ಸೋಮವಾರಪೇಟೆ, ಏ. ೧೨: ಇಲ್ಲಿನ ಡಾಲ್ಫಿನ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸರ್ಕಾರಿ ಪದವಿಪೂರ್ವ ಕಾಲೇಜಿನ ಟರ್ಫ್ ಮೈದಾನದಲ್ಲಿ ಪ್ರಾರಂಭವಾದ ಬೇಸಿಗೆ ಹಾಕಿ ತರಬೇತಿ ಶಿಬಿರವನ್ನು ಬ್ಲೂ ಸ್ಟಾರ್ ಹಾಕಿ ಸಂಸ್ಥೆಯ ಹಿರಿಯ ಹಾಕಿ ಆಟಗಾರ ಶಶಿ ತಾಂಬೂರ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಚಿಕ್ಕಂದಿನಿAದಲೇ ಕ್ರೀಡಾ ತರಬೇತಿ ಪಡೆದು, ಕ್ರೀಡೆಯಲ್ಲಿ ಮುನ್ನಡೆಯುವುದರಿಂದ ಭವಿಷ್ಯದಲ್ಲಿ ಉತ್ತಮ ಕ್ರೀಡಾಪಟುಗಳಾಗಿ ಸಾಧನೆ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ಡಾಲ್ಫಿನ್ಸ್ ಸ್ಪೋರ್ಟ್ಸ್ ಕ್ಲಬ್ ಪ್ರತಿವರ್ಷ ಹಾಕಿ ತರಬೇತಿ ಶಿಬಿರ ನಡೆಸುತ್ತಿರುವುದು ಶ್ಲಾಘನೀಯ ಎಂದರು.

ಮುಖ್ಯ ಅತಿಥಿಯಾಗಿದ್ದ ಪಿಎಲ್‌ಡಿ ಬ್ಯಾಂಕ್ ವ್ಯವಸ್ಥಾಪಕ ಶಿವಕುಮಾರ್ ಮಾತನಾಡಿ, ಇಂದು ಬಿಡುವಿಲ್ಲದ ಕೆಲಸದಲ್ಲಿ ಹೆಚ್ಚಿನ ಮಂದಿ ಕ್ರೀಡೆಯತ್ತ ಬರುತ್ತಿಲ್ಲ. ಈ ಹಿನ್ನೆಲೆ ಹೆಚ್ಚಿನ ಸಂಘ-ಸAಸ್ಥೆಗಳು ಶಿಬಿರಗಳನ್ನು ಆಯೋಜಿಸಿ ಮಕ್ಕಳಿಗೆ ತರಬೇತಿ ನೀಡಲು ಸಾಧ್ಯವಾಗುತ್ತಿಲ್ಲ. ಮಕ್ಕಳ ದೈಹಿಕ ಮತ್ತು ಮಾನಸಿಕ ಸಧೃಢತೆಗಾಗಿ ಕ್ರೀಡೆ ಪ್ರಮುಖವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಡಾಲ್ಫಿನ್ಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಬಿ.ಆರ್. ಮಹೇಶ್, ಕಾರ್ಯದರ್ಶಿ ಬಿ.ಎನ್. ಮಂಜುನಾಥ್, ಖಜಾಂಚಿ ವಿನಾಯಕ್, ಬ್ಲೂ ಸ್ಟಾರ್ ಹಾಕಿ ಸಂಸ್ಥೆಯ ಹಿರಿಯ ಆಟಗಾರ ಹಾಲಪ್ಪ, ಸ್ಪೋರ್ಟ್ಸ್ ಕ್ಲಬ್ ಸ್ಥಾಪಕ ಅಧ್ಯಕ್ಷ ಅಶೋಕ್, ಮಾಜಿ ಅಧ್ಯಕ್ಷ ಮಹೇಶ್, ಓಂಪ್ರಕಾಶ್ ಇದ್ದರು.