ಕಡಂಗ, ಏ. 5: ಅರಪಟ್ಟು ಕಡಂಗ ಗ್ರಾಮದಲ್ಲಿರುವ ಶ್ರೀ ಚೊಯಿಲಿ ಭಗವತಿ ಕ್ಷೇತ್ರದಲ್ಲಿ ವಾರ್ಷಿಕ ಉತ್ಸವವು ಮಾರ್ಚ್ 21 ರಿಂದ ಆರಂಭಗೊಂಡು ಮಾರ್ಚ್ 28ರವರೆಗೆ ವಿವಿಧ ಪೂಜಾ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು.
ಮುಕ್ಕಾಟಿರ ಮನೆಯಿಂದ ಭಂಡಾರ ಹೊರಟು ಪ್ರಾರಂಭವಾದ ಉತ್ಸವವು ಎತ್ತು ಪೆÇೀರಾಟ ಹಾಗೂ ದೇವಿಯ ಸ್ಥಾನ ಮುಖಾಂತರ, ಗ್ರಾಮದೇವತೆಗೆ ಸಂಬಂಧಪಟ್ಟ ಶ್ರೀ ವಿಷ್ಣು ಮೂರ್ತಿ ದೇವರ ಸನ್ನಿಧಿಯಲ್ಲಿ ವಿವಿಧ ಕೋಲ ಸಾಂಪ್ರದಾಯಿಕವಾಗಿ ನಡೆಯಿತು.
ಉತ್ಸವದಲ್ಲಿ ಸಾವಿರಾರು ಭಕ್ತಾದಿಗಳು ದೇವರ ಕೃಪೆಗೆ ಪಾತ್ರರಾದರು. ಹಬ್ಬದ ಪ್ರಯುಕ್ತ ಪೂಜಾ ಕಾರ್ಯವನ್ನು ಅರ್ಚಕರಾದ ಕೀರ್ತಿಶ್ ಭಟ್ ಮತ್ತು ತಂತ್ರಿಗಳಾದ ಲಕ್ಮೇಶ್ವರ ನೆರವೇರಿಸಿದರು. ಉತ್ಸವದಲ್ಲಿ ದೇವಸ್ಥಾನದ ಅಧ್ಯಕ್ಷ ಮುಕ್ಕಾಟಿರ ಚಂಗಪ್ಪ ಹಾಗೂ ಆಡಳಿತ ಮಂಡಳಿಯವರು, ಊರಿನ ಮತ್ತು ನೆರೆಯ ಊರಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.