ನಾಪೋಕ್ಲು, ಏ.7: ಚೆರಿಯಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೇನಂಡ ಕಪ್ - 26ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಉತ್ಸವದ 3ನೇ ದಿನದ ಪಂದ್ಯಗಳ ಫಲಿತಾಂಶ ಇಂತಿದೆ:
ಮೂಕೋಂಡ ತಂಡ ಪೇರಿಯಂಡ ತಂಡವನ್ನು 3-0 ಗೋಲುಗಳ ಅಂತರದಲ್ಲಿ ಸೋಲಿಸಿತು. ನಂಬುಡುಮಾಡ ತಂಡವು ಪೊನ್ನಕಚ್ಚಿರ ತಂಡವನ್ನು 4-0 ಅಂತರದಲ್ಲಿ ಸೋಲಿಸಿತು. ತಿರುಟೆರ ತಂಡವು ಮಿನ್ನಂಡದೊಂದಿಗೆ 5-0 ಗೋಲುಗಳ ಭರ್ಜರಿ ಗೆಲುವು ಸಾಧಿಸಿತು. ತೆಕ್ಕಡ-ಅಮ್ಮೆಕಂಡ ನಡುವಿನ ಪಂದ್ಯದಲ್ಲಿ ತೆಕ್ಕಡಗೆ ವಾಕ್ಓವರ್ ದೊರಕಿತು. ಗಾಂಡಂಗಡ ತಂಡವು ಬಲ್ಲಾರಂಡವನ್ನು 2-0 ಗೋಲುಗಳಿಂದ ಮಣಿಸಿತು.
ಕೋಡಿರ-ಪಳಂಗೇಟಿರ ನಡುವಿನ ಪಂದ್ಯದಲ್ಲಿ ಕೋಡಿರ ತಂಡಕ್ಕೆ ವಾಕ್ಓವರ್ ಮೂಲಕ ಮುಂದಿನ ಹಂತ ಪ್ರವೇಶಿಸಿತು. ಪುಚ್ಚಿಮಾಡ-ಕೈಪಟ್ಟಿರ ತಂಡಗಳ ನಡುವಿನ ಪಂದ್ಯದಲ್ಲಿ ಕೈಪಟ್ಟಿರ ತಂಡವು 5-1 ಗೋಲುಗಳಿಂದ ಜಯ ಸಾಧಿಸಿತು. ಚಿಂಡಮಾಡ ಹಾಗೂ ಕಂಜಿತಂಡ ನಡುವಿನ ಪಂದ್ಯವು 2-2 ಸಮಬಲವಾಗಿದ್ದರಿಂದ ಟೈ ಬ್ರೇಕರ್ ನೀಡಲಾಯಿತು. ಇದರಲ್ಲಿ ಚಿಂಡಮಾಡವು 4-1 ಅಂತರದಲ್ಲಿ ಗೆಲುವು ಸಾಧಿಸಿತು. ಅಪ್ಪುಮಣಿಯಂಡ ತಂಡವು 3-0 ಗೋಲುಗಳಿಂದ ಗೀಜಿಗಂಡ ತಂಡವನ್ನು ಮಣಿಸಿತು. ಕೇಟೋಳಿರ ತಂಡವು 4-0 ಅಂತರದಲ್ಲಿ ಸರ್ಕಂಡ ವಿರುದ್ಧ ಜಯ ಸಾಧಿಸಿತು. ಕಳ್ಳಂಗಡ-ಚೋಕಿರ ನಡುವಿನ ಪಂದ್ಯವು 3-3 ಸಮಬಲ ಸಾಧನೆಯಾಯಿತು. ಟೈ ಬ್ರೇಕರ್ನಲ್ಲಿ ಚೋಕಿರ ತಂಡವು 6-5 ಅಂತರದಲ್ಲಿ ಗೆಲುವು ಸಾಧಿಸಿತು. ಅಮ್ಮಂಡ ತಂಡವು 2-0 ಗೋಲುಗಳಿಂದ ಮಂಗೇರಿರ ತಂಡವನ್ನು ಮಣಿಸಿತು.
ಮಂದನೆರವಂಡ ತಂಡವು ಚಿಲ್ಲವಂಡ ತಂಡವನ್ನು 3-1 ಗೋಲುಗಳಿಂದ ಮಣಿಸಿತು. ಮುಂಡಂಡ ತಂಡವು ಮಾಚೆಟ್ಟಿರ ತಂಡವನ್ನು 3-1 ಗೋಲುಗಳಿಂದ ಸೋಲಿಸಿತು. ಮೂವೆರ-ಕೊಚ್ಚೆರ ಪಂದ್ಯದಲ್ಲಿ ಮೂವೆರ ತಂಡಕ್ಕೆ ವಾಕ್ಓವರ್ ಮೂಲಕ ಮುಂದಿನ ಹಂತಕ್ಕೆ ಪ್ರವೇಶ ದೊರಕಿತು. ಮುರುವಂಡ ತಂಡವು ಕುಲ್ಲಚಂಡವನ್ನು 2-0 ಗೋಲುಗಳಿಂದ ಮಣಿಸಿತು. ಕಳಕಂಡ ತಂಡವು ಪುಲಿಯಂಡವನ್ನು 3-0 ಗೋಲುಗಳಿಂದ ಮಣಿಸಿತು. ಪುಟ್ಟಿಚಂಡವು ಬೊಳ್ಳಾರ್ಪಂಡವನ್ನು ಭರ್ಜರಿ 6-0 ಗೋಲುಗಳಿಂದ ಮಣಿಸಿತು.