ಚೆಟ್ಟಳ್ಳಿ, ಏ. ೧: ಕೊಡಗಿನ ಪ್ರತಿಭೆಗಳು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಗುರುತು ಮೂಡಿಸುತ್ತಿರುವ ನಡುವೆ ಅಜ್ಜಿಕುಟ್ಟೀರ ಪ್ರಥ್ವಿ ಸುಬ್ಬಯ್ಯ ಅಭಿನಯದ “ಗ್ಯಾಂಗ್ಸ್ oಈ Uಏ:” ಕನ್ನಡ ಸಿನಿಮಾ ವಿಶೇಷ ಗಮನ ಸೆಳೆಯಲು ಸಿದ್ಧಗೊಳ್ಳುತ್ತಿದೆ.
ಎರಡು ಕುಟುಂಬಗಳ ನಡುವಿನ ಆಸ್ತಿ ವಿವಾದ, ಅದರಿಂದ ಹುಟ್ಟುವ ವೈಷಮ್ಯ, ಕುಟುಂಬ ಸಂಬAಧಗಳು ಮತ್ತು ಪ್ರತೀಕಾರದ ಸುತ್ತ ಹೆಣೆಯಲ್ಪಟ್ಟ ಈ ಕಥೆ ಪ್ರೇಕ್ಷಕರಿಗೆ ರೋಚಕ ಅನುಭವ ನೀಡಲಿದೆ.
ಚಿತ್ರದಲ್ಲಿ ಪ್ರಥ್ವಿ ಸುಬ್ಬಯ್ಯ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಊರಿನ ಶಾನ್‌ಭೋಗರ ಜೊತೆಗೂಡಿ ಪ್ರತೀಕಾರ ಸಾಧಿಸುವ ಗಂಭೀರ ಹಾಗೂ ಭಾವನಾತ್ಮಕ ಪಾತ್ರದಲ್ಲಿ ಮೆಚ್ಚುಗೆ ಪಡೆಯುವ ನಿರೀಕ್ಷೆಯಿದೆ. ಉತ್ತರ ಕನ್ನಡದ ಶೈಲಿಯೊಂದಿಗೆ ಅವರ ಅಭಿನಯ ಚಿತ್ರಕ್ಕೆ ವಿಶೇಷ ಸೊಗಡನ್ನು ನೀಡಲಿದೆ.
ಡೆಡ್ಲಿ ಸೋಮ, ಮಾದೇಶ ಹಾಗೂ ದಶಮುಖ ಹೀಗೆ ಬಹುತೇಕ ಸ್ಟಾರ್ ನಟರ ಚಿತ್ರವನ್ನು ನಿರ್ದೇಶಿಸಿರುವ ಹಿರಿಯ ನಿರ್ದೇಶಕ ಹಾಗೂ ನಿರ್ಮಾಪಕ ರವಿ ಶಿವತ್ಸ ಅವರ ಮಾರ್ಗದರ್ಶನ ದಲ್ಲಿ, ಖ್ಯಾತ ಕಥೆಗಾರ ಎಂ.ಎಸ್. ರಮೇಶ್ ಅವರ ಕಥೆ-ಸಂಭಾಷಣೆಯೊAದಿಗೆ ಹಾಗು ಹಲವು ನುರಿತ ತಂಡ ದೊಂದಿಗೆ ಡೆಡ್ಲಿ ಆರ್ಟ್ಸ್ ಲಾಂಚನದಡಿ ಸಿನಿಮಾ ವಿಭಿನ್ನವಾಗಿ ಮೂಡಿಬರಲಿದೆ ಗ್ಯಾಂಗ್ ವಾರ್, ಕುಟುಂಬ ಭಾವನೆಗಳು ಹಾಗೂ ಸ್ಥಳೀಯ ಸಂಸ್ಕೃತಿಯ ಸಂಯೋಜನೆ ಚಿತ್ರಕ್ಕೆ ಹೊಸ ಆಯಾಮ ನೀಡುವ ಪ್ರಯತ್ನವಾಗಿದೆ. ಚಿತ್ರ ಇದೇ ಏಪ್ರಿಲ್ ೧೦ರಂದು ಕರ್ನಾಟಕದಾದ್ಯಂತ ಬಿಡುಗಡೆಯಾಗಲಿದ್ದು, ಪ್ರೇಕ್ಷಕರಲ್ಲಿ ಈಗಾಗಲೇ ಕುತೂಹಲ ಮೂಡಿಸಿದೆ.
ಪ್ರಥ್ವಿ ಸುಬ್ಬಯ್ಯ ಅವರು ಕೇವಲ ನಟನಷ್ಟೇ ಅಲ್ಲ, ಸಮಾಜಸೇವೆಯಲ್ಲಿಯೂ ಗುರುತಿಸಿಕೊಂಡಿದ್ದಾರೆ. ದಕ್ಷಿಣ ಕೊಡಗಿನ ಕೋಣಗೇರಿ ಗ್ರಾಮದ ಹುದಿಕೇರಿ ಮೂಲದ ಅವರು, ಕೊಡವ ರೈಡರ್ಸ್ ಕ್ಲಬ್ ಸಂಸ್ಥಾಪಕರಾಗಿದ್ದಾರೆ. ಕನ್ನಡ ಮತ್ತು ಕೊಡವ ಚಿತ್ರರಂಗದಲ್ಲಿ ತಮ್ಮದೇ ಆದ ಪದಾರ್ಪಣೆ ಮಾಡಿರುವ ಅವರು, ನಾಗಿಣಿ-೨ ಧಾರಾವಾಹಿಯಲ್ಲಿ ಮೂರು ವರ್ಷಗಳ ಕಾಲ ಅಭಿನಯಿಸಿದ್ದು, ತ್ರಿವಿಕ್ರಮ ಮತ್ತು ಕಬ್ಜ ಸಿನಿಮಾಗಳಲ್ಲಿಯೂ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ.
ಇದೀಗ ಅವರ ನಟನೆಯ “ಚೀತಾ” ಸಿನಿಮಾ ಕೂಡ ತೆರೆಕಾಣಲು ಸಜ್ಜಾಗಿರುವುದು, ಅವರ ಸಿನಿ ಪ್ರಯಾಣದಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಲಿದೆ.
- ಪುತ್ತರಿರ ಕರುಣ್ ಕಾಳಯ್ಯ