ಕೂಡಿಗೆ, ಏ. 8: ಕ್ರೀಡಾಪಟುಗಳು ಸೋಲು - ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡಾ ಸ್ಪೂರ್ತಿಯಿಂದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಬೇಕು ಎಂದು ನಂಜರಾಯಪಟ್ಟಣ ಗ್ರಾ.ಪಂ. ಮಾಜಿ ಅಧ್ಯಕ್ಷ ಸಿ.ಎಲ್. ವಿಶ್ವ ಕರೆ ನೀಡಿದರು.

ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಪಟ್ಟಣದ ಜೈ ಭೀಮ್ ಬ್ರದರ್ಸ್ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ 136ನೇ ಜಯಂತಿಯ ಅಂಗವಾಗಿ ಹೊಸಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಕ್ರಿಕೆಟ್ ಟೂರ್ನಿಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಮ್ಮ ಗ್ರಾಮ ಮೊದಲಿನಿಂದಲೂ ಸಾಮರಸ್ಯ ಕ್ರೀಡೆಗಳಿಗೆ ಹೆಸರುವಾಸಿ ಎಂದರು. ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ, ಕ್ರೀಡಾಕೂಟ ಸಂಯೋಜಕ ಆರ್.ಕೆ. ಚಂದ್ರು ಮಾತನಾಡಿ, ಗ್ರಾಮದ ಯುವಕರನ್ನು ಒಗ್ಗೂಡಿಸಿ ಬಾಂಧವ್ಯ ಬೆಸೆಯುವ ಉದ್ದೇಶದಿಂದ ಕ್ರೀಡಾಕೂಟ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರೌಢಶಾಲೆ, ಪಿಯುಸಿ ವಿದ್ಯಾರ್ಥಿಗಳಿಗೆ ಕೂಡ ಕ್ರೀಡಾಕೂಟ ಆಯೋಜಿಸುವ ಚಿಂತನೆಯಿದೆ ಎಂದು ತಿಳಿಸಿದರು.

ನಂಜರಾಯಪಟ್ಟಣ ಸಹಕಾರ ಸಂಘದ ಅಧ್ಯಕ್ಷ ಮುರಳಿ ಮಾದಯ್ಯ ಮಾತನಾಡಿದರು. ಒಟ್ಟು 8 ತಂಡಗಳು ಟೂರ್ನಿಯಲ್ಲಿ ಪಾಲ್ಗೊಂಡಿದ್ದವು.

ಟೀಂ ಸಹಾರ ಮತ್ತು ಕರೆಂಟ್ ಶಾಕರ್ಸ್ ತಂಡಗಳ ನಡುವೆ ಫೈನಲ್ ಪಂದ್ಯಾಟ ನಡೆಯಿತು. ಬಿಲಾಲ್ ಮತ್ತು ಸುಮೇರ್ ಮಾಲೀಕತ್ವದ ಸಹಾರ ತಂಡ ಪ್ರಥಮ, ಕರೆಂಟ್ ಶಾಕರ್ಸ್ ದ್ವಿತೀಯ, ವೈಲ್ಡ್ ಕ್ಯಾಟ್ ತಂಡ ತೃತೀಯ, ರೈಸಿಂಗ್ ಸ್ಟಾರ್ ನಾಲ್ಕನೇ ಬಹುಮಾನ ಪಡೆಯಿತು.

ಸಮಾರೋಪ ಸಮಾರಂಭದಲ್ಲಿ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ರಕ್ಷಿತ್ ಮಾವಜಿ, ಜೈ ಭೀಮ್ ಬ್ರದರ್ಸ್ ನ ಅರುಣೇಶ್, ನಿತನ್, ಯೋಗೇಶ ಮನೋಜ್, ಪ್ರತಾಪ್, ದಾನಿಗಳು ಹಾಗೂ ಪ್ರಮುಖರಾದ ಅನುಪಮಾ, ಪದ್ಮಿನಿ, ರಕ್ಷಿತ್, ಇμರ್Áದ್, ಮಂಜು, ಉದಯಕುಮಾರ್, ಬಿಲಾಲ್, ಕಬೀರ್, ನಡುಮನೆ ಚಿಂತು, ಮನೇಶ್, ಮ್ಯಾಥ್ಯು, ಮೋಹನ್ ಸೇರಿದಂತೆ ತಂಡಗಳ ಮಾಲೀಕರು, ಆಟಗಾರರು ಇದ್ದರು.

ವಿಜೇಶ್ ಮತ್ತು ಅಜಯ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.