ಸಿದ್ದಾಪುರ, ಏ. 7: ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೋಡು ಗ್ರಾಮದ ಅವರೆಗುಂದ ಹಾಡಿಗೆ ತೆರಳುವ ನೂತನ ಕಾಂಕ್ರಿಟ್ ರಸ್ತೆಯನ್ನು ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಪೆÇನ್ನಣ್ಣ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಅವರೆಗುಂದ ಭಾಗಕ್ಕೆ ತೆರಳುವ ರಸ್ತೆಯು ಬಹಳ ವರ್ಷಗಳ ಹಿಂದಿನಿಂದಲೂ ತೀವ್ರ ಹದೆಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ಈ ಭಾಗದ ನಿವಾಸಿಗಳು ರಸ್ತೆ ಅಭಿವೃದ್ಧಿಪಡಿಸಿಕೊಡುವಂತೆ ತನ್ನಲ್ಲಿ ಮನವಿ ಮಾಡಿಕೊಂಡ ಮೇರೆಗೆ ತಾನು ಅನುದಾನವನ್ನು ಬಿಡುಗಡೆಗೊಳಿಸಿ ಇದೀಗ ನೂತನ ಕಾಂಕ್ರಿಟ್ ರಸ್ತೆಯನ್ನು ಲೋಕಾರ್ಪಣೆ ಮಾಡಲಾಗಿದೆ ಎಂದರು.
ಅವರೆಗುಂದ ಭಾಗದಲ್ಲಿ ಮತ್ತಷ್ಟು ರಸ್ತೆಗಳನ್ನು ನಿರ್ಮಾಣ ಮಾಡಲು ಈಗಾಗಲೇ ಚಾಲನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ವೀರಾಜಪೇಟೆ ತಾಲೂಕು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಮತೀನ್, ವಲಯ ಕಾಂಗ್ರೆಸ್ ಅಧ್ಯಕ್ಷ ಎಸ್.ಬಿ. ಪ್ರತೀಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಎಸ್. ವೆಂಕಟೇಶ್, ಕಾಂಗ್ರೆಸ್ ಪಕ್ಷದ ಪ್ರಮುಖರಾದ ಎಂ.ಯು. ಮಜೀದ್, ಎಂ. ಬಿಜೋಯ್, ಅನಿಲ್ ಶೀನಪ್ಪ, ಚೇಕು, ವಿಜಯ್ ರೈ, ನೆಲ್ಲಮಕ್ಕಡ ಪ್ರಕಾಶ್ ಕುಶಾಲಪ್ಪ, ಜಾಫರ್ ಅಲಿ, ಸುಕೂರ್, ಇನ್ನಿತರರು ಹಾಜರಿದ್ದರು.