ಸಿದ್ದಾಪುರ, ಏ. 10: ರೋಮನ್ ಕ್ಯಾಥೋಲಿಕ್ ಕ್ರಿಶ್ಚಿಯನ್ ಕ್ರೀಡಾಕೂಟಕ್ಕೆ ಸಿದ್ದಾಪುರದಲ್ಲಿ ಚಾಲನೆ ನೀಡಲಾಯಿತು. ಸಿಜೆ ಬಿಲ್ಡ್ ವೇರ್ ಪ್ರಸ್ತುತಿಯಲ್ಲಿ ಐ.ಪಿ.ಎಲ್ ಮಾದರಿಯಲ್ಲಿ ಸಿದ್ದಾಪುರದ ಪ್ರೌಢಶಾಲಾ ಮೈದಾನದಲ್ಲಿ ಆಯೋಜಿಸಲಾದ ಕ್ರಿಶ್ಚಿಯನ್ ಪ್ರೀಮಿಯರ್ ಲೀಗ್ (ಸಿ.ಪಿ.ಎಲ್.) ಆವೃತ್ತಿ -1ರ ಕ್ರಿಕೆಟ್ ಪಂದ್ಯಾವಳಿಗೆ ಸಿದ್ದಾಪುರದ ಸೆಂಟ್ ಮೇರಿಸ್ ಚರ್ಚಿನ ಧರ್ಮ ಗುರುಗಳಾದ ಜೋಸೆಫ್ ವೆಳ್ಯಪರಂಬು ಹಾಗೂ ಮ್ಯಾಥ್ಯೂ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಕೊಡಗು ಜಿಲ್ಲಾ ಎಸ್.ಎನ್.ಡಿ.ಪಿ. ಯೂನಿಯನ್ ಜಿಲ್ಲಾಧ್ಯಕ್ಷ ವಿ.ಕೆ. ಲೋಕೇಶ್, ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಎಲ್ಲಾ ಸಮುದಾಯದವರು ಕ್ರೀಡಾಕೂಟವನ್ನು ಆಯೋಜಿಸುತ್ತಿರುವುದು ಉತ್ತಮ ಕಾರ್ಯ. ಕ್ರೀಡಾಕೂಟದಿಂದ ಯುವಕರಲ್ಲಿ ಐಕ್ಯತೆ ಮತ್ತು ಸೌಹಾರ್ದತೆಯನ್ನು ಬೆಳೆಸಲು ಸಹಕಾರಿಯಾಗುತ್ತದೆ. ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಕೂಡ 4ಆರನೇ ಪುಟಕ್ಕೆ
(ಮೊದಲ ಪುಟದಿಂದ) ಉತ್ತಮವಾಗಲು ಸಾಧ್ಯವಾಗುತ್ತದೆ. ಇದಲ್ಲದೆ ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿಸಿದರು.
ಸ್ಕೌಟ್ ಅಂಡ್ ಗೈಡ್ಸ್ ಪ್ರಮುಖರಾದ ಕೆ.ಟಿ. ಬೇಬಿ ಮ್ಯಾಥ್ಯೂ ಮಾತನಾಡಿ, ಕ್ರಿಶ್ಚಿಯನ್ ಯುವಕರಿಗೆ ಗ್ರಾಮೀಣ ಪ್ರದೇಶದಲ್ಲಿರುವ ಕ್ರೀಡಾಪಟುಗಳ ಪ್ರತಿಭೆಗಳನ್ನು ಹೊರತರಲು ಕ್ರೀಡಾಕೂಟವು ಸಹಕಾರಿಯಾಗಿದೆ. ಸಿದ್ದಾಪುರದಲ್ಲಿ ಆಯೋಜಿಸಿರುವ ಕ್ರೀಡಾಕೂಟದಲ್ಲಿ ಜಿಲ್ಲೆಯ 12 ತಂಡಗಳು ಭಾಗವಹಿಸಿದ್ದು, ಈಗಾಗಲೇ ಐ.ಪಿ.ಎಲ್ ಮಾದರಿಯಲ್ಲಿ ಕ್ರೀಡಾಪಟುಗಳನ್ನು ಹರಾಜಿನ ಮೂಲಕ ಆಯ್ಕೆಗೊಳಿಸಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಎಸ್. ವೆಂಕಟೇಶ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾರ್ಜ್ ವಹಿಸಿದ್ದರು. ವೀರಾಜಪೇಟೆ ಗ್ಯಾರಂಟಿ ಅನುμÁ್ಠನದ ಅಧ್ಯಕ್ಷ ಪಿ.ವಿ. ಜಾನ್ಸನ್, ದಿವ್ಯ ಜ್ಯೋತಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿರಿಲ್ ಮೋರಸ್, ಜಿಲ್ಲಾ ಕ್ರೈಸ್ತ ಸಂಘದ ಅಧ್ಯಕ್ಷ ಜಾನ್ಸನ್ ಪಿಂಟೋ, ಜಿಲ್ಲಾ ಸ್ಕೌಟ್ ಅಂಡ್ ಗೈಡ್ಸ್ ಆಯುಕ್ತ ಜಿಮ್ಮಿ ಸಿಕ್ವೇರಾ, ಕ್ರೈಸ್ತ ಸಂಘದ ಪ್ರಮುಖರಾದ ಟಾಮಿ ಥೋಮಸ್, ಆಂಟೋನಿ ರೋಬಿನ್, ರಂಜಿತ್, ಟಿ.ಜೆ. ಸಭಾಸ್ಟಿನ್, ಎಂ.ಜೆ. ಜಾನ್ಸನ್ ಇನ್ನಿತರರು ಹಾಜರಿದ್ದರು. ಸನಲ್ ಸ್ವಾಗತಿಸಿ, ಟಾಮಿ ಥೋಮಸ್ ಕಾರ್ಯಕ್ರಮ ನಿರೂಪಿಸಿದರು.