ಕಣಿವೆ, ಏ. 4: ಕುಶಾಲನಗರ ತಾಲೂಕು ರಂಗಸಮುದ್ರ ಗ್ರಾಮದ ಜೋಡಿ ಬಸವೇಶ್ವರ ದೇವರ ವಾರ್ಷಿಕ ಪೂಜೋತ್ಸವ ತಾ. 6, 7 ರಂದು ನಡೆಯಲಿದೆ.

ತಾ. 6 ರಂದು ಬೆಳಿಗ್ಗೆ 7.30 ಗಂಟೆಗೆ ಗಣಪತಿ ಹೋಮ, ಸಂಜೆ 5 ಗಂಟೆಯಿಂದ ಉತ್ಸವ ಆರಂಭ, 6 ಗಂಟೆಗೆ ದೇವರಿಗೆ ಅಲಂಕಾರ ಪೂಜೆ, 7 ಗಂಟೆಗೆ ಗ್ರಾಮದ ಕಲ್ಲೇಗೌಡರ ಜಾನಕಿ ಮನೆಯಿಂದ ದೇವರ ಕಲಶ ತರುವುದು, ರಾತ್ರಿ 8 ಗಂಟೆಗೆ ಗ್ರಾಮದ ಜೆ.ಜಿ. ಚಂದ್ರಶೇಖರ್ ಅವರ ಮನೆಯಿಂದ ಭಂಡಾರ ತರುವುದು. ರಾತ್ರಿ 9 ಗಂಟೆಗೆ ಕುಂಭನ ಬೆಳ್ಯಪ್ಪ ಕುಟುಂಬಸ್ಥರಿಂದ ಪೂಜಾ ಪ್ರಸಾದ ಅನ್ನದಾನ. ರಾತ್ರಿ 9.30 ಗಂಟೆಗೆ ದೇವರ ಗಂಗಾಸ್ನಾನಕ್ಕೆ ತೆರಳಲು ದೇವರ ಅಪ್ಪಣೆ ಪಡೆಯುವುದು, ರಾತ್ರಿ 10 ಗಂಟೆಗೆ ಮಹಾಮಂಗಳಾರತಿ, 11 ಗಂಟೆಗೆ ದೇವರ ಪಲ್ಲಕ್ಕಿ ಅಲಂಕಾರ.

ಮುಂಜಾನೆ 4 ಗಂಟೆಯಿಂದ ದೇವಾಲಯದ ಆವರಣದಲ್ಲಿ ಕೆಂಡಕೊಂಡದ ಪೂಜೆ ಆರಂಭ, ಮುಂಜಾನೆ 5 ಗಂಟೆಗೆ ದೇವರಿಗೆ ಅಭಿμÉೀಕ ಪೂಜೆ, ಬೆಳಗ್ಗೆ 9 ಗಂಟೆಗೆ ವಾದ್ಯ ಮೇಳ, ಅಲಂಕೃತ ದೇವರ ಪಲ್ಲಕ್ಕಿ ಉತ್ಸವದೊಂದಿಗೆ ಗಂಗಾ ಸ್ನಾನಕ್ಕೆ ಹೊರಡುವುದು. ಬೆಳಿಗ್ಗೆ 10 ಗಂಟೆಗೆ ಚಿಕ್ಲಿಹೊಳೆ ಹಾಗೂ ಕಾವೇರಿ ನದಿಯ ಸಂಗಮದಲ್ಲಿ ಗಂಗಾಸ್ನಾನ ಹಾಗೂ ಗಂಗಾಪೂಜೆ. ಪೂರ್ವಾಹ್ನ 11 ಗಂಟೆಗೆ ಪಲ್ಲಕ್ಕಿ ಮೆರವಣಿಗೆ, ಮಧ್ಯಾಹ್ನ 1 ಗಂಟೆಯಿಂದ ಕೆಂಡಕೊಂಡ ಪೂಜೆ. ಕೊಂಡ ಹಾಯುವುದು. 1.45 ಗಂಟೆಗೆ ಮಹಾಮಂಗಳಾರತಿ ಹಾಗೂ ಭಂಡಾರ ಹಾಕುವುದು, 2 ಗಂಟೆಗೆ ಭಕ್ತಾದಿಗಳಿಗೆ ಅನ್ನದಾನ ನಡೆಯಲಿದೆ.