ಚೆಯ್ಯಂಡಾಣೆ, ಏ. 10: ಕೂರ್ಗ್ ಜಂಇಯತ್ತುಲ್ ಉಲಮಾ ಮಡಿಕೇರಿ ಝೋನ್ ಸಮಿತಿಯ ವತಿಯಿಂದ ಹಜ್ ಯಾತ್ರಾರ್ಥಿಗಳಿಗೆ ತರಬೇತಿ ಶಿಬಿರ ಚೆರಿಯಪರಂಬುವಿನಲ್ಲಿ ಜರುಗಿತು.

ಚೆರಿಯಪರಂಬು ಶಾದಿ ಮಹಲ್ ಸಭಾಂಗಣದಲ್ಲಿ ಕೂರ್ಗ್ ಜಂಇಯತ್ತುಲ್ ಉಲಮಾ ಮಡಿಕೇರಿ ಝೋನ್ ಅಧ್ಯಕ್ಷ ಮುನೀರ್ ಮಲ್ಹರಿ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದ ಶಿಬಿರವನ್ನು ಶಾದುಲಿ ಫೈಝಿ ಉದ್ಘಾಟಿಸಿ ಮಾತನಾಡಿದರು.

ಅಬ್ದುಲ್ ರಶೀದ್ ದಾರಿಮಿ ಕಣ್ಣೂರು ಅವರು ಹಜ್ ಯಾತ್ರಾರ್ಥಿಗಳಿಗೆ ತರಬೇತಿ ಶಿಬಿರ ನೀಡಿ ಹಜ್ ಸಂದರ್ಭ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಹಜ್ ಇನ್ಸ್‍ಪೆಕ್ಟರ್ ಫಾರೂಕ್ ಮಾತನಾಡಿದರು.

150 ಕ್ಕೂ ಹೆಚ್ಚು ಹಜ್ ಯಾತ್ರಾರ್ಥಿಗಳು ಶಿಬಿರದ ಸದುಪಯೋಗ ಪಡೆದುಕೊಂಡರು ಮುಖ್ಯ ಅತಿಥಿಗಳಾಗಿ ಕೂರ್ಗ್ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ, ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ಪೆÇೀಯಕೇರಿ ಹಂಝ, ಎಸ್‍ವೈಎಸ್ ಮಾಜಿ ರಾಜ್ಯಾಧ್ಯಕ್ಷ ಅಬ್ದುಲ್ ಹಫೀಲ್ ಸಅದಿ, ಕೂರ್ಗ್ ಜಂಇಯತ್ತುಲ್ ಉಲಮಾ ಝೋನ್ ಸಮಿತಿಯ ಕಾರ್ಯದರ್ಶಿ ಸಂಶುದ್ದಿನ್ ಅಮ್ಜದಿ, ಕೋಶಾಧಿಕಾರಿ ಮುನೀರ್ ಸಅದಿ,ಎಸ್ ವೈ ಎಸ್ ಇಸಭಾ ಕಾರ್ಯದರ್ಶಿ ಬಷೀರ್ ಕೊಟ್ಟಮುಡಿ, ಎಸ್‍ವೈಎಸ್ ಇಸಭಾ ತಂಡದ ಸದಸ್ಯರು, ಚೆರಿಯಪರಂಬು ಸುನ್ನೀ ಸಂಘ ಕುಟುಂಬದ ಕಾರ್ಯಕರ್ತರು ಮತ್ತಿತರರು ಉಪಸ್ಥಿತರಿದ್ದರು.

ಸಂಶುದ್ದಿನ್ ಅಮ್ಜದಿ ಸ್ವಾಗತಿಸಿ, ವಂದಿಸಿದರು.