ಸುಂಟಿಕೊಪ್ಪ, ಏ. 3: ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದಲ್ಲಿ ಪವಿತ್ರ ಗುರುವಾರದ ಸಂಜೆ ‘ಕಡೆಯ ಭೋಜನ’ ವಿಶೇಷ ಬಲಿಪೂಜೆಯನ್ನು ನಡೆಸಲಾಯಿತು. ಪ್ರಾರ್ಥನಾ ಕೂಟವನ್ನು ಬೆಂಗಳೂರಿನ ಧರ್ಮಕೇಂದ್ರದ ಪ್ರೇಮ್‍ಕುಮಾರ್ ಹಾಗೂ ದೇವಾಲಯದ ಧರ್ಮಗುರುಗಳಾದ ಫಾದರ್ ವಿಜಯಕುಮಾರ್ ಅವರು ನೆರವೇರಿಸಿದರು.

ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಕ್ರೈಸ್ತ ಬಾಂಧÀವರು ಶ್ರದ್ಧಾಭಕ್ತಿಯಿಂದ ಪ್ರಾರ್ಥನಾ ಕೂಟದಲ್ಲಿ ಪಾಲ್ಗೊಂಡಿದ್ದರು.

ಪವಿತ್ರ ಗುರುವಾರ ಕಡೆಯ ಭೋಜನದ ಅಂಗವಾಗಿ ದೇವಾಲಯದಲ್ಲಿ ದಿವ್ಯ ಬಲಿಪೂಜೆ ಹಾಗೂ ಪ್ರಭುಕ್ರಿಸ್ತರು ತಾವು ಮರಣಹೊಂದುವ ಮುನ್ನಾದಿನ ತಮ್ಮ ಶಿಷ್ಯರೊಂದಿಗೆ ಕಡೆಯ ಭೋಜನಕ್ಕೂ ಮುನ್ನ ಶಿಷ್ಯರ ಪಾದಗಳನ್ನು ತೊಳೆದು ಕಡೆಯ ಭೋಜನವನ್ನು ಸವಿದಿದ್ದ ನೆನಪಿನ ಅಂಗವಾಗಿ ದೇವಾಲಯದಲ್ಲಿ ಬೆಂಗಳೂರಿನ ಧರ್ಮಕೇಂದ್ರದ ಪ್ರೇಮ್‍ಕುಮಾರ್ ಹಾಗೂ ಧರ್ಮಗುರುಗಳಾದ ರೆ.ಫಾ. ವಿಜಯಕುಮಾರ್ ಅವರು ದೇವಾಲಯದಲ್ಲಿರುವ ಹಿರಿಯ ಕ್ರೈಸ್ತ ಬಾಂಧÀವರ ಪಾದಗಳನ್ನು ತೊಳೆಯುವ ಮೂಲಕ ಆಚರಣೆಯನ್ನು ನೆರವೇರಿಸಿದರು. ನಂತರ ಕ್ರೈಸ್ತ ಬಾಂಧವರು ಮಧ್ಯರಾತ್ರಿಯವರೆಗೆ ವಿಶೇಷ ಪ್ರಾರ್ಥನೆ ಧ್ಯಾನಗಳಲ್ಲಿ ತೊಡಗಿಸಿಕೊಂಡಿದ್ದರು.