ಕೂಡಿಗೆ, ಮಾ. ೨೯: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಿವೆ-ಮಸಗೋಡು ಮುಖ್ಯ ರಸ್ತೆಯ ಸೀಗೆಹೊಸೂರು ಸಮೀಪದ ಮುಖ್ಯ ರಸ್ತೆಗೆ ಹೊಂದಿಕೊAಡಿರುವ ಕಕ್ಕೆ ಹೊಳೆ ಸೇತುವೆಯ ಒಂದು ಬದಿಯಲ್ಲಿ ಅನೇಕ ಕಡೆಗಳಲ್ಲಿ ಬಿರುಕು ಉಂಟಾಗಿರುವ ಹಿನ್ನೆಲೆಯಲ್ಲಿ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಿ ಲೋಕೋಪಯೋಗಿ ಇಲಾಖೆಯ ವತಿಯಿಂದ ನಾಮಫಲಕ ಅಳವಡಿಕೆ ಮಾಡಲಾಗಿದೆ. ಸೇತುವೆಯ ಒಂದು ಭಾಗದಲ್ಲಿ ಬಿರುಕು ಬಿಟ್ಟಿರುವ ಕಾರಣ ಗ್ರಾಮಸ್ಥರು ಸೋಮವಾರಪೇಟೆಯ ಲೋಕೋಪಯೋಗಿ ಕಾರ್ಯಪಾಲಕ ಅಭಿಯಂತರರಿಗೆ ದುರಸ್ತಿಗೆ ಸಂಬAಧಿಸಿದAತೆ ಮನವಿ ಸಲ್ಲಿಸಿದ್ದರು.
ಈಗಾಗಲೇ ಸೇತುವೆಗೆ ಸಂಬAಧಿಸಿದ ಕಾಮಗಾರಿಯ ಕ್ರಿಯಾ ಯೋಜನೆ ಪ್ರಕ್ರಿಯೆ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಇಲಾಖೆಯ ನಿಯಮಾನುಸಾರ ಕಾಮಗಾರಿಯನ್ನು ಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಅರ್ಬಜ಼್ ತಿಳಿಸಿದ್ದಾರೆ.