ಕುಶಾಲನಗರ, ಏ. ೧೨: ೨೦೨೬-೨೭ ರ ಆಸ್ತಿ ತೆರಿಗೆ ಮತ್ತು ಉದ್ದಿಮೆ ಪರವಾನಗಿ ತೆರಿಗೆ ಸಂಗ್ರಹ ಮಾಡಲು ಪುರಸಭೆ ವ್ಯಾಪ್ತಿಯ ಪಟ್ಟಣದ ಆಯ್ದ ಕಡೆಗಳಲ್ಲಿ ಶಿಬಿರ ಮಾಡಬೇಕೆಂದು ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟಿçÃಸ್ ಪದಾಧಿಕಾರಿಗಳು ಮುಖ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಪಟ್ಟಣದ ವಿವಿಧ ಸ್ಥಳಗಳಲ್ಲಿ ತೆರಿಗೆ ಸಂಗ್ರಹ ಕ್ಯಾಂಪ್ ಮಾಡುವುದರಿಂದ ನಿರೀಕ್ಷೆಗೂ ಮೀರಿದ ತೆರಿಗೆ ಸಂಗ್ರಹವಾಗುವುದರ ಜೊತೆಗೆ ಸಾರ್ವಜನಿಕರಿಗೂ ತುಂಬ ಅನುಕೂಲವಾಗಲಿದೆ. ಅನವಶ್ಯಕ ವಾಗಿ ಕಚೇರಿ ಅಲೆಯುವುದು ತಪ್ಪುತ್ತದೆ. ಸಿಬ್ಬಂದಿಗಳಿಗೆ ಕಚೇರಿಯಲ್ಲಿ ಕೆಲಸದ ಒತ್ತಡವಿರುತ್ತದೆ. ಕ್ಯಾಂಪ್ ಮಾಡಿದರೆ ಸಿಬ್ಬಂದಿಗಳು ಕೇವಲ ತೆರಿಗೆ ಸಂಗ್ರಹದ ಕಡೆ ಗಮನ ಹರಿಸಲು ಸಹಕಾರಿಯಾಗುತ್ತದೆ. ಈ ಸಂಬAಧ ಪುರಸಭೆ ಮೂಲಕ ತಕ್ಷಣವೇ ಕ್ಯಾಂಪ್ ಮಾಡುವುದರಿಂದ ಏಪ್ರಿಲ್ ೩೧ ರವರೆಗೆ ತೆರಿಗೆ ವಿನಾಯಿತಿ ಸೌಲಭ್ಯ ಜನರಿಗೆ ದೊರೆಯುತ್ತದೆ ಎಂದು ಅಧ್ಯಕ್ಷ ಕೆ.ಎಸ್. ನಾಗೇಶ್ ಹೇಳಿದರು. ಮುಖ್ಯಾಧಿಕಾರಿ ಗಿರೀಶ್ ಮಾತನಾಡಿ, ಪುರಸಭೆ ವತಿಯಿಂದ ಪ್ರತಿವರ್ಷವೂ ಕ್ಯಾಂಪ್ ಮಾಡುತ್ತಿದ್ದೇವೆ. ಈ ವರ್ಷವೂ ಜನರ ಅನುಕೂಲಕ್ಕಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು. ಚೇಂಬರ್ ಕಾರ್ಯದರ್ಶಿ ಚಿತ್ರ ರಮೇಶ್, ಖಜಾಂಚಿ ಎನ್.ವಿ. ಬಾಬು, ನಿರ್ದೇಶಕರಾದ ಪಿ.ಕೆ. ಜಗದೀಶ್, ಪಿ.ಎಂ. ಮೋಹನ್, ಕೆ.ಎನ್. ದೇವರಾಜ್ ಇದ್ದರು.