ಕೂಡಿಗೆ, ಏ. 5: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ದೊಡ್ಡತ್ತೂರಿನ ಎಸ್.ಆರ್. ಪುರುμÉೂೀತ್ತಮ್, ಉಪಾಧ್ಯಕ್ಷರಾಗಿ ಹೆಚ್. ಪುಟ್ಟೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಕಟ್ಟಡದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅವಿರೋಧ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಪುರುμÉೂೀತ್ತಮ್ ಮತ್ತು ಪದ್ಮ, ಉಪಾಧ್ಯಕ್ಷ ಸ್ಥಾನಕ್ಕೆ ಪುಟ್ಟೇಗೌಡ ಮತ್ತು ಕೆ.ಎಸ್. ಗಿರೀಶ್ ನಾಮಪತ್ರ ಸಲ್ಲಿಸಿದ್ದರು. ಪದ್ಮ ಮತ್ತು ಗಿರೀಶ್ ತಮ್ಮ ನಾಮಪತ್ರಗಳನ್ನು ವಾಪಸ್ ಪಡೆದ ಹಿನ್ನೆಲೆ ಅಧ್ಯಕ್ಷರಾಗಿ ಎಸ್.ಆರ್. ಪುರುμÉೂೀತ್ತಮ್, ಉಪಾಧ್ಯಕ್ಷರಾಗಿ ಪುಟ್ಟೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಸೋಮವಾರಪೇಟೆ ತಾಲೂಕು ಸಹಕಾರ ಇಲಾಖೆಯ ನಿರೀಕ್ಷಕ ಪಿ.ಬಿ. ಮೋಹನ್ ಕುಮಾರ್ ಘೋಷಿಸಿದರು.
ಈ ಸಂದರ್ಭ ಸಂಘದ ನಿರ್ದೇಶಕರಾದ ಶಿವಾನಂದ ರೈ, ಮಂಜುನಾಥ್ ಕೆ., ರುದ್ರಪ್ಪ, ಸಲೀನಾ, ರಂಜಿತ್ ಎ.ಜೆ., ಪದ್ಮ, ಗೌರಮ್ಮ, ಸುರೇಶ್ ಕುಮಾರ್ ಡಿ.ಟಿ., ಬಿಂದಮ್ಮ, ರಮೇಶ್, ಗಿರೀಶ್, ಜಿಲ್ಲಾ ಸಹಕಾರ ಯೂನಿಯನ್ ಬ್ಯಾಂಕ್‍ನ ನಿರ್ದೇಶಕ ಎಸ್.ಆರ್. ಸುನಿಲ್ ರಾವ್, ಗ್ರಾಮ ಪ್ರಮುಖರಾದ ರಾಮಣ್ಣ, ಪಾಪಣ್ಣ, ದಿನೇಶ್, ಸುನಿಲ್, ಚೇತನ್, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್. ರಾಮೇಗೌಡ, ಸಹಾಯಕ ಸುನಿಲ್ ಕುಮಾರ್ ಮತ್ತಿತರರು ಹಾಜರಿದ್ದರು.
ಆಯ್ಕೆ ಪ್ರಕ್ರಿಯೆ ನಡೆದ ನಂತರ ಗ್ರಾಮಸ್ಥರು, ಸದಸ್ಯರು ವಿಜಯೋತ್ಸವ ಆಚರಿಸಿದರು.