ಮಡಿಕೇರಿ, ಏ.6 : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ಆಯೋಜಿಸಿರುವ 24ನೇ ವರ್ಷದ ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆಯಲ್ಲಿ ನಡೆದ ಪಂದ್ಯಾವಳಿಯಲ್ಲಿ ಮಾಚಿಮಂಡ, ಕುಪ್ಪಂಡ, ಕೇತಿರ ತಂಡಗಳು ಭರ್ಜರಿ ಮುನ್ನಡೆ ಸಾಧಿಸಿದವು.

ಮೈದಾನ 1ರಲ್ಲಿ ಕಾಂಚೇರಿರ ಮತ್ತು ಕಲಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಕಲಿಯಂಡ ತಂಡಕ್ಕೆ 6 ವಿಕೆಟ್‍ಗಳ ಜಯ ಲಭಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಕಾಂಚೇರಿರ 6 ಓವರ್‍ಗಳಲ್ಲಿ 6 ವಿಕೆಟ್ ನಷ್ಟಕ್ಕೆ 44 ರನ್ ಗಳನ್ನು ಗಳಿಸಿತು. ಕಲಿಯಂಡ ತಂಡ 5.5 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 47 ರನ್ ಗಳನ್ನು ಸೇರಿಸಿ ಗೆಲುವು ದಾಖಲಿಸಿತು.

ಮೇದುರ ಮತ್ತು ಬಾಳೆಯಡ ನಡುವಿನ ಪಂದ್ಯದಲ್ಲಿ ಮೇದುರÀ ತಂಡ 8 ವಿಕೆಟ್ ಗಳ ಜಯ ಸಾಧಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಳೆಯಡ ತಂಡ 6 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 51 ರನ್ ಗಳಿಸಿತು. ಮೇದುರ 5.1 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 55 ರನ್ ಸೇರಿಸಿ ಗೆಲುವಿನ ನಗು ಬೀರಿತು.

ಮಲ್ಲಂಗಡ ಮತ್ತು ಅಚ್ಚಕಾಳೇರ ತಂಡಗಳ ನಡುವಿನ ಹಣಾಹಣಿಯಲ್ಲಿ ಮಲ್ಲಂಗಡ ತಂಡ 8 ವಿಕೆಟ್ ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಚ್ಚಕಾಳೇರ ತಂಡ 6 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 54 ರನ್ ಗಳನ್ನು ಗಳಿಸಿತು. ಮಲ್ಲಂಗಡ ತಂಡ 4 ಓವರ್‍ಗಳಲ್ಲಿ 2 ವಿಕೆಟ್ ನಷ್ಟಕ್ಕೆ 55 ರನ್ ಗಳನ್ನು ಸೇರಿಸಿ ಜಯ ಸಾಧಿಸಿತು.

ಮಂಡೀರ (ಮಾದಾಪುರ) ಮತ್ತು ಚೀಯಣಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಚೀಯಣಮಾಡ ಗೆಲುವು ದಾಖಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಚೀಯಣಮಾಡ 6 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 73 ರನ್‍ಗಳನ್ನು ಗಳಿಸಿತು. ಮಂಡೀರ 6 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 70 ರನ್ ಗಳನ್ನು ಸೇರಿಸಿ ಸೋಲೊಪ್ಪಿಕೊಂಡಿತು.

ಕಳ್ಳೇಂಗಡ ಮತ್ತು ಮಾಚಿಮಂಡ ತಂಡಗಳ ನಡುವಿನ ಪಂದ್ಯದಲ್ಲಿ ಮಾಚಿಮಂಡ ತಂಡ 53 ರನ್ ಗಳಿಂದ ಜಯ ದಾಖಲಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮಾಚಿಮಂಡ 6 ಓವರ್‍ಗಳಲ್ಲಿ 2 ವಿಕೆಟ್ ನಷ್ಟಕ್ಕೆ 109 ರನ್ ಗಳಿಸಿತು. ಕಳ್ಳೇಂಗಡ ತಂಡ 6 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 56 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಮಾಚಿಮಂಡ ಪುನಿತ್ ಪೂವಣ್ಣ ದಾಖಲೆಯ 80 ರನ್ ಗಳನ್ನು ಸೇರಿಸಿ ತಂಡದ ಭರ್ಜರಿ ಗೆಲುವಿಗೆ ಕಾರಣರಾದರು.

ಮುಕ್ಕಾಟಿರ (ಅರಪಟ್ಟು) ಮತ್ತು ಕಲಿಯಾಟಂಡ ತಂಡಗಳ ನಡುವಿನ ಪಂದ್ಯದಲ್ಲಿ ಮುಕ್ಕಾಟಿರ 5 ವಿಕೆಟ್ ಗಳ ಜಯ ಸಾಧಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕಲಿಯಾಟಂಡ 6 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 68 ರನ್ ಗಳಿಸಿತು. ಮುಕ್ಕಾಟಿರ ತಂಡ 5.4 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 71 ರನ್ ಗಳಿಸಿ ಗೆಲುವನ್ನು ತನ್ನದಾಗಿಸಿಕೊಂಡಿತು.

ಮರುವಂಡ ಮತ್ತು ಕೈಪಟ್ಟಿರ ನಡುವಿನ ಪಂದ್ಯದಲ್ಲಿ ಕೈಪಟ್ಟಿರ ತಂಡ 30 ರನ್ ಗಳಿಂದ ಗೆಲುವು ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಕೈಪಟ್ಟಿರ ತಂಡ 6 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 82 ರನ್ ಗಳಿಸಿತು. ಮರುವಂಡ ತಂಡ 6 ಓವರ್‍ಗಳಲ್ಲಿ 2 ವಿಕೆಟ್ ನಷ್ಟಕ್ಕೆ 52 ರನ್ ಮಾತ್ರ ಗಳಿಸಲು ಸಾಧ್ಯವಾಯಿತು.

ಮೈದಾನ 2ರಲ್ಲಿ ನಡೆದ ಗೀಜಿಗಂಡ ಮತ್ತು ದೇಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಗೀಜಿಗಂಡ 17 ರನ್ ಗಳಿಂದ ಜಯ ಸಾಧಿಸಿತು. ಗೀಜಿಗಂಡ 6 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 70 ರನ್ ಗಳಿಸಿದರೆ, ದೇಯಂಡ 6 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 53 ರನ್ ಸೇರಿಸಿತು.

ಚಿಮ್ಮುಣಿರ (ಹರಿಹರ) ಮತ್ತು ಕೇತಿರ ತಂಡಗಳ ನಡುವಿನ ಪಂದ್ಯದಲ್ಲಿ ಕೇತಿರ 10 ವಿಕೆಟ್ ಗಳಿಂದ ಗೆಲುವು ದಾಖಲಿಸಿತು. ಚಿಮ್ಮುಣಿರ 6 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 55 ರನ್ ಗಳನ್ನು ಮತ್ತು ಕೇತಿರ 3.3 ಓವರ್ ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 57 ರನ್ ಗಳಿಸಿತು.

ಬಾಚೀರ ಮತ್ತು ಐಪುಮಾಡ ತಂಡಗಳ ನಡುವಿನ ಹಣಾಹಣಿಯಲ್ಲಿ ಬಾಚೀರ 8 ವಿಕೆಟ್ ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಬಾಚೀರ 5 ಓವರ್‍ಗಳಲ್ಲಿ 2 ವಿಕೆಟ್ ನಷ್ಟಕ್ಕೆ 72 ರನ್ ಗಳನ್ನು ಗಳಿಸಿತು. ಐಪುಮಾಡ 6 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 71 ರನ್ ಸೇರಿಸಿತು.

ಪೆಮ್ಮಣಮಾಡ (ಹರಿಹರ) ಮತ್ತು ಕೊಟ್ಟುಕತ್ತೀರ ತಂಡಗಳ ನಡುವಿನ ಪಂದ್ಯದಲ್ಲಿ ಕೊಟ್ಟುಕತ್ತೀರ 10 ವಿಕೆಟ್ ಗಳ ಜಯ ಸಾಧಿಸಿತು. ಪೆಮ್ಮಣಮಾಡ 6 ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ 56 ರನ್ ಗಳನ್ನು ಸೇರಿಸಿತು. ಕೊಟ್ಟುಕತ್ತೀರ 3.3 ಓವರ್‍ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 58 ರನ್ ಗಳಿಸಿತು.

ನಾಯಕಂಡ ಮತ್ತು ತೀತಿರ ನಡುವಿನ ಪಂದ್ಯದಲ್ಲಿ ನಾಯಕಂಡ ತಂಡಕ್ಕೆ 10 ವಿಕೆಟ್ ಗಳ ಜಯ ಲಭಿಸಿತು. ತೀತಿರ 6 ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ 47ರನ್ ಗಳಿಸಿತು. ನಾಯಕಂಡ 3.1 ಓವರ್‍ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 49 ರನ್ ಸೇರಿಸಿ ಗೆಲುವು ದಾಖಲಿಸಿತು.

ಕೊಂಗಂಡ ಮತ್ತು ಪೊನ್ನಿಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಪೆÇನ್ನಿಮಾಡ 10 ವಿಕೆಟ್ ಗಳಿಂದ ಜಯ ಸಾಧಿಸಿತು. ಕೊಂಗಂಡ 6 ಓವರ್‍ಗಳಲ್ಲಿ 2 ವಿಕೆಟ್ ನಷ್ಟಕ್ಕೆ 61 ರನ್ ಸೇರಿಸಿತು. ಪೆÇನ್ನಿಮಾಡ 5.1 ಓವರ್‍ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 62 ರನ್ ಗಳಿಸಿತು.

ಚೆಂಬಂಡ ಮತ್ತು ಮತ್ರಂಡ ತಂಡಗಳ ನಡುವಿನ ಪಂದ್ಯದಲ್ಲಿ ಚೆಂಬಂಡ ತಂಡಕ್ಕೆ 20 ರನ್‍ಗಳ ಜಯ ಲಭಿಸಿತು. ಚೆಂಬಂಡ 6 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 77 ರನ್ ಗಳಿಸಿತು. ಮತ್ರಂಡ 6 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 57 ರನ್ ಸೇರಿಸಿತು.

ಬಲ್ಯಂಡ ಮತ್ತು ಕುಪ್ಪಂಡ (ನಾಂಗಾಲ) ನಡುವಿನ ಪಂದ್ಯದಲ್ಲಿ ಕುಪ್ಪಂಡ ತಂಡ 27 ರನ್‍ಗಳ ಜಯ ಸಾಧಿಸಿತು. ಕುಪ್ಪಂಡ 6 ಓವರ್‍ಗಳಲ್ಲಿ 1 ವಿಕೆಟ್ ನಷ್ಟಕ್ಕೆ 112 ರನ್ ಗಳನ್ನು ಮತ್ತು ಬಲ್ಯಂಡ 6 ಓವರ್‍ಗಳಲ್ಲಿ 1 ವಿಕೆಟ್ ನಷ್ಟಕ್ಕೆ 86 ರನ್‍ಗಳಿಸಿತು.v