ಮಡಿಕೇರಿ, ಏ. 10: ವೀರಾಜಪೇಟೆ ತಾಲೂಕಿನ ಕಾನೂರು ಗ್ರಾಮದ ಬ್ರಹ್ಮಗಿರಿಪುರದಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಮುತ್ತಪ್ಪ ದೇವರ ಉತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು. ಭಾನುವಾರ ಸಂಜೆ 6 ಗಂಟೆಗೆ ಮುತ್ತಪ್ಪನ ವೆಳ್ಳಾಟಂನೊಂದಿಗೆ ಉತ್ಸವ ಆರಂಭವಾಯಿತು. ರಾತ್ರಿ 12 ಗಂಟೆಗೆ ಬಂದಂತಹ ಭಗವತಿ ದೇವರ ತೆರೆಯು ನೆರೆದಿದ್ದ ಭಕ್ತಾದಿಗಳ ಗಮನ ಸೆಳೆಯಿತು.
ಮಂಗಳವಾರ ಬೆಳಿಗ್ಗೆ 4ರ ವೇಳೆ ಎತ್ತರದ ಗರಿಗಳನ್ನು ಕಟ್ಟಿಕೊಂಡು ಎರಡು ಕೋಲುಗಳ ಮೇಲೆ ಗುಳಿಗ ದೇವರ ತೆರೆ, ಅಗ್ನಿ ಕುಂಡದ ಮೇಲೆ ಓಡುವ ಕುಟ್ಟಿಚಾತನ್, ಮುತ್ತಪ್ಪ ಮತ್ತು ತಿರುವಪ್ಪ ದೇವರ ಬಳಿ ಉತ್ಸವದಲ್ಲಿ ಭಾಗಿಯಾದ ಭಕ್ತಾದಿಗಳು ಆರ್ಶೀವಾದ ಪಡೆದುಕೊಂಡರು. ಮುತ್ತಪ್ಪ, ತಿರುವಪ್ಪ, ಸಾಸ್ತಪ್ಪನ್, ಕುಟ್ಟಿಚಾತನ್, ವಸೂರಿಮಲೆ, ಭಗವತಿ, ಗುಳಿಗನ್, ಕಂಡಕರ್ಣ ಹೀಗೆ ವಿವಿಧ ರೀತಿಯ ತೆರೆಗಳನ್ನು ಕಟ್ಟಲಾಗಿತ್ತು. ಉತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮದ 1,000 ಕ್ಕೂ ಅಧಿಕ ಭಕ್ತಾದಿಗಳು ಆರ್ಶೀವಾದ ಪಡೆದರು. ಭಾನುವಾರ ರಾತ್ರಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭ ಶ್ರೀ ಮುತ್ತಪ್ಪ ದೇವಾಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಈಶ್ವರ, ಕಾರ್ಯದರ್ಶಿ ಕಾರ್ತಿಕ್, ಸದಸ್ಯರಾದ ವಿನು, ರವಿ, ರಾಜೇಶ್, ವಿಜಯ್, ಸುನಿ, ಅನಿ, ಸಂತೋμï, ಮಂಜುನಾಥ್, ಮಣಿ, ರಘು, ರಂಜಿತ್, ಪಾಪು, ದಿನೇಶ್, ತಟ್ಟೆಕೆರೆ ಮಣಿ, ತಟ್ಟೆಕೆರೆ ಕೃಷ್ಣ ಸೇರಿದಂತೆ ಇತರರಿದ್ದರು.