ಕಣಿವೆ ಏ. 6 : ಕುಶಾಲನಗರ ತಾಲೂಕಿನ ಹೊಸಪಟ್ಟಣ ಗ್ರಾಮದ ಶ್ರೀ ಬಸವೇಶ್ವರ ಹಾಗೂ ಕನ್ನಂಬಾಡಮ್ಮ ದೇವರ ವಾರ್ಷಿಕ ಪೂಜೋತ್ಸವ ತಾ. 13 ಹಾಗೂ 14 ರಂದು ನಡೆಯಲಿದೆ.

ತಾ.13 ರಂದು ಸಂಜೆ 7 ಗಂಟೆಗೆ ಬಸವಾಪಟ್ಟಣದ ಶ್ರೀ ಸ್ವತಂತ್ರ ಬಸವಲಿಂಗ ಶಿವಯೋಗಿ ಸ್ವಾಮೀಜಿ ಸಾನಿಧ್ಯದಲ್ಲಿ ಗ್ರಾಮದ ಪೂರ್ಣಿಮಾ ಶಿವಕುಮಾರ್ ಅವರ ಮನೆಯಿಂದ ಕಳಸವನ್ನು ತಂದು ಗಂಗಾಪೂಜೆ ನಡೆಸಲಾಗುತ್ತದೆ. ಸಂಜೆ 7 ಗಂಟೆಗೆ ದೇವರುಗಳಿಗೆ ಮಹಾ ರುದ್ರಾಭಿμÉೀಕ, ಅಲಂಕಾರ, ಅμÉ್ಟೂೀತ್ತರ ಪೂಜೆ. ರಾತ್ರಿ 8-30 ಗಂಟೆಗೆ ಮಹಾಮಂಗಳಾರತಿ, 9-30 ಗಂಟೆಗೆ ಅನ್ನಸಂತರ್ಪಣೆ.

ಮಧ್ಯರಾತ್ರಿ 12 ಗಂಟೆಯಿಂದ ದೇವರುಗಳ ಉತ್ಸವ ಪಲ್ಲಕ್ಕಿ ಅಲಂಕಾರ ನಡೆಯಲಿದೆ.

ತಾ. 14 ರಂದು ಮುಂಜಾನೆ 4 ಗಂಟೆಗೆ ಮೈಸೂರಿನ ದಿನೇಶ್ ಶಾಸ್ತ್ರಿ ನೇತೃತ್ವದಲ್ಲಿ ಕೆಂಡ ಕೊಂಡದ ಪೂಜೆ ಮತ್ತು ಮಹಾರುದ್ರಾಭಿμÉೀಕ. ಬೆಳಿಗ್ಗೆ 8-30 ಗಂಟೆಗೆ ವಾದ್ಯಮೇಳ, ಅಲಂಕೃತ ದೇವರುಗಳ ಪಲ್ಲಕ್ಕಿಯೊಂದಿಗೆ ಗಂಗಾಸ್ನಾನಕ್ಕೆ ತೆರಳುವುದು. ಬೆಳಿಗ್ಗೆ 9 ಗಂಟೆಗೆ ಗಂಗಾಸ್ನಾನ. 9-30 ಕ್ಕೆ ಉದ್ದೂರಿನ ರವಿಕುಮಾರ್ ತಂಡದಿಂದ ವೀರಗಾಸೆ ಕುಣಿತ, ವಾದ್ಯಗೋಷ್ಠಿಯೊಂದಿಗೆ ದೇವರುಗಳ ಪಲ್ಲಕ್ಕಿ ಮೆರವಣಿಗೆ. ಬೆಳಿಗ್ಗೆ 11-30 ಕ್ಕೆ ವೀರಾಜಪೇಟೆ ಅರಮೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಸ್ವತಂತ್ರ ಬಸವಲಿಂಗ ಶಿವಯೋಗಿಗಳ ಸಾನಿಧ್ಯದಲ್ಲಿ ಕೆಂಡ ಕೊಂಡದ ಅಗ್ನಿಪೂಜೆ.

ಮ. 12 ಗಂಟೆಗೆ ಕೊಂಡ ಹಾಯುವುದು., 1 ಗಂಟೆಗೆ ಶ್ರೀ ಗಳಿಂದ ಆಶೀರ್ವಚನ., ಬಳಿಕ ಮಹಾಮಂಗಳಾರತಿ ಹಾಗೂ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯ ಸಮಿತಿ ಪ್ರಕಟಣೆ ತಿಳಿಸಿದೆ.