ಕಣಿವೆ, ಏ. 5: ಡಾ. ಶಿವಕುಮಾರ ಸ್ವಾಮೀಜಿಯವರ 119ನೇ ಜಯಂತಿ ಕಾರ್ಯಕ್ರಮವನ್ನು ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯ ಡಾ. ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಗುಡ್ಡೆಹೊಸೂರು ಹಾಗೂ ಬಳ್ಳೂರು ವೀರಶೈವ ಸಮಾಜದ ವತಿಯಿಂದ ಆಚರಿಸಲಾಯಿತು.

ಶ್ರೀಗಳ ಭಾವಚಿತ್ರಕ್ಕೆ ಪೂಜಿಸಿ ಮಹಾಮಂಗಳಾರತಿ ನೆರವೇರಿಸಲಾಯಿತು. ಬಳಿಕ ನೆರೆದ ಭಕ್ತರಿಗೆ ಸಿಹಿ ವಿತರಿಸಲಾಯಿತು. ಈ ಸಂದರ್ಭ ಗುಡ್ಡೆಹೊಸೂರು ವೀರಶೈವ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ, ಕಾರ್ಯದರ್ಶಿ ದ್ರಾಕ್ಷಾಯಿಣಿ, ಸಿದ್ದಗಂಗಾ ಭಕ್ತ ಮಂಡಳಿ ಅಧ್ಯಕ್ಷ ಕೆ.ಎಸ್.ಮೂರ್ತಿ, ಪ್ರಮುಖರಾದ ಶುಭಶೇಖರ, ಉದ್ಯಮಿ ಮೌರ್ಯ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸಾಗರ್, ಸಹಕಾರ ಸಂಘದ ಉಪಾಧ್ಯಕ್ಷ ಕಾಶಿ, ಹುಲುಸೆ ವೀರಶೈವ ಸಮಾಜದ ಅಧ್ಯಕ್ಷ ಶಿವನಂಜಪ್ಪ, ಕವಿತಾ, ವೈಶಾಲಿ, ಚಿದಾನಂದ, ಗಣೇಶ, ಚಿಮ್ಮಣ್ಣ, ಶಿಕ್ಷಕ ಪುಟ್ಟರಾಜು, ಸಂಪತ್, ಮೊದಲಾದವರು ಇದ್ದರು.