ಗೋಣಿಕೊಪ್ಪಲು, ಏ. 11: ಗೋಣಿಕೊಪ್ಪ ಸಮೀಪದ ಅರುವತ್ತೋಕ್ಲುವಿನ ಅಥ್ಲಾನ್ ಟರ್ಫ್ ಮೈದಾನದಲ್ಲಿ ದೇವಣಗೇರಿ ಮುಕ್ಕಾಟಿರ ಕೊಡವ ಕೌಟುಂಬಿಕ ಫುಟ್ಬಾಲ್ ಪಂದ್ಯಾವಳಿ ನಡೆಯುತ್ತಿದ್ದು 4ನೇ ದಿನದ ಪಂದ್ಯಾವಳಿಯಲ್ಲಿ 16 ತಂಡಗಳು ಮುನ್ನಡೆ ಸಾಧಿಸಿದವು.

ಕೊಟ್ಟಂಗಡ (ಬಿ), ಪುಳ್ಳಂಗಡ, ಚೆಂಬಾಂಡ, ಪೆಮ್ಮಂಡ, ಚೆರುಮಂದಂಡ, ಮುರುವಂಡ, ಮೇಚಂಡ, ಕೊಲ್ಲಿರ, ಕಳ್ಳಿಚಂಡ, ಮಲ್ಲಂಗಡ, ಕೊಟ್ಟಂಗಡ (ಎ), ಕೊಟ್ಟಂಗಡ (ಬಿ), ತೀತಿರ, ಮಾಚಿಮಾಡ (ಎ), ಕೇಚೆಟ್ಟಿರ, ಜಮ್ಮಡ ಕುಟುಂಬದ ತಂಡಗಳು 2ನೇ ಸುತ್ತಿಗೆ ಪ್ರವೇಶ ಪಡೆದವು.

ಬಲ್ಲಚಂಡ, ಕೋದೇಂಗಡ, ಆಪಟ್ಟಿರ, ಕಾಂಡಂಡ, ಕೊಳುವಂಡ, ಚಿಮ್ಮಣಮಾಡ, ಕುಪ್ಪಂಡ (ನಾಂಗಾಲ), ಮೂಕಳೇರ, ಮೊಣ್ಣಂಡ, ಮಾಚಿಮಂಡ, ಮಲ್ಲಮಾಡ, ಚೇಂದಂಡ, ಕಳಿಯಂಡ, ಬಿದ್ದಂಡ, ಆದೇಂಗಡ ಕುಟುಂಬದ ತಂಡಗಳು ಪಂದ್ಯಾವಳಿಯಿಂದ ಹೊರನಡೆದವು.

ಹೊನಲು ಬೆಳಕಿನಲ್ಲಿ ಪಂದ್ಯಾವಳಿಗಳು 5 ಎ ಸೈಡ್ ಮಾದರಿಯಲ್ಲಿ ನಡೆದವು. ಪ್ರತಿ ಪಂದ್ಯಾವಳಿಯು ಅತ್ಯಂತ ರೋಚಕವಾಗಿ ಕಂಡುಬಂತು. ತಾಂತ್ರಿಕ ವಿಭಾಗದಲ್ಲಿ ಮುಕ್ಕಾಟಿರ ನಿಕ್ಕಿ ಅಪ್ಪಚ್ಚು, ಮುಕ್ಕಾಟಿರ ಮಿಲನ್ ಅಪ್ಪಚ್ಚು, ಮುಕ್ಕಾಟಿರ ರೇಹಾ ಅಪ್ಪಚ್ಚು, ಮುಕ್ಕಾಟಿರ ಶೈಲಾ ನಂಜಪ್ಪ, ಮುಕ್ಕಾಟಿರ ಪವನ್ ನಂಜಪ್ಪ, ಮುಕ್ಕಾಟಿರ ನಿವ್ಯ ತಂಗಮ್ಮ, ವಿಶ್ಲೇಷಕರಾಗಿ ಅಜ್ಜೆಟ್ಟಿರ ವಿಕ್ರಮ್ ಉತ್ತಪ್ಪ ಹಾಗೂ ಮೂಕಚಂಡ ಸರಿತಾ ಬೊಳ್ಳಮ್ಮ ಕಾರ್ಯನಿರ್ವಹಿಸಿದರು. ಪಂದ್ಯಾವಳಿಯಲ್ಲಿ ಮುಕ್ಕಾಟಿರ ಕುಟುಂಬದ ಅಧ್ಯಕ್ಷ ಮುಕ್ಕಾಟಿರ ಕಿಶನ್ ಕರುಂಬಯ್ಯ ನೇತೃತ್ವದಲ್ಲಿ ಪಂದ್ಯಾವಳಿಗಳು ನಡೆಯುತ್ತಿದ್ದು, ಮುಕ್ಕಾಟಿರ ಕುಟುಂಬಸ್ಥರು ಭಾಗವಹಿಸಿದ್ದರು.

- ಹೆಚ್.ಕೆ. ಜಗದೀಶ್