ಮಡಿಕೇರಿ, ಏ. 4: ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ಆಯೋಜಿಸಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ'ಯಲ್ಲಿ ತಾ. 4 ರಂದು ನಡೆದ ಪಂದ್ಯಾವಳಿಯಲ್ಲಿ 13 ತಂಡಗಳು ಗೆಲುವು ಸಾಧಿಸಿದವು.
ಮೈದಾನ 1 ರಲ್ಲಿ ಪೇರಿಯಂಡ ಮತ್ತು ಕಲ್ಲೇಂಗಡ (ನಾಪೆÇೀಕ್ಲು) ನಡುವಿನ ಪಂದ್ಯದಲ್ಲಿ 3 ವಿಕೆಟ್ ನಷ್ಟಕ್ಕೆ 44 ರನ್ ಗಳಿಸಿ ಕಲ್ಲೇಂಗಡ ಜಯ ಸಾಧಿಸಿತು. ಪೇರಿಯಂಡ ತಂಡ 1 ವಿಕೆಟ್ ನಷ್ಟಕ್ಕೆ 41 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಪೂಳಂಡ ಮತ್ತು ಕಾಳಿಮಾಡ ನಡುವಿನ ಪಂದ್ಯದಲ್ಲಿ ಕಾಳಿಮಾಡ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ 29 ರನ್ ಗಳಿಸಿ ಗೆಲುವು ಸಾಧಿಸಿತು. ಪೂಳಂಡ ತಂಡ 6 ವಿಕೆಟ್ ಕಳೆದುಕೊಂಡು 28 ರನ್ ಗಳಿಸಿ ಸೋಲು ಅನುಭವಿಸಿತು.
ಸಿದ್ದಂಡ ಮತ್ತು ನಂದೇಟಿರ ನಡುವಿನ ಪಂದ್ಯದಲ್ಲಿ 3 ವಿಕೆಟ್ ನಷ್ಟಕ್ಕೆ 61 ರನ್ ಗಳಿಸಿ ಸಿದ್ದಂಡ ಗೆಲುವು ಸಾಧಿಸಿತು. ನಂದೇಟಿರ 3 ವಿಕೆಟ್ ನಷ್ಟಕ್ಕೆ 60 ರನ್ ಸೇರಿಸಿ ಸೋಲೊಪ್ಪಿಕೊಂಡಿತು.
ಚಮ್ಮಟ್ಟಿರ ಮತ್ತು ಅಲ್ಮಚಂಡ ನಡುವಿನ ಪಂದ್ಯದಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 118 ರನ್ ಗಳಿಸಿ ಅಲ್ಮಚಂಡ ಗೆಲುವು ಸಾಧಿಸಿತು. ಚಮ್ಮಟ್ಟಿರ ತಂಡ 5 ವಿಕೆಟ್ ನಷ್ಟಕ್ಕೆ 54 ರನ್ ಗಳಿಸಿ ಸೋಲು ಕಂಡಿತು.
ತೆನ್ನಿರ ಮತ್ತು ಮಳವಂಡ ನಡುವಿನ ಪಂದ್ಯದಲ್ಲಿ ತೆನ್ನಿರ ತಂಡ 6 ವಿಕೆಟ್ ನಷ್ಟಕ್ಕೆ 78 ರನ್ ಗಳಿಸಿ ಗೆಲುವು ಸಾಧಿಸಿತು. ಮಳವಂಡ 4 ವಿಕೆಟ್ ನಷ್ಟಕ್ಕೆ 71 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ನಂಬಿಯಪಂಡ ಮತ್ತು ಮಾಚಿಮಂಡ ನಡುವಿನ ಪಂದ್ಯದಲ್ಲಿ ಮಾಚಿಮಂಡ ತಂಡ 6 ವಿಕೆಟ್ ನಷ್ಟಕ್ಕೆ 79 ರನ್ ಗಳಿಸಿ ವಿಜಯ ಸಾಧಿಸಿತು. ನಂಬಿಯಪಂಡ 4 ವಿಕೆಟ್ ನಷ್ಟಕ್ಕೆ 51 ರನ್ ಗಳಿಸಿ ಸೋಲು ಅನುಭವಿಸಿತು.
ಮಂಡುವಂಡ ಮತ್ತು ಕೀಕಣಮಾಡ ನಡುವಿನ ಪಂದ್ಯದಲ್ಲಿ 4 ವಿಕೆಟ್ ನಷ್ಟಕ್ಕೆ 67 ರನ್ ಗಳಿಸಿದ ಮಂಡುವಂಡ ತಂಡ ಗೆಲುವು ದಾಖಲಿಸಿತು. ಕೀಕಣಮಾಡ 9 ವಿಕೆಟ್ ನಷ್ಟಕ್ಕೆ 5 ರನ್ ಗಳನ್ನಷ್ಟೇ ಸೇರಿಸಿ ಸೋಲೊಪ್ಪಿಕೊಂಡಿತು.
ಮೈದಾನ 2 ರಲ್ಲಿ ಚಾರಿಮಂಡ ಮತ್ತು ಚಪ್ಪಂಡ ನಡುವಿನ ಪಂದ್ಯದಲ್ಲಿ 2 ವಿಕೆಟ್ ನಷ್ಟಕ್ಕೆ 76 ರನ್ ಸೇರಿಸಿ ಚಾರಿಮಂಡ ಜಯ ಸಾಧಿಸಿತು. ಚಪ್ಪಂಡ ತಂಡ 5 ವಿಕೆಟ್ ನಷ್ಟಕ್ಕೆ 59 ರನ್ ಗಳಿಸಿ ಸೋಲು ಅನುಭವಿಸಿತು.
ಪೆÇೀರಂಗಡ ಮತ್ತು ನಾಪಂಡ ನಡುವಿನ ಪಂದ್ಯದಲ್ಲಿ ನಾಪಂಡ ತಂಡ 3 ವಿಕೆಟ್ ನಷ್ಟಕ್ಕೆ 68 ರನ್ ಗಳಿಸಿ ಗೆಲುವು ದಾಖಲಿಸಿತು. ಪೆÇೀರಂಗಡ 3 ವಿಕೆಟ್ ನಷ್ಟಕ್ಕೆ 59 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಬಲ್ಲಡಿಚಂಡ ಮತ್ತು ಸಾದೆರ ನಡುವಿನ ಪಂದ್ಯದಲ್ಲಿ ಬಲ್ಲಡಿಚಂಡ 3 ವಿಕೆಟ್ ನಷ್ಟಕ್ಕೆ 65 ರನ್ ಗಳಿಸಿ ವಿಜಯ ಸಾಧಿಸಿತು. ಸಾದೆರ 4 ವಿಕೆಟ್ ನಷ್ಟಕ್ಕೆ 57 ರನ್ ಗಳಿಸಿ ಸೋಲು ಅನುಭವಿಸಿತು.
ಐಮುಡಿಯಂಡ ಮತ್ತು ಬಲ್ಲಿಮಾಡ ನಡುವಿನ ಪಂದ್ಯದಲ್ಲಿ 1 ವಿಕೆಟ್ ನಷ್ಟಕ್ಕೆ 88 ರನ್ ದಾಖಲಿಸಿ ಬಲ್ಲಿಮಾಡ ಗೆಲುವು ಸಾಧಿಸಿತು. ಐಮುಡಿಯಂಡ 1 ವಿಕೆಟ್ ನಷ್ಟಕ್ಕೆ 75 ರನ್ ಗಳಿಸಿ ಸೋಲು ಅನುಭವಿಸಿತು.
ತಾತಪಂಡ ಮತ್ತು ಐಚಂಡ (ದೇವಣಗೇರಿ) ನಡುವಿನ ಪಂದ್ಯದಲ್ಲಿ 5 ವಿಕೆಟ್ ನಷ್ಟಕ್ಕೆ 52 ರನ್ ಗಳನ್ನು ಗಳಿಸಿ ಐಚಂಡ ಗೆಲುವು ಸಾಧಿಸಿತು. ತಾತಪಂಡ 3 ವಿಕೆಟ್ ನಷ್ಟಕ್ಕೆ 41 ರನ್ ಸೇರಿಸಿ ಸೋಲು ಕಂಡಿತು.
ಚೇರಂಡ ಮತ್ತು ಮಲ್ಲಂಡ (ಬೇಗೂರು) ನಡುವಿನ ಪಂದ್ಯದಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ಚೇರಂಡ ತಂಡ 53 ರನ್ ದಾಖಲಿಸಿ ಗೆಲುವು ಸಾಧಿಸಿತು. ಮಲ್ಲಂಡ 5 ವಿಕೆಟ್ ನಷ್ಟಕ್ಕೆ 51 ರನ್ ದಾಖಲಿಸಿತು.