಟ್ಟೆಯಂಡಮಾಡ ತಂಡವು ಚೆರಿಯಪಂಡವನ್ನು ಟೈ ಬ್ರೇಕರ್ನಲ್ಲಿ ೬-೫ ಗೋಲುಗಳಿಂದ ಸೋಲಿಸಿತು. ನಿಗದಿತ ಪಂದ್ಯದಲ್ಲಿ ೧-೧ ಸಮಬಲ ಸಾಧನೆಯಾಗಿತ್ತು. ಮೂಕೋಂಡ ತಂಡವು ಚೆಕ್ಕೆರವನ್ನು ೩-೦ ಗೋಲುಗಳಿಂದ ಸೋಲಿಸಿತು. ಮರುವಂಡ ತಂಡವು ಮಾಣಿಪಂಡ ತಂಡವನ್ನು ಟೈ ಬ್ರೇಕರ್ನಲ್ಲಿ ೪-೨ ಗೋಲುಗಳಿಂದ ಮಣಿಸಿತು. ನಿಗದಿತ ಪಂದ್ಯದಲ್ಲಿ ೧-೧ ಸಮಬಲ ಸಾಧನೆಯಾಗಿತ್ತು. ಮಂಡೇಟಿರ ತಂಡವು ಬೊಳಿಯಾಡಿರ ತಂಡವನ್ನು ೨-೦ ಗೋಲುಗಳಿಂದ ಮಣಿಸಿತು. ಕುಂದೀರ ತಂಡವು ಕೊಲ್ಲಿರ ತಂಡವನ್ನು ೨-೦ ಗೋಲುಗಳಿಂದ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು. ಚೋಯಮಾಡಂಡ ತಂಡ ಕೊಕ್ಕಂಡ ತಂಡವನ್ನು ೨-೧ ಗೋಲುಗಳಿಂದ ಮಣಿಸಿತು. ಪುಲ್ಲೆರ ತಂಡವು ತಾಚಮಂಡ ತಂಡವನ್ನು ೨-೦ ಗೋಲುಗಳಿಂದ ಮಣಿಸಿತು. ಚಿಂಡಮಾಡ ತಂಡವು ೧-೦ ಅಂತರದಲ್ಲಿ ಕನ್ನಂಬಿರ ತಂಡದ ವಿರುದ್ಧ ಜಯ ಸಾಧಿಸಿತು. ಆಲೆಮಾಡ ತಂಡವು ತಿರುಟೇರ ತಂಡವನ್ನು ೧-೦ ಗೋಲುಗಳಿಂದ ಮಣಿಸಿತು. ಅರಮಣಮಾಡ ತಂಡವು ಬಾಳೆಯಡವನ್ನು ಟೈ ಬ್ರೇಕರ್ನಲ್ಲಿ ೫-೪ ಗೋಲುಗಳಿಂದ ಮಣಿಸಿತು. ನಿಗದಿತ ಪಂದ್ಯದಲ್ಲಿ ೦-೦ ಸಮಬಲವಾಗಿತ್ತು.