ನಾಪೋಕ್ಲು, ಏ. ೨: ಸಂಪಾಜೆ ಗ್ರಾಮದಲ್ಲಿ ವರ್ಷಂಪ್ರತಿ ನಡೆಯುವ ಇತಿಹಾಸ ಪ್ರಸಿದ್ಧ ಕಲ್ಲುಗುಂಡಿ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ ಹಾಗೂ ಪಂಜುರ್ಲಿ, ಕಲ್ಲುರ್ಟಿ ಹಾಗೂ ಗುಳಿಗ ದೈವಗಳಿಗೆ ಸಮ್ಮಾನ ಕಾರ್ಯಕ್ರಮ ವಿಜೃಂಭಣೆಯಿAದ ನಡೆಯಿತು.

ಗೊನೆ ಕಡಿಯುವುದು, ದೈವಸ್ಥಾನದಲ್ಲಿ ಗಣಹೋಮ, ಶ್ರೀ ಮಹಾವಿಷ್ಣು ಮೂರ್ತಿ ದೈವಸ್ಥಾನದಿಂದ ಭಂಡಾರ ಹೊರಡುವುದು, ಮೇಲೇರಿಗೆ ಅಗ್ನಿಸ್ಪರ್ಶ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಕೋಲ ಆರಂಭಗೊAಡಿತು.ಅರAತೋಡು ಸ್ವರಲಯ ಸಿಂಗಾರಿ ಮೇಳ ತಂಡದಿAದ ಚಂಡೆ ವಾದ್ಯ ನಡೆಯಿತು. ರಾತ್ರಿ ಶ್ರೀ ದೈವದ ಕುಲ್ಪಾಟ ನಡೆಯಿತು. ಭಾನುವಾರ ಸಹಸ್ತಾçರು ಭಕ್ತರ ಸಮ್ಮುಖದಲ್ಲಿ ಮಹಾವಿಷ್ಣುಮೂರ್ತಿ ದೈವದ ಅಗ್ನಿ ಪ್ರವೇಶ ನಡೆಯಿತು. ಬಳಿಕ ಪ್ರಸಾದ ವಿತರಣೆ ನೆರವೇರಿತು. ಪೂರ್ವಾಹ್ನ ಮಾರಿಕಳ ಪ್ರವೇಶ ಮಾರಿಕಳದಿಂದ ಬಂದ ನಂತರ ಹರಕೆಯ ಸುರುಗಿಗಳನ್ನು ಒಪ್ಪಿಸುವುದು, ಪ್ರಸಾದ ವಿತರಣೆ ನಡೆಯಿತು.

ಈ ಸಂದರ್ಭದಲ್ಲಿ ದೈವಸ್ಥಾನದ ಗೌರವಾಧ್ಯಕ್ಷ ರಾಜರಾಮ ಕೀಲಾರು, ಅದೀಪಕೃಷ್ಣ, ಮಹಾವಿಷ್ಣು ದೈವಸ್ಥಾನದ ಅಧ್ಯಕ್ಷ ಕೆ.ಆರ್. ಜಗದೀಶ್ ರೈ, ಮುಕ್ತೇಸರ ಕರುಣಾಕರ ಕೆ.ಎಸ್., ಕಾರ್ಯದರ್ಶಿ ಕೆ.ವಿ. ಮಂಜುನಾಥ್, ಕೋಶಾಧಿಕಾರಿ ಬಿ.ಆರ್. ಪದ್ಮಯ್ಯ, ಗೌರವ ಸಲಹೆಗಾರರಾದ ಶ್ರೀಧರ ಮಾದೆಪಾಲು, ಉದಯ ಶಂಕರ ಕುಕ್ಕೆಟಿ, ಜಯಾನಂದ ಸಂಪಾದಿ, ತೀಯ ಸಮಾಜದ ಅಧ್ಯಕ್ಷ ಶ್ರೀಧರ ಕಡೆಪಾಲ, ವಿ.ವಿ. ಬಾಲನ್, ದೈವಸ್ಥಾನದ ಪ್ರಧಾನ ಪೂಜಾರಿ ನಾರಾಯಣ ಮಣಿಯಾಣಿ, ಉಪ ಪೂಜಾರಿ ಕುಂಜಿರಾಮನ್ ಮಣಿಯಾಣಿ, ಕಚೇರಿ ನಿರ್ವಾಹಕ ಬಿ. ಶಿವರಾಮ ಹಾಗೂ ಆಡಳಿತ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ತೀಯ ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು, ಭಕ್ತರು ಉಪಸ್ಥಿತರಿದ್ದರು.