ಕೂಡಿಗೆ, ಏ. 6: ಕರ್ನಾಟಕ ರಾಜ್ಯ ಲ್ಯಾಂಪ್ಸ್ ಸಹಕಾರ ಮಹಾಮಂಡಳ ನಿಯಮಿತ ಇದರ ಆಡಳಿತ ಮಂಡಳಿಯ 2026-31ರ ಚುನಾವಣೆಯ ನಿರ್ದೇಶಕರ ಸ್ಥಾನಕ್ಕೆ ಕುಶಾಲನಗರ ತಾಲೂಕು ಬಸವನಹಳ್ಳಿ ಲ್ಯಾಂಪ್ಸ್ ಸಹಕಾರ ಸಂಘದ ಅಧ್ಯಕ್ಷ ಎಸ್. ಆರ್ ಅರುಣ್‍ರಾವ್‍ರವರು ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಲ್ಯಾಂಪ್ಸ್ ಸಹಕಾರ ಸಂಘದ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಆಡಳಿತ ಮಂಡಳಿಗೆ ಕೊಡಗು ಜಿಲ್ಲೆಯ ಪರವಾಗಿ ಒಂದು ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸಲು ಕೊಡಗು ಜಿಲ್ಲೆಯಿಂದ ಮಹಾಮಂಡಲದ ಸದಸ್ಯತ್ವ ಪಡೆದವರಿಗೆ ಅವಕಾಶ ಕಲ್ಪಿಸಲಾಗಿದೆ. ಕರ್ನಾಟಕ ರಾಜ್ಯ ಲ್ಯಾಂಪ್ಸ್ ಸಹಕಾರ ಮಹಾಮಂಡಳ ನಿಯಮಿತಕ್ಕೆ ರಾಜ್ಯದ ಎಂಟು ಜಿಲ್ಲೆಗಳು ಒಳಪಟ್ಟಿರುತ್ತವೆ. ಇವುಗಳಲ್ಲಿ ಮತದಾನ ಮಾಡುವ ಹಕ್ಕನ್ನು ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಮೈಸೂರು, ಚಾಮರಾಜನಗರ ಜಿಲ್ಲೆಗಳು ಸೇರಿದಂತೆ ಒಟ್ಟು ಎಂಟು ಜಿಲ್ಲೆಯ ಅರ್ಹ 13. ಮಂದಿ ಸದಸ್ಯರು ಮತದಾನದ ಹಕ್ಕನ್ನು ಪಡೆದಿದ್ದು ತಾ. 12.ರಂದು ನಡೆಯುವ ಚುನಾವಣೆಯಲ್ಲಿ ಸದಸ್ಯರು ಮತ ಚಲಾಯಿಸಲಿದ್ದಾರೆ. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಲ್ಯಾಂಪ್ಸ್ ಸಹಕಾರ ಮಹಾಮಂಡಳದ ನಿಯಮಿತದ ಅಧ್ಯಕ್ಷ ಬಿ. ಕಾವೇರ ಸೇರಿದಂತೆ ಸಮಿತಿ ಸದಸ್ಯರು ಹಾಜರಿದ್ದರು.