ಮಡಿಕೇರಿ ಏ. 5: ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ಆಯೋಜಿಸಿರುವ 24ನೇ ವರ್ಷದ ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆಯಲ್ಲಿ ಏ.5 ರಂದು ನಡೆದ ಪಂದ್ಯಾವಳಿಯಲ್ಲಿ 13 ತಂಡಗಳು ಗೆಲುವು ಸಾಧಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿದವು.

ಮೈದಾನ 1ರಲ್ಲಿ ಮಾಚೆಟ್ಟಿರ ಮತ್ತು ಐಚೋಡಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಐಚೋಡಿಯಂಡ 5 ವಿಕೆಟ್‍ಗಳ ಜಯ ಸಾಧಿಸಿದೆ. ಐಚೋಡಿಯಂಡ ತಂಡ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮಾಚೆಟ್ಟಿರ ತಂಡ 6 ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ 61 ರನ್‍ಗಳನ್ನು ಗಳಿಸಿತು. ಐಚೋಡಿಯಂಡ ತಂಡ 6 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 62 ರನ್‍ಗಳನ್ನು ಸೇರಿಸಿ ಗೆಲುವಿನ ನಗು ಬೀರಿತು.

ನಾಳಿಯಂಡ ಮತ್ತು ಚೆಟ್ರಂಡ ತಂಡಗಳ ನಡುವಿನ ಪಂದ್ಯದಲ್ಲಿ ನಾಳಿಯಂಡ 51 ರನ್‍ಗಳಿಂದ ಗೆಲುವು ಸಾಧಿಸಿತು. ಟಾಸ್ ಗೆದ್ದ ನಾಳಿಯಂಡ ಬ್ಯಾಟಿಂಗ್ ಆಯ್ದುಕೊಂಡು 6 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 80 ರನ್‍ಗಳನ್ನು ಗಳಿಸಿತು. ಚೆಟ್ರಂಡ ತಂಡ 6 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 29 ರನ್‍ಗಳನ್ನಷ್ಟೇ ಗಳಿಸಿ ಸೋಲೊಪ್ಪಿಕೊಂಡಿತು.

ಮಾಚೆಟ್ಟಿರ (ಬಾಳುಗೋಡು) ಮತ್ತು ಮಾಚಂಗಡ ತಂಡಗಳ ನಡುವಿನ ಪಂದ್ಯದಲ್ಲಿ ಮಾಚೆಟ್ಟಿರÀ ತಂಡ 7 ವಿಕೆಟ್‍ಗಳಿಂದ ಗೆಲುವು ಸಾಧಿಸಿತು. ಮಾಚೆಟ್ಟಿರ ತಂಡ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮಾಚಂಗಡ ತಂಡ 6 ಓವರ್‍ಗಳಲ್ಲಿ ಎಲ್ಲಾ ವಿಕೆಟ್‍ಗಳನ್ನು ಕಳೆದುಕೊಂಡು 30 ರನ್ ಗಳಿಸಲಷ್ಟೆ ಶಕ್ತವಾಯಿತು. ಮಾಚೆಟ್ಟಿರ ತಂಡ 6 ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ 33 ರನ್ ಪೆÉೀರಿಸಿ ಗೆಲುವು ಸಾಧಿಸಿತು.

ಕಾಯಪಂಡ ಮತ್ತು ಕಳ್ಳಂಗಡ ತಂಡಗಳ ನಡುವಿನ ಪಂದ್ಯದಲ್ಲಿ ಕಾಯಪಂಡ ತಂಡಕ್ಕೆ 22 ರನ್‍ಗಳ ಜಯ ಲಭಿಸಿತು. ಕಳ್ಳಂಗಡ ತಂಡ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಕಾಯಪಂಡ ತಂಡ 6 ಓವರ್‍ಗಳಲ್ಲಿ 2 ವಿಕೆಟ್ ನಷ್ಟಕ್ಕೆ 80 ರನ್‍ಗಳನ್ನು ದಾಖಲಿಸಿತು. ಕಳ್ಳಂಗಡ ತಂಡ 6 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 58 ರನ್ ಗಳಿಸಿ ಸೋಲಿಗೆ ಶರಣಾಯಿತು.

ಚೆಟ್ಟಿಯಾರಂಡ ಮತ್ತು ಬಲ್ಯಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಚೆಟ್ಟಿಯಾರಂಡ ತಂಡ ವಾಕ್ ಓವರ್ ಮೂಲಕ ಗೆಲುವು ಸಾಧಿಸಿತು.

ಕಡೇಮಾಡ ಮತ್ತು ಪುದಿಯೊಕ್ಕಡ ತಂಡಗಳ ನಡುವಿನ ಪಂದ್ಯದಲ್ಲಿ ಪುದಿಯೊಕ್ಕಡ 8 ವಿಕೆಟ್‍ಗಳ ಜಯ ಸಾಧಿಸಿತು. ಪುದಿಯೊಕ್ಕಡ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಕಡೇಮಾಡ ತಂಡ 6 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 87 ರನ್ ಗಳನ್ನು ಗಳಿಸಿತು. ಪುದಿಯೊಕ್ಕಡ ತಂಡ 6 ಓವರ್‍ಗಳಲ್ಲಿ 2 ವಿಕೆಟ್ ನಷ್ಟಕ್ಕೆ 91 ರನ್‍ಗಳನ್ನು ಪೆÉೀರಿಸಿ ಜಯ ಸಾಧಿಸಿತು. ಮೈದಾನ 2ರಲ್ಲಿ ಕುಂಞÂೀರ ಮತ್ತು ಪರದಂಡ ತಂಡಗಳ ನಡುವಿನ ಪಂದ್ಯದಲ್ಲಿ ಕುಂಞÂೀರ ತಂಡ 9 ವಿಕೆಟ್‍ಗಳ ಜಯ ಸಾಧಿಸಿತು. ಪರದಂಡ ತಂಡ 2 ವಿಕೆಟ್ ನಷ್ಟಕ್ಕೆ 64 ರನ್ ಗಳನ್ನು ಗಳಿಸಿದರೆ, ಕುಂಞÂೀರ 1 ವಿಕೆಟ್ ನಷ್ಟಕ್ಕೆ 65 ರನ್‍ಗಳನ್ನು ಸಂಗ್ರಹಿಸಿ ಗೆಲುವು ದಾಖಲಿಸಿತು.

ಸೋಮೆಯಂಡ ಮತ್ತು ಮುಕ್ಕಾಟಿರ (ಪುಲಿಕೋಟು) ನಡುವಿನ ಪಂದ್ಯದಲ್ಲಿ ಮುಕ್ಕಾಟಿರ ತಂಡಕ್ಕೆ 9 ವಿಕೆಟ್‍ಗಳ ಜಯ ಲಭಿಸಿತು. ಸೋಮೆಯಂಡ ತಂಡ 5 ವಿಕೆಟ್ ನಷ್ಟಕ್ಕೆ 27 ರನ್‍ಗಳನ್ನು ಗಳಿಸಿದರೆ ಮುಕ್ಕಾಟಿರ 1 ವಿಕೆಟ್ ನಷ್ಟಕ್ಕೆ 28 ರನ್ ಗಳನ್ನು ಗಳಿಸಿತು.

ಕುಂದೀರ ಮತ್ತು ಕೋದಂಡ ನಡುವಿನ ಪಂದ್ಯದಲ್ಲಿ ಕುಂದೀರ ತಂಡ 28 ರನ್‍ಗಳ ಜಯ ಸಾಧಿಸಿತು. ಕುಂದೀರ 1 ವಿಕೆಟ್ ನಷ್ಟಕ್ಕೆ 81 ರನ್‍ಗಳನ್ನು ಗಳಿಸಿದರೆ, ಕೋದಂಡ 2 ವಿಕೆಟ್ ನಷ್ಟಕ್ಕೆ 53 ರನ್‍ಗಳನ್ನಷ್ಟೇ ಗಳಿಸಿ ಸೋಲು ಅನುಭವಿಸಿತು.

ಮುದ್ದಿಯಡ ಮತ್ತು ಆದೇಂಗಡ ತಂಡಗಳ ನಡುವಿನ ಪಂದ್ಯದಲ್ಲಿ ಆದೇಂಗಡ 9 ವಿಕೆಟ್‍ಗಳ ಗೆಲುವು ದಾಖಲಿಸಿತು. ಮುದ್ದಿಯಡ ತಂಡ 3 ವಿಕೆಟ್ ನಷ್ಟಕ್ಕೆ 49 ರನ್‍ಗಳನ್ನು ಗಳಿಸಿದರೆ, ಆದೇಂಗಡ 1 ವಿಕೆಟ್ ನಷ್ಟಕ್ಕೆ 50 ರನ್‍ಗಳನ್ನು ದಾಖಲಿಸಿ ಮುನ್ನಡೆ ಸಾಧಿಸಿತು. ಕೊಡಂದೇರ ಮತ್ತು ಪುಳ್ಳಂಗಡ ತಂಡಗಳ ನಡುವಿನ ಪಂದ್ಯದಲ್ಲಿ ಕೊಡಂದೇರ ತಂಡ 10 ರನ್‍ಗಳ ಜಯ ಸಾಧಿಸಿತು. ಕೊಡಂದೇರ 2 ವಿಕೆಟ್ ನಷ್ಟಕ್ಕೆ 84 ರನ್‍ಗಳನ್ನು ಗಳಿಸಿದರೆ, ಪುಳ್ಳಂಗಡ 3 ವಿಕೆಟ್ ನಷ್ಟಕ್ಕೆ 74 ರನ್‍ಗಳನ್ನು ಗಳಿಸಿತು.

ಕಟ್ಟೇರ (ಅರಮೇರಿ) ಮತ್ತು ಚಿಂಡಮಾಡ ನಡುವಿನ ಪಂದ್ಯದಲ್ಲಿ ಕಟ್ಟೇರ ತಂಡ 20 ರನ್‍ಗಳ ಜಯ ಸಾಧಿಸಿತು. ಚಿಂಡಮಾಡ 3 ವಿಕೆಟ್ ನಷ್ಟಕ್ಕೆ 53 ರನ್‍ಗಳನ್ನು ಗಳಿಸಿದರೆ, ಕಟ್ಟೇರ 5 ವಿಕೆಟ್ ನಷ್ಟಕ್ಕೆ 73 ರನ್ ಗಳನ್ನು ಪೇರಿಸಿತು. ಮೇಕೇರಿರ ಮತ್ತು ನಂದಿರ ತಂಡಗಳ ನಡುವಿನ ಪಂದ್ಯದಲ್ಲಿ ನಂದಿರ ತಂಡ 37 ರನ್ ಗಳ ಗೆಲುವು ದಾಖಲಿಸಿತು. ಮೇಕೇರಿರ 6 ವಿಕೆಟ್ ನಷ್ಟಕ್ಕೆ 45 ರನ್ ಗಳನ್ನು ಸೇರಿಸಿತು, ನಂದಿರ 3 ವಿಕೆಟ್ ನಷ್ಟಕ್ಕೆ 82 ರನ್‍ಗಳನ್ನು ಗಳಿಸಿತು.