ಸುಂಟಿಕೊಪ್ಪ, ಏ. 8: ಗದ್ದೆಹಳ್ಳದ ಅಂಗಡಿ ಮಳಿಗೆಗೆ ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ಗೊಂಡು ಬೆಂಕಿ ಆವರಿಸಿ ಪೈಂಟ್ ಸೇರಿದಂತೆ ಪ್ಲಾಸ್ಟಿಕ್ ಶೀಟ್‍ಗಳು ಸುಟ್ಟು ಕರಕಲಾಗಿದೆ.

ಸುಂಟಿಕೊಪ್ಪ ಸಮೀಪದ ಗದ್ದೆಹಳ್ಳದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಶರತ್ ಎಂಬವರಿಗೆ ಸೇರಿದ ಮಳಿಗೆ ಬುಧವಾರ ಸಂಜೆ ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಅಂಗಡಿಯಲ್ಲಿ ಇರಿಸಿದ್ದ ಪೈಂಟ್ ಹಾಗೂ ಮೇಲ್ಛಾವಣಿಯ ಪ್ಲಾಸ್ಟಿಕ್ ಶೀಟ್‍ಗಳು ಕಟ್ಟಡ ಸಾಮಾಗ್ರಿಗಳಿಗೆ ಬೆಂಕಿ ಅಂಗಡಿಯ ಬಹುಪಾಲು ಸಾಮಗ್ರಿಗಳು ಬೆಂಕಿಯ ಜ್ವಾಲೆಗೆ ಸಿಲುಕಿ ಭಸ್ಮವಾಗಿದೆ. ಸ್ಥಳಕ್ಕೆ ಸುಂಟಿಕೊಪ್ಪ ಹಾಗೂ ಗದ್ದೆಹಳ್ಳದ ನಿವಾಸಿಗಳು ಮುಂದಾಗುವ ಅನಾಹುತವನ್ನು ಲೆಕ್ಕಿಸದೆ ಬೆಂಕಿಯ ಜ್ವಾಲೆಯನ್ನು ಹತೋಟಿಗೆ ತರುವ ಮೂಲಕ ನಂದಿಸುವಲ್ಲಿ ಯಶಸ್ವಿಯಾದರಲ್ಲದೆ. ಅಕ್ಕ ಪಕ್ಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಳಿಗೆಗಳಿಗೆ ಅನಾಹುತ ಸಂಭವಿದಂತೆ ಕಾರ್ಯ ನಿರ್ವಹಿಸಿದರು.

ಸುಂಟಿಕೊಪ್ಪ ಠಾಣಾಧಿಕಾರಿ ಮೋಹನ್‍ರಾಜ್, ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.