ಕೂಡಿಗೆ, ಏ. 8: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದಲ್ಲಿರುವ ದೊಡ್ಡಮ್ಮತಾಯಿ, ತಮ್ಮಚ್ಚ ಮತ್ತು ಗುಳಿಗ ದೇವತಾ ಸಮಿತಿ ವತಿಯಿಂದ ದೊಡ್ಡಮ್ಮ ತಾಯಿ ವಾರ್ಷಿಕ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.
ಪೂಜೋತ್ಸವದ ಅಂಗವಾಗಿ ಬೆಳಿಗ್ಗೆ 6 ಗಂಟೆಗೆ ಕಕ್ಕೆಹೊಳೆ ನದಿಯಿಂದ ಕಲಶ ತಂದು ನಂತರ ದೇವಿಗೆ ಅಭಿμÉೀಕ ಸೇರಿದಂತೆ ದೇವರಿಗೆ ಪುμÁ್ಪಲಂಕಾರ, ಗಣಪತಿ ಹೋಮ ಹಾಗೂ ವಿವಿಧ ಪೂಜಾ ಕೈಂಕರ್ಯಗಳು ನಡೆದವು ಮಹಾಮಂಗಳಾರತಿ, ಮಧ್ಯಾಹ್ನ 12.30ಕ್ಕೆ ಪ್ರಸಾದ ವಿನಿಯೋಗ ನಡೆಯಿತು. ಪೂಜಾ ಕೈಂಕರ್ಯಗಳು ಸೋಮವಾರಪೇಟೆಯ ಬಸವಕುಮಾರ ಶಾಸ್ತ್ರಿ ಅವರ ನೇತೃತ್ವದಲ್ಲಿ ನಡೆಯಿತು. ದೊಡ್ಡಮ್ಮ ತಾಯಿ ಬನದಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭ ದೇವಸ್ಥಾನ ಸಮಿತಿ ಅಧ್ಯಕ್ಷ ಡಿ.ಎಲ್. ಧನಂಜಯ, ಕಾರ್ಯದರ್ಶಿ ಪ್ರಕಾಶ್, ಕೂಡಿಗೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಅನಂತ ಸೇರಿದಂತೆ ಸಮಿತಿ ಸದಸ್ಯರು, ಪದಾಧಿಕಾರಿಗಳು ಗ್ರಾಮಸ್ಥರು ಭಕ್ತರು ಹಾಜರಿದ್ದರು.