ನಾಪೆÇೀಕ್ಲು, ಏ. 6: ಹುಣ್ಣಿಮೆಯ ಅಂಗವಾಗಿ ಜೀವ ನದಿ ಕಾವೇರಿ ಮಾತೆಗೆ ಆರತಿ ಬೆಳಗುವ ಮೂಲಕ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಇಲ್ಲಿ ಹರಿಯುತ್ತಿರುವ ಜೀವನದಿ ಕಾವೇರಿ ಮಾತೆಗೆ ಆರತಿ ಮಾಡುವ ಮೂಲಕ ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಪುರುμÉೂೀತಮ್, ಕೃಷಿ ಅಧಿಕಾರಿ ಅಶ್ವಥ್, ಮೇಲ್ವಿಚಾರಕರು ಸುನಿಲ್, ನಾಪೆÇೀಕ್ಲು ಪಂಚಾಯಿತಿ ಅಧ್ಯಕೆ ವನಜಾಕ್ಷಿ ರೇಣುಕೇಶ್, ಸುಭಾμï ನಗರ ಕಾರ್ಯಕ್ಷೇತ್ರದ ಒಕ್ಕೂಟ ಅಧ್ಯಕ್ಷೆ ಮುತ್ತು ರಾಣಿ, ಸೇವಾಪ್ರತಿನಿಧಿ ಹಾಗೂ ಸಂಘಗಳ ಸದಸ್ಯರು ಭಾಗವಹಿಸಿದ್ದರು .ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಹಾಗೂ ಪಂಚಾಯತ್ ಅಧ್ಯಕ್ಷರು ಕಾವೇರಿ ನದಿಯ ಸ್ವಚ್ಛತೆಯ ಬಗ್ಗೆ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.