ಮಡಿಕೇರಿ, ಏ.7: ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ವಾರ್ಷಿಕ ಸುದ್ದಿ ಪತ್ರ ‘ಎಡುವೈನ್’ ಅನಾವರಣ ಗೊಳಿಸಲಾಯಿತು. ಇದರೊಂದಿಗೆ ಹತ್ತನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ನಡೆಯಿತು.
ವಿಶ್ವೇಶ್ವರನ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಮೊದಲಿಗೆ ಶಾಲೆಯ ವಾರ್ಷಿಕ ಸುದ್ದಿ ಪತ್ರ ಎಡುವೈನ್ (ನ್ಯೂಸ್ ಲೆಟರ್) ಅನ್ನು ಮಡಿಕೇರಿ ಕೊಡವ ಸಮಾಜ ಅಧ್ಯಕ್ಷರು ಹಾಗೂ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಮಂಡುವಂಡ ಮುತ್ತಪ್ಪ ಅವರು ಅನಾವರಣಗೊಳಿಸಿದರು.
ಪ್ರಾಂಶುಪಾಲರಾದ ಬಾಳೆಯಡ ಸವಿತಾ ಪೂವಯ್ಯ ಅವರು ಮಾತನಾಡಿ, ವಿದ್ಯಾರ್ಥಿಗಳು ತಮ್ಮಲ್ಲಿ ಒಂದು ಗುರಿಯನ್ನು ಇಟ್ಟುಕೊಂಡಿರಬೇಕು. ಈ ಸಮಾಜದ ಶಿಕ್ಷಣ, ಜ್ಞಾನ, ಕೌಶಲಗಳಿಂದ ನಾವು ರೂಪುಗೊಂಡಿರುತ್ತೇವೆ. ಆ ಜ್ಞಾನವನ್ನು ಸಮಾಜಕ್ಕೆ ಉಪಯೋಗವಾಗುವ ರೀತಿಯಲ್ಲಿ ಬಳಸಿಕೊಂಡು ಮುಂದಿನ ಪೀಳಿಗೆಗೆ ಒಂದು ಉದಾಹರಣೆಯಾಗಬೇಕು ಎಂದರು.
ಮಂಡುವಂಡ ಮುತ್ತಪ್ಪ ಅವರು ಮಾತನಾಡಿ, ಮುಂದಿನ ವಿದ್ಯಾಭ್ಯಾಸಕ್ಕೆ ಸಿದ್ಧವಾಗುತ್ತಿರುವ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಗುರುತಿಸಿ, ಬೆಳೆಸಿ ಉತ್ತಮ ಅಂಕಗಳನ್ನು ಗಳಿಸಿ ಎಂದು ಹೇಳಿದರು. ಆಡಳಿತ ಮಂಡಳಿ ಉಪಾಧ್ಯಕ್ಷರಾದ ಕೇಕಡ ದೇವಯ್ಯ ಅವರು ಮಾತನಾಡಿ, ಶೇಕಡವಾರು ಅಂಕಗಳು ತುಂಬಾ ಮುಖ್ಯವಾಗಿದ್ದು ಪತ್ರಿಕೆಗಳನ್ನು ಓದುವುದರ ಮೂಲಕ ಸಾಮಾನ್ಯ ಜ್ಞಾನವನ್ನು ವೃದ್ಧಿಸಿಕೊಳ್ಳುವಂತೆ ಮಕ್ಕಳಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ 9ನೇ ತರಗತಿ ವಿದ್ಯಾರ್ಥಿಗಳು ಹಾಡು ಮತ್ತು ನೃತ್ಯದೊಂದಿಗೆ ಹಾಗೂ ಹತ್ತನೇ ತರಗತಿ ವಿದ್ಯಾರ್ಥಿಗಳು ಫ್ಯಾಶನ್ ಶೋ ಮೂಲಕ ಎಲ್ಲರನ್ನು ಮನರಂಜಿಸಿದರು. ಹತ್ತನೇ ತರಗತಿ ವಿದ್ಯಾರ್ಥಿಗಳಾದ ಲಿμÁ್ಮ ಪೆÇನ್ನಮ್ಮ, ಅನನ್ಯ ಆರ್, ಧೃತಿ ಎಸ್ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ತರಗತಿ ಶಿಕ್ಷಕಿ ಲೀನಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕೃತಿಕ ಬಿ.ಎಚ್ ಹಾಗೂ ಎಂ ಆಧ್ಯಾ ದೇಚಮ್ಮ ಅವರು ಕಾರ್ಯಕ್ರಮ ನಿರೂಪಿಸಿದರು. ತರುಣ್ ಪಿ.ಕೆ ವಂದನಾರ್ಪಣೆ ಗೈದರು.