ಮುಳ್ಳೂರು, ಏ. 5: ಸಮಾಜದಲ್ಲಿ ಎಲ್ಲಾ ಸಮುದಾಯದವರು ಏಕತೆ ಮತ್ತು ಸಾಮರಸ್ಯದಿಂದ ಬದುಕು ನಡೆಸುವಂತೆ ಮಡಿಕೇರಿ ಶಾಸಕ ಡಾ. ಮಂತÀರ್ ಗೌಡ ಕರೆ ನೀಡಿದರು.
ಸಮಿಪದ ಗುಡುಗಳಲೆ ಜಾತ್ರಾ ಮೈದಾನದಲ್ಲಿರುವ ಬದ್ರಿಯಾ ಜುಮಾ ಮಸೀದಿಯ ಹಝ್ರುತ್ ಫಬೀರ್ ಷಾಹ್ವಲಿಯುಲ್ಲಾಹಿ ಉರೂಸ್ ವಾರ್ಷಿಕ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಮಾಜದಲ್ಲಿ ಎಲ್ಲಾರೂ ಬೇಧ ಭಾವ ಮಾಡದೆ ಬದುಕುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ದೇವರು ಒಬ್ಬರೆ, ನಾಮ ಹಲವು ಎಂಬುದನ್ನು ನಾವು ಅರಿತುಕೊಳ್ಳಬೇಕು. ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯ ಮಾಡಬೇಕೆ ಹೊರತು ಉಳಿದ ಸಮಯದಲ್ಲಿ ಎಲ್ಲರನ್ನೂ ಸಮಾನತೆಯಿಂದ ಕಾಣುವುದೆ ನಮ್ಮ ಧರ್ಮ ಎಂದರು.
ಕಾಂಗ್ರೆಸ್ ಮುಖಂಡ ಯಾಕೂಬ್ ಮಾತನಾಡಿ, ಗುಡುಗಳಲೆ ಜುಮ್ಮಾ ಮಸೀದಿಗೆ ಮತ್ತಷ್ಟು ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಮನವಿ ಮಾಡಿದರು. ಮಸೀದಿ ಅಧ್ಯಕ್ಷ ಮುಸ್ತಾಫ ಖಾದರ್, ಹಮೀದ್, ಮುಸ್ತಾಫ ಪ್ರಮುಖರಾದ ತೇಜಕುಮಾರ್, ಅಶೋಕ್, ಹರೀಶ್, ಮಹೇಶ್ ಮುಂತಾದವರು ಇದ್ದರು.