ಮರಗೋಡು, ಏ.7: ಮರಗೋಡು ಆಟೋ ಮಾಲೀಕರ ಹಾಗೂ ಚಾಲಕರ ಸಂಘ, ಕೊಡಗು ಬ್ಲಡ್ ಡೋನರ್ಸ್(ರಿ) ಮಡಿಕೇರಿ ಹಾಗೂ ರಕ್ತನಿಧಿ ಕೇಂದ್ರ-ಜಿಲ್ಲಾ ಆಸ್ಪತ್ರೆ ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ಮರಗೋಡು ವಿವೇಕಾನಂದ ಯುವಕ ಸಂಘದ ಸಭಾಂಗಣದಲ್ಲಿ ರಕ್ತದಾನ ಶಿಬಿರ ನಡೆಸಲಾಯಿತು. ಶಿಬಿರದಲ್ಲಿ ಒಟ್ಟು 40 ಯುನಿಟ್ ರಕ್ತ ಸಂಗ್ರಹಣೆ ಮಾಡಲಾಯಿತು. ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಕೊಡಗು ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರು ಹಾಗೂ ಮರಗೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಕಾಂಗಿರ ಸತೀಶ್, ರಕ್ತದಾನದಂತಹ ಪುಣ್ಯ ಕಾರ್ಯ ಬೇರೊಂದಿಲ್ಲ. ಆಟೋ ಚಾಲಕರು-ಮಾಲೀಕರು ಏರ್ಪಡಿಸಿರುವ ಈ ಶಿಬಿರ ಅತ್ಯುತ್ತಮ. ಆಟೋ ಚಾಲನೆ ಕೂಡ ಸೇವೆಯ ಒಂದು ಭಾಗವಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚು ಸಮಾಜಮುಖಿ ಕಾರ್ಯಗಳು ಹಮ್ಮಿಕೊಳ್ಳುವಂತಾಗಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಆಟೋ ಮಾಲೀಕರು ಹಾಗೂ ಚಾಲಕರ ಸಂಘದ ಅಧ್ಯಕ್ಷ ನಂದಕುಮಾರ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಉಪಾಧ್ಯಕ್ಷರಾದ ಮುಕ್ಕಾಟಿರ ಚಿದಂಬರ ಹಾಗೂ ಬಳಪದ ಪೂವಯ್ಯ ಹಾಜರಿದ್ದರು. ವೇದಿಕೆಯಲ್ಲಿ ಆಟೋ ಚಾಲಕರ-ಮಾಲೀಕರ ಸಂಘದ ಉಪಾಧ್ಯಕ್ಷರಾದ ಪ್ರದೀಪ್, ಖಜಾಂಚಿ ರಂಜು, ಕೊಡಗು ಬ್ಲಡ್ ಡೋನರ್ಸ್ ಕಾರ್ಯದರ್ಶಿ ಮೈಕಲ್ ವೇಗಸ್, ನಿರ್ದೇಶಕರಾದ ಲೀಲಾವತಿ, ರಕ್ತನಿಧಿ ಕೇಂದ್ರ ಅಧಿಕಾರಿಗಳಾದ ಕರುಂಬಯ್ಯ, ಆಟೋ ಚಾಲಕರು ಹಾಗೂ ಮಾಲೀಕರು, ಗ್ರಾಮಸ್ಥರು ರಕ್ತ ನಿಧಿ ಕೇಂದ್ರ ಸಿಬ್ಬಂದಿಗಳು ಹಾಜರಿದ್ದರು. ಕೊಡಗು ಬ್ಲಡ್ ಡೋನರ್ಸ್ ಅಧ್ಯಕ್ಷರಾದ ಪಿ.ಪಿ ಸುಕುಮಾರ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.