ವೀರಾಜಪೇಟೆ, ಏ. 7: ವೀರಾಜಪೇಟೆ ನಗರದ ಚಿಕ್ಕಪೇಟೆ ಛತ್ರಕೆರೆ ಸಮೀಪದ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ವಾರ್ಷಿಕ ಹನುಮ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಮುಂಜಾನೆ ಶ್ರೀ ಸ್ವಾಮಿಗೆ ವಿಶೇಷ ಕಲಶಾಭಿμÉೀಕ ಪೂಜೆಗಳು ಸಲ್ಲಿಕೆಯಾದವು.

ಬಳಿಕ ವಿವಿಧ ಹೂವುಗಳಿಂದ ಶ್ರೀ ಸ್ವಾಮಿಗೆ ಶೃಂಗಾರ ನಡೆಸಲಾಯಿತು. ನಗರದ ಭಜನಾ ಮಂಡಳಿ ಸದಸ್ಯರಿಂದ ರಾಮ-ಹನುಮನ ಭಜನೆ ಸಂಕೀರ್ತನೆ ನಡೆಯಿತು. ಮಧ್ಯಾಹ್ನ 12:30 ರ ವೇಳೆಯಲ್ಲಿ ಶ್ರೀ ಸ್ವಾಮಿ ಮಾಹಾ ಮಂಗಳಾರತಿ, ಮಾಹಾಪೂಜೆ ನಡೆಯಿತು. ತೀರ್ಥ ಪ್ರಸಾದ ವಿನಿಯೋಗದ ನಂತರ ಆಡಳಿತ ಮಂಡಳಿ ವತಿಯಿಂದ ಆಗಮಿಸಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು. ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷರು, ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು.