ನಾಪೆÇೀಕ್ಲು, ಏ. 7: ಅವಂದೂರು ಗ್ರಾಮದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಕೆಲಸ ನಡೆದು ಅಂತಿಮ ಹಂತ ತಲುಪಿದ್ದು, ಮೇ 5 ರಿಂದ 8 ರವರೆಗೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪುನರ್ ಪ್ರತಿμÁ್ಠ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮ ಪ್ರಯುಕ್ತ ಪೂರ್ವಭಾವಿ ಸಭೆ ನಡೆಸಿ ಉಪಸಮಿತಿಗಳನ್ನು ರಚಿಸಲಾಯಿತು. ಸಭೆಯಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಚೊಕ್ಕಾಡಿ ಅಪ್ಪಯ್ಯ, ಕಾರ್ಯದರ್ಶಿ ಪಟ್ಟಡ ಸುಗುಣ ಕುಮಾರ್, ಖಜಾಂಚಿ ಬೆಳ್ಯನ ಚಂದ್ರಪ್ರಕಾಶ್, ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ದೇವಸ್ಥಾನ ಜೀರ್ಣೋದ್ಧಾರದ ಮೂಲ ಸಮಿತಿ, ಪ್ರಧಾನ ಅರ್ಚಕರ ಮೂಲ ಸಮಿತಿ, ಪ್ರಧಾನ ಅರ್ಚಕರಾದ ದಿನೇಶ್ ಭಟ್, ಗ್ರಾಮದ ತಕ್ಕ ಮುಖ್ಯಸ್ಥರು, ಗ್ರಾಮದ ಕಾರ್ಯದರ್ಶಿ ಕಾಳೇರಮ್ಮನ ಪೂವಯ್ಯ, ಗ್ರಾಮ ಪಂಚಾಯಿತಿ ಸದಸ್ಯ ತೇಜಕುಮಾರ್, ಗ್ರಾಮದ ಪ್ರಮುಖರಾದ ದೇವಾಯಿರ ದೇವಯ್ಯ, ದೇವಾಯಿರ ದಾಮೋದರ, ದೇವಾಯಿರ ಚಂದ್ರಶೇಖರ್, ಹೊಸೂರು ಗಿರೀಶ್, ಬೆಳ್ಯನ ವಾಸುದೇವ, ಬೆಳ್ಯನ ನಾಣಯ್ಯ, ಬೆಳ್ಯನ ಪವಿತ್ರ, ಪಟ್ಟಡ ನಂದಕುಮಾರ್, ಪಟ್ಟಡ ದೀಪಕ್, ಕಾಳೇರಮ್ಮನ ಮೇದಪ್ಪ, ಕಾಳೇರಮ್ಮನ ಅಶೋಕ, ಮಂಜುನಾಥ್, ಪೆÇನ್ನಚ್ಚನ ಚಂಗಪ್ಪ, ಕಡ್ಯದ ಭವಾನಿಶಂಕರ್, ಕಡ್ಯದ ಪ್ರಸನ್ನ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದು ಹಲವು ಸಲಹೆ ನೀಡಿದರು.