ಮಡಿಕೇರಿ, ಏ. 11: ಮಡಿಕೇರಿಯ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೀಂ-ಕೆ.ಆರ್.ಟಿ ಆಯೋಜಿತ ದಶಮಂಟಪ ಪ್ರೀಮಿಯರ್ ಲೀಗ್-2 ಲೀಗ್ ಮಾದರಿಯ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿ ತಾ.12 ರಂದು (ಇಂದು) ಸಮಾರೋಪಗೊಳ್ಳಲಿದೆ.
ವಿಜೇತರಿಗೆ ಆಕರ್ಷಕ ರೋಲಿಂಗ್ ಟ್ರೋಫಿ ಹಾಗೂ ನಗದು ಸೇರಿದಂತೆ ವಿನ್ನರ್ಸ್ ಟ್ರೋಫಿ ಕೂಡ ಪ್ರದಾನ ಮಾಡಲಾಗುವುದು. ಮೊದಲ ಹಾಗೂ ಎರಡನೆಯ ರನ್ನರ್ಸ್ ಟ್ರೋಫಿಯೂ ಪ್ರದಾನ ಮಾಡಲಾಗುವುದು.
2ನೇ ದಿನವಾದ ಇಂದು ನಡೆದ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆ.ಆರ್.ಟಿ-ಬಿ ತಂಡ 5 ಓವರ್ಗಳಲ್ಲಿ 6 ವಿಕೆಟ್ಗಳ ನಷ್ಟಕ್ಕೆ 55 ರನ್ಗಳನ್ನು ಗಳಿಸಿತು. ಇದನ್ನು ಬೆನ್ನಟ್ಟಿದ ಭಗವತಿ-ಸಿ ತಂಡ 4.2 ಓವರ್ಗಳಲ್ಲಿ ಮೊತ್ತವನ್ನು 4 ವಿಕೆಟ್ಗಳ ನಷ್ಟಕ್ಕೆ ಕಲೆ ಹಾಕಿ ಜಯ ಸಾಧಿಸಿತು.
ಕುಂದುರುಮೊಟ್ಟೆ ಹಾಗೂ ಕಾಮಾಕ್ಷಿ-ಬಿ ತಂಡಗಳ ನಡುವಿನ ಪಂದ್ಯದಲ್ಲಿ ಕಾಮಾಕ್ಷಿ-ಬಿ ತಂಡ 7 ವಿಕೆಟ್ಗಳ ನಷ್ಟಕ್ಕೆ 61 ರನ್ ಗಳಿಸಿತು. ಇದನ್ನು ಬೆನ್ನಟ್ಟಿದ ಕುಂದುರುಮೊಟ್ಟೆ ತಂಡ 7 ವಿಕೆಟ್ ನಷ್ಟಕ್ಕೆ 27 ರನ್ ಗಳಿಸಿ ಸೋಲನುಭವಿಸಿತು.
ಕಾಮಾಕ್ಷಿ-ಬಿ ಹಾಗೂ ಕೆ.ಆರ್.ಟಿ-ಬಿ ನಡುವಿನ ಪಂದ್ಯದಲ್ಲಿ ಕಾಮಾಕ್ಷಿ-ಬಿ ತಂಡ 3 ವಿಕೆಟ್ಗಳ ನಷ್ಟಕ್ಕೆ 77 ರನ್ ಗಳಿಸಿತು. ಕೆ.ಆರ್.ಟಿ ಬಿ ತಂಡ 5 ವಿಕೆಟ್ಗಳನ್ನು ಕಳೆದುಕೊಂಡು 24 ರನ್ಗಳನ್ನು ಗಳಿಸಿತು.
ಭಗವತಿ-ಸಿ ಹಾಗೂ ಕುಂದುರುಮೊಟ್ಟೆ ನಡುವಿನ ಪಂದ್ಯದಲ್ಲಿ ಭಗವತಿ ತಂಡ 4 ವಿಕೆಟ್ಗಳ ನಷ್ಟಕ್ಕೆ 76 ಗಳಿಸಿತು. ಕುಂದುರುಮೊಟ್ಟೆ ತಂಡ 1 ವಿಕೆಟ್ಗಳನ್ನು ಕಳೆದುಕೊಂಡು 54 ರನ್ ಗಳಿಸಿ ಸೋಲನುಭವಿಸಿತು.
ಕಾಮಾಕ್ಷಿ-ಬಿ ಹಾಗೂ ಭಗವತಿ-ಸಿ ತಂಡಗಳ ನಡುವಿನ ಪಂದ್ಯದಲ್ಲಿ ಕಾಮಾಕ್ಷಿ ಮೊದಲು ಬ್ಯಾಟ್ ಮಾಡಿ 7 ವಿಕೆಟ್ ಕಳೆದುಕೊಂಡು 37 ರನ್ ಗಳಿಸಿತು. ಇದನ್ನು ಬೆನ್ನಟ್ಟಿದ ಭಗವತಿ ತಂಡ 1 ವಿಕೆಟ್ಗಳ ನಷ್ಟಕ್ಕೆ 4.1 ಓವರ್ಗಳಲ್ಲಿ ಗುರಿ ಸಾಧಿಸಿತು.